Wall Clock Vastu: ಗೋಡೆ ಗಡಿಯಾರದ ಬಗ್ಗೆ ಎಂದಿಗೂ ಈ ತಪ್ಪುಗಳು ಆಗದಂತೆ ನಿಗಾವಹಿಸಿ

Wall Clock Vastu: ನಮ್ಮಲ್ಲಿ ಹೆಚ್ಚಿನವರು ಮನೆ, ಕಚೇರಿ ವಾಸ್ತುವಿಗೆ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ವಾಲ್ ಕ್ಲಾಕ್ ವಾಸ್ತು ಬಗ್ಗೆ ಗಮನ ಹರಿಸುವುದೇ ಇಲ್ಲ.

Written by - Yashaswini V | Last Updated : Oct 16, 2021, 09:52 AM IST
  • ವಾಸ್ತ್ರು ಪ್ರಕಾರ, ಮನೆ ಅಥವಾ ಕಚೇರಿಯಲ್ಲಿ ಇರಿಸಲಾಗುವ ಗೋಡೆ ಗಡಿಯಾರಗಳ ಬಗ್ಗೆಯೂ ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ
  • ಸರಿಯಾದ, ಸೂಕ್ತವಾದ ಸ್ಥಳದಲ್ಲಿ ವಾಲ್ ಕ್ಲಾಕ್ ಇಡುವುದರಿಂದ ಸಮೃದ್ಧಿಯನ್ನು ಆಕರ್ಷಿಸುತ್ತದೆ
  • ಗೋಡೆ ಗಡಿಯಾರಗಳಿಗೆ ಸಂಬಂಧಿಸಿದ ಯಾವ ಕೆಲಸಗಳನ್ನು ಮಾಡಬಾರದು
Wall Clock Vastu: ಗೋಡೆ ಗಡಿಯಾರದ ಬಗ್ಗೆ ಎಂದಿಗೂ ಈ ತಪ್ಪುಗಳು ಆಗದಂತೆ ನಿಗಾವಹಿಸಿ title=
Wall Clock Vastu: ವಾಲ್ ಕ್ಲಾಕ್ ವಾಸ್ತು ಸಲಹೆಗಳು

Wall Clock Vastu: ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲೂ ವಾಸ್ತು ಸಲಹೆಗಳನ್ನು ಅನುಸರಿಸುವ ಸಂಸ್ಕೃತಿ ಹೆಚ್ಚಾಗುತ್ತಿದೆ. ನಮ್ಮಲ್ಲಿ ಹೆಚ್ಚಿನವರು ಮನೆ, ಕಚೇರಿ ವಾಸ್ತುವಿಗೆ ತುಂಬಾ ಪ್ರಾಮುಖ್ಯತೆ ನೀಡುತ್ತಾರೆ. ಆದರೆ ವಾಲ್ ಕ್ಲಾಕ್ ಅಥವಾ ಗೋಡೆ ಗಡಿಯಾರದ ವಾಸ್ತು ಬಗ್ಗೆ ಗಮನ ಹರಿಸುವುದೇ ಇಲ್ಲ. ವಾಸ್ತ್ರು ಪ್ರಕಾರ, ಮನೆ ಅಥವಾ ಕಚೇರಿಯಲ್ಲಿ ಇರಿಸಲಾಗುವ ಗೋಡೆ ಗಡಿಯಾರಗಳ ಬಗ್ಗೆಯೂ ಕೆಲವು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯ. 

ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆಯಲ್ಲಿಯೇ ಆಗಲಿ ಅಥವಾ ಕಚೇರಿಯಲ್ಲಿಯೇ ಆಗಲಿ ತಪ್ಪಾದ ಸ್ಥಳದಲ್ಲಿ, ಇಲ್ಲವೇ ತಪ್ಪಾದ ದಿಕ್ಕಿನಲ್ಲಿ ಗೋಡೆ ಗಡಿಯಾರವನ್ನು ಸ್ಥಾಪಿಸುವುದರಿಂದ ಗಡಿಯಾರವು ದುಷ್ಪರಿಣಾಮಗಳನ್ನು ತರುತ್ತದೆ. ಆದರೆ, ಸರಿಯಾದ, ಸೂಕ್ತವಾದ ಸ್ಥಳದಲ್ಲಿ ವಾಲ್ ಕ್ಲಾಕ್ ಇಡುವುದರಿಂದ  ಸಮೃದ್ಧಿಯನ್ನು ಆಕರ್ಷಿಸುತ್ತದೆ. ಹಾಗಾಗಿ  ಗೋಡೆ ಗಡಿಯಾರಗಳಿಗೆ ಸಂಬಂಧಿಸಿದಂತೆ ಈ ವಾಸ್ತು ಸಲಹೆಗಳು ಯಾವುವು. ಗೋಡೆ ಗಡಿಯಾರಗಳಿಗೆ ಸಂಬಂಧಿಸಿದ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯೋಣ...

ಇದನ್ನೂ ಓದಿ- Garuda Purana: ಕೆಟ್ಟ ಕೆಲಸಗಳು ಮಾತ್ರವಲ್ಲ, ಒಳ್ಳೆಯ ಕಾರ್ಯಗಳು ಕೂಡ ಜೀವನದಲ್ಲಿ ಬಿಕ್ಕಟ್ಟನ್ನು ತರಬಹುದು, ಇಲ್ಲಿದೆ ಕಾರಣ

ಗೋಡೆ ಗಡಿಯಾರಗಳಿಗೆ ಈ ವಾಸ್ತು ಸಲಹೆಗಳನ್ನು ಅನುಸರಿಸಿ:
* ಉತ್ತರ ಅಥವಾ ಪೂರ್ವ ದಿಕ್ಕಿನ ಗೋಡೆಗಳ ಮೇಲೆ ಗೋಡೆ ಗಡಿಯಾರಗಳನ್ನು ಇರಿಸಿ.

* ಉತ್ತರ ದಿಕ್ಕಿನಲ್ಲಿ ಗಡಿಯಾರವನ್ನು ನೇತುಹಾಕುವುದು ಸಂಪತ್ತನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. 

* ನೀವು ಪಶ್ಚಿಮದಲ್ಲಿಯೂ ಗಡಿಯಾರವನ್ನು (Clock Vastu) ಇರಿಸಬಹುದು. ಆದರೆ ಅದು ಕೊನೆಯ ಆಯ್ಕೆಯಾಗಿರಬೇಕು

* ಲೋಲಕ ಗಡಿಯಾರಗಳನ್ನು ಪೂರ್ವ ಭಾಗದಲ್ಲಿ ಇಡುವುದು ಒಳ್ಳೆಯದು.

* ಮಲಗುವ ಕೋಣೆಯಲ್ಲಿ, ಗೋಡೆಯ ಗಡಿಯಾರವನ್ನು ಇಡುವಾಗ, ನೀವು ಎದ್ದ ಕೂಡಲೇ ಗಡಿಯಾರ ನೋಡಬಹುದು ಎನ್ನುವ ಸ್ಥಳದಲ್ಲಿ ಇರಿಸಿ.

* ಯಾವಾಗಲೂ ಮನೆಯೊಳಗೆ ಗಡಿಯಾರಗಳನ್ನು ಇರಿಸಿ.

* ಕೆಲಸ ಮಾಡದ ಗಡಿಯಾರಗಳನ್ನು ಸರಿಪಡಿಸಿ ಅಥವಾ ಬದಲಾಯಿಸಿ.

* ಎಲ್ಲಾ ಗಡಿಯಾರಗಳು ಸರಿಯಾದ ಸಮಯಕ್ಕೆ ಇರಬೇಕು ಅಥವಾ ಸರಿಯಾದ ಸಮಯಕ್ಕಿಂತ 1-2 ನಿಮಿಷ ಮುಂಚಿತವಾಗಿರಬೇಕು. ಕಡಿಮೆ ಇರಬಾರದು ಎಂದು ನೆನಪಿನಲ್ಲಿಡಿ.

* ಎಲ್ಲಾ ಗೋಡೆಯ ಗಡಿಯಾರಗಳನ್ನು ಯಾವಾಗಲೂ ಸ್ವಚ್ಛಗೊಳಿಸಿ.

ಇದನ್ನೂ ಓದಿ- Vastu tips for Main Gate: ನಿತ್ಯ ಬೆಳಿಗ್ಗೆ ಮನೆಯ ಮುಖ್ಯ ದ್ವಾರದಲ್ಲಿ ಈ 5 ಕೆಲಸ ಮಾಡಿದರೆ, ಶಾಶ್ವತವಾಗಿ ದೂರವಾಗುತ್ತೆ ಆರ್ಥಿಕ ಬಿಕ್ಕಟ್ಟು

ಗೋಡೆ ಗಡಿಯಾರದ ಬಗ್ಗೆ ಎಂದಿಗೂ ಈ ತಪ್ಪುಗಳು ಆಗದಂತೆ ನಿಗಾವಹಿಸಿ:

* ದಕ್ಷಿಣ ದಿಕ್ಕಿನ ಗೋಡೆಯಲ್ಲಿ ಗೋಡೆ ಗಡಿಯಾರಗಳನ್ನು ಹಾಕಬೇಡಿ.

* ಯಾವುದೇ ಬಾಗಿಲಿನ ಮೇಲೆ ಗಡಿಯಾರವನ್ನು (Clock On Door) ನೇತುಹಾಕುವುದನ್ನು ತಪ್ಪಿಸಿ.

* ಯಾವುದೇ ಗೋಡೆ ಗಡಿಯಾರಗಳು ಮಲಗುವ ಕೋಣೆ ಬಾಗಿಲಿಗೆ ಎದುರಿರಬಾರದು.

* ಮನೆಯ ಹೊರಗೆ ಯಾವುದೇ ಗೋಡೆ ಗಡಿಯಾರಗಳನ್ನು ಹಾಕುವುದನ್ನು ತಪ್ಪಿಸಿ.

* ಮನೆಯಲ್ಲಿ ಮುರಿದ ಅಥವಾ ಹಾಳಾದ ಗಡಿಯಾರಗಳನ್ನು ಇಡುವುದನ್ನು ತಪ್ಪಿಸಿ.

* ಗಡಿಯಾರಗಳು ಎಂದಿಗೂ ಸರಿಯಾದ ಸಮಯಕ್ಕಿಂತ ಕಡಿಮೆ ಅಂದರೆ ಸ್ಲೋ ಇರಬಾರದು ಎಂಬುದನ್ನು ನೆನಪಿನಲ್ಲಿಡಿ.

* ಗಡಿಯಾರದ ಗಾಜು ಒಡೆದಿರಬಾರದು.

* ಋಣಾತ್ಮಕ ಶಕ್ತಿ  (ಉದಾಹರಣೆಗೆ ದುಃಖ, ಯುದ್ಧ, ಒಂಟಿತನ ಇತ್ಯಾದಿ)  ಚಿತ್ರಗಳಲ್ಲಿ ಇರುವ ಗಡಿಯಾರಗಳನ್ನು ಮನೆಯಲ್ಲಿ ಇರಿಸುವುದನ್ನು ತಪ್ಪಿಸಿ.

ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News