ಮನೆಯಲ್ಲಿ ನೆಮ್ಮದಿ - ಶಾಂತಿ ನೆಲೆಸಿರಬೇಕೆಂದರೆ ವಾಸ್ತು ದೋಷ ಇರಬಾರದು. ಮನೆಯ ಪ್ರತಿ ಮೂಲೆಯೂ ವಾಸ್ತು ಪ್ರಕಾರವಿದ್ದಲ್ಲಿ ಮಾತ್ರ ಮನೆಯ ಅಭಿವೃದ್ಧಿ ಸಾಧ್ಯ. ಸರಳವಾದ ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ ಮತ್ತು ಸಮೃದ್ಧಿ ಉಂಟಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಹೇಳಿರುವ ಕೆಲವು ಸುಲಭವಾದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ವೃದ್ಧಿಸುತ್ತದೆ.


COMMERCIAL BREAK
SCROLL TO CONTINUE READING

ಕೆಲವು ವಸ್ತುಗಳನ್ನು ನಾವು ಮನೆ(Home)ಯಲ್ಲಿ ತಂದಿಟ್ಟುಕೊಂಡರೆ ನೆಗೆಟೀವ್ ಅಂಶಗಳು ಆವರಿಸಿ ಎಲ್ಲವಕ್ಕೂ ಅಡ್ಡಿ ಆತಂಕಗಳು ಎದುರಾಗುತ್ತವೆ. ಮನಸ್ಸೂ ಸಹ ಉಲ್ಲಸಿತವಾಗಿರುವುದಿಲ್ಲ. ಅದೇ, ಇನ್ನು ಕೆಲವು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅವು ನಮಗೆ ಖುಷಿಯನ್ನು ತಂದುಕೊಡುತ್ತದೆ, ಮನಸ್ಸನ್ನು ಉಲ್ಲಸಿತವಾಗಿಟ್ಟುಕೊಳ್ಳುತ್ತದೆ. ಧನ ಲಾಭವನ್ನುಂಟು ಮಾಡಿ ಆರ್ಥಿಕ ಪ್ರಗತಿ ಸಾಧಿಸುವಂತೆ ಮಾಡುತ್ತದೆ. ಹೀಗಾಗಿ ಯಾವುತ್ತೂ ಮನೆಯಲ್ಲಿ ಯಾವುದಕ್ಕೂ ಕೊರತೆಯೇ ಆಗುವುದಿಲ್ಲ.


Holi 2021: ಈ ವರ್ಷ ಹೋಳಿಗೆ ನೈಸರ್ಗಿಕ ಬಣ್ಣಗಳನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಿ


ಕಮಲದ ಮೇಲೆ ಕುಳಿತಿರುವ ಲಕ್ಷ್ಮೀದೇವಿ: ಎಲ್ಲರ ಮನೆಯಲ್ಲಿ ಲಕ್ಷ್ಮೀ ದೇವಿ(Lord Laxmidevi)ಯ ಫೋಟೋ ಇದ್ದೇ ಇರುತ್ತದೆ. ಆದರೆ, ಯಾವ ರೀತಿಯ ಫೋಟೋ ಇಟ್ಟುಕೊಂಡರೆ ಬಹಳ ಒಳ್ಳೆಯದು..? ಯಾವ ದಿಕ್ಕಿನಲ್ಲಿ ಇಟ್ಟುಕೊಳ್ಳಬೇಕು..? ಹೀಗೆ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಏನೆಲ್ಲ ಪರಿಣಾಮ ಬೀರುತ್ತದೆ? ಆರ್ಥಿಕವಾಗಿ ಹೇಗೆ ಲಾಭವಾಗುತ್ತದೆ. ಧನಲಾಭ ಹೆಚ್ಚುತ್ತಾ ಹೋಗುತ್ತದೆ ಎಂಬುದು ಬಹಳಷ್ಟು ಜನಕ್ಕೆ ಗೊತ್ತಿರುವುದಿಲ್ಲ.


Daily Horoscope: ದಿನಭವಿಷ್ಯ 23-03-2021 Today astrology


ಇದಕ್ಕೆ ಮುಖ್ಯವಾಗಿ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮೀದೇವಿಯು ಕೈಯಿಂದ ಬಂಗಾರದ ನಾಣ್ಯ(Gold Coin)ಗಳನ್ನು ಮಳೆಯಂತೆ ಸುರಿಸುತ್ತಿರುವ ಫೋಟೋವನ್ನು ಮನೆಯಲ್ಲಿಟ್ಟುಕೊಳ್ಳಬೇಕು. ಈ ಫೋಟೋವನ್ನು ಇಟ್ಟುಕೊಂಡರೆ ಸಾಲದು, ಇದನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಟ್ಟರೆ ಇನ್ನೂ ಒಳ್ಳೆಯದಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆಯು ಮನೆಯ ಮತ್ತು ಮನೆಯ ಸದಸ್ಯರ ಮೇಲೆ ಸದಾ ಇರುತ್ತದೆ. ಅದರಿಂದಾಗಿ ಮನೆಯಲ್ಲಿ ಸದಾ ಹಣ ಕೊರತೆ ಇಲ್ಲದೆ, ಸಂಪತ್ತು ನೆಲೆಸಲು ಸಹಾಯಕವಾಗುತ್ತದೆ.


Motivational Thoughts In Kannada:ದೇವಿ ಲಕುಮಿಯ ಆಶೀರ್ವಾದ ಪಡೆಯಬೇಕಾದರೆ ಅಪ್ಪಿ-ತಪ್ಪಿಯೂ ಈ ಕೆಲಸ ಮಾಡಬೇಡಿ


ನೀರಿನಿಂದ ತುಂಬಿದ ಮಡಿಕೆ ಇದ್ದರೆ ಲಾಭ: ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ನೀರಿನಿಂದ ತುಂಬಿದ ಮಡಿಕೆ(Water Pot) ಅಥವಾ ಜೆಗ್ ಅನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಉತ್ತಮ. ಹೀಗೆ ಮಡಿಕೆಯಲ್ಲಿ ನೀರು ತುಂಬಿಡುವುದರಿಂದ ಮನೆಯಲ್ಲಿ ಹಣವೂ ತುಂಬಿಕೊಂಡಿರುತ್ತದೆ. ಇದರಿಂದ ಮನೆಯಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ. ನಿಮ್ಮ ಮನೆಯಲ್ಲಿ ಮಡಿಕೆ ಇಲ್ಲದಿದ್ದರೆ ಈಗಲೇ ತಂದಿಟ್ಟುಕೊಳ್ಳಬಹುದು.


Good day for Haircut : ನೀವು ಯಾವ ದಿನ ಹೇರ್ ಕಟ್ ಮಾಡಿಸುತ್ತೀರಾ..?


ಆಮೆ ಮತ್ತು ಮೀನಿನ ಪ್ರತಿಮೆಯನ್ನು ಇಟ್ಟುಕೊಳ್ಳಿ: ಮನೆಯ ಉತ್ತರ ದಿಕ್ಕಿನಲ್ಲಿ ಲೋಹದ ಆಮೆ ಅಥವಾ ಮೀನಿನ ಪ್ರತಿಮೆ(Fish Statue)ಯನ್ನು ಇಡುವುದರಿಂದ ಮನೆಯ ಸದಸ್ಯರಿಗೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಇವುಗಳು ಪಾಸಿಟಿವ್ ಎನರ್ಜಿಯನ್ನೂ ಕೊಡುತ್ತವೆ. ಹೀಗಾಗಿ ಮನೆಯಲ್ಲಿ ಹೊಂದಬೇಕೆಂದು ಹೇಳಲಾಗುತ್ತದೆ.


Lucky Colour Dress: ನಿಮ್ಮ ಕೆಲಸ ಆಗಬೇಕೆ? ಹಾಗಿದ್ರೆ ಈ ರಾಶಿಯವರು ಈ ಕಲರ್ ಬಟ್ಟೆ ಧರಿಸಿ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.