Karwa Chauth 2021: ಪತಿಯ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಮಾಡಲಾಗುವ ಕರ್ವಾ ಚೌತ್ ಉಪವಾಸವು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಈ ಉಪವಾಸವನ್ನು ಸರಿಯಾಗಿ ಮತ್ತು ಪೂರ್ಣ ಆಚರಣೆಗಳೊಂದಿಗೆ ನಿರ್ವಹಿಸಿದರೆ, ಇಷ್ಟಾರ್ಥ ಸಿದ್ಧಿ ಆಗುತ್ತದೆ ಎಂಬ ನಂಬಿಕೆ ಇದೆ. ಈ ಉಪವಾಸವನ್ನು ಈ ವರ್ಷದ 24 ಅಕ್ಟೋಬರ್ 2021 ರಂದು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿಯಂದು ಆಚರಿಸಲಾಗುತ್ತದೆ. ಈ ಉಪವಾಸವು ಸೂರ್ಯೋದಯಕ್ಕೆ ಮುಂಚೆ ಆರಂಭವಾಗುತ್ತದೆ ಮತ್ತು ರಾತ್ರಿಯಲ್ಲಿ ಚಂದ್ರನಿಗೆ ಅರ್ಧ್ಯವನ್ನು ಅರ್ಪಿಸುವುದರೊಂದಿಗೆ ಕೊನೆಗೊಳ್ಳುತ್ತದೆ.


COMMERCIAL BREAK
SCROLL TO CONTINUE READING

ಭಾನುವಾರ ಅತ್ಯಂತ ಶುಭಕರವಾದ ಕರ್ವಾ ಚೌತ್:
ಈ ಬಾರಿ ಕರ್ವಾ ಚೌತ್ (Karwa Chauth 2021) 24 ಅಕ್ಟೋಬರ್ 2021, ಭಾನುವಾರ ಬೀಳುತ್ತಿದೆ. ಭಾನುವಾರ ಮತ್ತು ಮಂಗಳವಾರದ ಕರ್ವಾ ಚೌತ್ ಅನ್ನು ಬಹಳ ಶುಭಕರ ಎಂದು ಪರಿಗಣಿಸಲಾಗಿದೆ. ವಾಸ್ತವವಾಗಿ, ಭಾನುವಾರ ಮತ್ತು ಮಂಗಳವಾರದಂದು ಬರುವ ಎಲ್ಲಾ ಚತುರ್ಥಿಯನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮಂಗಳವಾರದ ಚತುರ್ಥಿಯಿಂದ ಗಣೇಶ ಚತುರ್ಥಿ ಉಪವಾಸ ಆರಂಭವಾಗಿದೆ. ಇಂತಹ ಸನ್ನಿವೇಶದಲ್ಲಿ, ಈ ಕರ್ವಾ ಚೌತ್ ನಲ್ಲಿ, ನೀವು ಸಂಪೂರ್ಣ ನಿಯಮಗಳು ಮತ್ತು ನಿಬಂಧನೆಗಳೊಂದಿಗೆ ಉಪವಾಸ ಮಾಡಿದರೆ, ಪೂರ್ಣ ಫಲ ಸಿಗಲಿದೆ. ನಿಮ್ಮ ಮನೋಕಾಮನೆಗಳೆಲ್ಲವೂ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- ದೀಪಾವಳಿಯಂದು ರೂಪುಗೊಳ್ಳಲಿದೆ ಗ್ರಹಗಳ ಅಪರೂಪದ ಸಂಯೋಗ ? ಯಾರಿಗೆ ಶುಭ ಯಾರಿಗೆ ಅಶುಭ ತಿಳಿಯಿರಿ


ಕರ್ವಾ ಚೌತ್: ಪೂಜೆಗೆ ಶುಭ ಸಮಯ
ಚತುರ್ಥಿ ತಿಥಿ 24 ಅಕ್ಟೋಬರ್ 2021 ರಂದು ಬೆಳಿಗ್ಗೆ 03:01 ಕ್ಕೆ ಆರಂಭವಾಗುತ್ತದೆ ಮತ್ತು 25 ನೇ ಅಕ್ಟೋಬರ್ ಬೆಳಿಗ್ಗೆ 05:43 ಕ್ಕೆ ಕೊನೆಗೊಳ್ಳುತ್ತದೆ. ಕರ್ವಾ ಚೌತ್ ಪೂಜೆಗೆ (Karwa Chauth Puja) ಮಂಗಳಕರ ಸಮಯವೆಂದರೆ ಅಕ್ಟೋಬರ್ 24, 2021 ರಂದು ಸಂಜೆ 06:55 ರಿಂದ 08:51 ರವರೆಗೆ. ಅದೇ ಸಮಯದಲ್ಲಿ, ಚಂದ್ರೋದಯವು ರಾತ್ರಿ 08:11 ಕ್ಕೆ ಇರುತ್ತದೆ. 


ಇದನ್ನೂ ಓದಿ- Diwali 2021: ನಿಮ್ಮ ಮನೆಯಲ್ಲಿಯೂ ಈ ಅಶುಭ ವಸ್ತುಗಳಿದ್ದರೆ, ದೀಪಾವಳಿಗೂ ಮುನ್ನ ಹೊರಹಾಕಿ, ಇಲ್ಲವಾದರೆ ಲಕ್ಷ್ಮೀಯ ಅವಕೃಪೆಗೆ ಕಾರಣವಾಗಬಹುದು


ಕರ್ವಾ ಚೌತ್ ಆಚರಣೆ ವಿಧಾನ:
ಈ ದಿನ ಮದುವೆಯಾದ ಮಹಿಳೆಯರು ಸೂರ್ಯೋದಯಕ್ಕೆ ಮುಂಚೆ ಎದ್ದು ಸ್ನಾನ ಮಾಡಿ ಅತ್ತೆ ನೀಡಿದ ಸರಗಿಯನ್ನು ತಿನ್ನುತ್ತಾರೆ. ಇದರ ನಂತರ, ಇಡೀ ದಿನ ನಿರ್ಜಲ ಉಪವಾಸ ಇರಬೇಕು. ಸಂಜೆ, ಮಹಿಳೆಯರು ಹದಿನಾರು ಅಲಂಕಾರಗಳನ್ನು ಮಾಡುವ ಮೂಲಕ ಶಿವ-ಪಾರ್ವತಿ, ಗಣೇಶ, ಕಾರ್ತಿಕೇಯ ಮತ್ತು ಚಂದ್ರನನ್ನು ಪೂಜಿಸುತ್ತಾರೆ. ಶಂಕರನ ಇಡೀ ಕುಟುಂಬವನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಕರವೇ (ಮಣ್ಣಿನ ಮಡಕೆ) ಯಲ್ಲಿ ಖಾದ್ಯವನ್ನು ಇಟ್ಟುಕೊಂಡು ಕರವೇ ಪೂಜೆ ಮಾಡಿ. ನಂತರ ರಾತ್ರಿಯಲ್ಲಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿ, ಜೊತೆಗೆ ಗಣೇಶ ಮತ್ತು ಚತುರ್ಥಿ ಮಾತೆಗೆ ಅರ್ಘ್ಯವನ್ನು ಅರ್ಪಿಸಿ. ಇದರ ನಂತರ, ಪತಿಯ ಮುಖವನ್ನು ಜರಡಿಯಲ್ಲಿ ನೋಡಿ ಮತ್ತು ನಂತರ ಪತಿಯ ಕೈಯಿಂದ ನೀರನ್ನು ಸೇವಿಸಿ ಉಪವಾಸವನ್ನು ಕೈಬಿಡಬೇಕು.


ಈ ವ್ರತಾಚರಣೆ ಮಾಡುವುದರಿಂದ ಪತಿಗೆ ಉತ್ತಮ ಆರೋಗ್ಯದ ಜೊತೆಗೆ ದೀರ್ಘಾಯುಷ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.


(ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ