Holi 2021: ಈ ವರ್ಷ ಹೋಳಿಗೆ ನೈಸರ್ಗಿಕ ಬಣ್ಣಗಳನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಿ

ಈ ವರ್ಷ ಹೋಳಿ ಹಬ್ಬದಲ್ಲಿ ನೈಸರ್ಗಿಕ ಬಣ್ಣಗಳ ಮೂಲಕ ನೀವು ನಿಮ್ಮ ಬಣ್ಣಗಳ ಹಬ್ಬವನ್ನು ಇನ್ನೂ ವಿಷೆಶವಾಗಿಸಬಹುದು.

Written by - Yashaswini V | Last Updated : Mar 23, 2021, 02:21 PM IST
  • ಈ ವರ್ಷ 29 ಮಾರ್ಚ್ 2021ರಂದು ಹೋಳಿ ಹಬ್ಬ ಆಚರಿಸಲಾಗುತ್ತಿದೆ
  • ದೇಶಾದ್ಯಂತ ಹೋಳಿ ಆಚರಿಸಲಾಗುತ್ತದೆ
  • ಆದರೂ ಮಥುರಾದಲ್ಲಿ ಆಚರಿಸುವ ಹೋಳಿ ಬಹಳ ಪ್ರಸಿದ್ದಿಯಾಗಿದೆ
Holi 2021: ಈ ವರ್ಷ ಹೋಳಿಗೆ ನೈಸರ್ಗಿಕ ಬಣ್ಣಗಳನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಿ  title=
Know how to make natural colours

ಬೆಂಗಳೂರು: ಯಾವುದೇ ಜಾತಿ, ಮತ, ಧರ್ಮದ ಬೇಧವಿಲ್ಲದೆ, ಮಕ್ಕಳಿಂದ ದೊಡ್ಡವರವರೆಗೂ  ಸಂಭ್ರಮ ಸಡಗರದಿಂದ ಭಾರತದಾದ್ಯಂತ ಎಲ್ಲರೂ ಆಚರಿಸುವ ಹಬ್ಬವೇ ಹೋಳಿ ಹಬ್ಬ. ಹೋಳಿ ಬಣ್ಣಗಳ ಹಬ್ಬವಾಗಿದ್ದು ಯಾವುದೇ  ಬೇಧವಿಲ್ಲದೆ ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಭ್ರಮದಿಂದ ಓಕುಳಿಯಾಟದಲ್ಲಿ ಮಿಂದೇಳುವ ಹಬ್ಬ. 

ಈ ವರ್ಷ 29 ಮಾರ್ಚ್ 2021ರಂದು ಹೋಳಿ (Holi) ಹಬ್ಬ ಆಚರಿಸಲಾಗುತ್ತಿದೆ. ದೇಶಾದ್ಯಂತ ಹೋಳಿ ಆಚರಿಸಲಾಗುತ್ತದೆ. ಆದರೂ ಮಥುರಾದಲ್ಲಿ ಆಚರಿಸುವ ಹೋಳಿ ಬಹಳ ಪ್ರಸಿದ್ದಿಯಾಗಿದೆ. ಇಲ್ಲಿ ವಿವಿಧ ರೀತಿಯ ಹೋಳಿ ಆಚರಣೆ ಜರುಗಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಮಿಕಲ್ ಯುಕ್ತ ಬಣ್ಣಗಳ ಹಾವಳಿ ಹೆಚ್ಚಾಗಿದೆ. ಚರ್ಮದ (Skin) ಬಗೆಗಿನ ಕಾಳಜಿಯಿಂದಾಗಿ ಹಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳನ್ನು ಖರೀದಿಸಲು ಬಹಳ ಯೋಚಿಸುತ್ತಾರೆ. ಅಂತಹವರಲ್ಲಿ ನೀವೂ ಕೂಡ ಒಬ್ಬರಾಗಿದ್ದರೆ ಚಿಂತೆ ಬಿಡಿ. ಈ ಬಾರಿ ನಿಮ್ಮ ಮನೆಯಲ್ಲಿಯೇ ನೈಸರ್ಗಿಕವಾಗಿ ಬಣ್ಣ ತಯಾರಿಸಿ ಈ ಬಾರಿಯ ಹೋಳಿಯನ್ನು ಸ್ಪೆಷಲ್ ಹೋಳಿ ಆಗಿ ಪರಿವರ್ತಿಸಬಹುದು. ಬನ್ನಿ ಮನೆಯಲ್ಲಿಯೇ ನೈಸರ್ಗಿಕ ಹೋಳಿ (Natural Holi) ತಯಾರಿಸುವುದು ಹೇಗೆಂದು ತಿಳಿಯಿರಿ.

ಹಳದಿ ಬಣ್ಣ - ಹೋಳಿ (Holi) ಹಬ್ಬಕ್ಕಾಗಿ ಹಳದಿ ಬಣ್ಣ ತಯಾರಿಸಲು 1:2 ಅನುಪಾತದಲ್ಲಿ ಅರಿಶಿನದ ಪುಡಿ ಮತ್ತು ಕಡಲೆ ಹಿಟ್ಟನ್ನು ತೆಗೆದುಕೊಳ್ಳಿ. ಇವೆರಡನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಡ್ರೈ ಗುಲಾಲ್ ತಯಾರಿಸಬಹುದು. ಮಾರಿಗೋಲ್ಡ್ ಎಂದರೆ ಚೆಂಡು ಹೂವುಗಳನ್ನು ರುಬ್ಬುವ ಮೂಲಕ ಹಸಿಯಾದ ಹಳದಿ ಬಣ್ಣ ತಯಾರಿಸಬಹುದು.

ಇದನ್ನೂ ಓದಿ - ಬಣ್ಣಗಳ ಜೊತೆಗೆ ಬಾಂಧವ್ಯ ಬೆಸೆಯುವ ಹಬ್ಬ 'ಹೋಳಿ'

ಕೆಂಪು ಬಣ್ಣ - ದಾಸವಾಳದ ಹೂವನ್ನು ಬಳಸುವ ಮೂಲಕ ಕೆಂಪು ಬಣ್ಣವನ್ನು ತಯಾರಿಸಬಹುದು. ಇದಕ್ಕಾಗಿ, ಒಣ ದಾಸವಾಳವನ್ನು ಪುಡಿ ಮಾಡಿ ಮತ್ತು ಗಂಧದ ಪುಡಿಯನ್ನು ಇದರೊಂದಿಗೆ ಬೆರೆಸಿ. ಇದಲ್ಲದೆ, ನೀವು ಕೆಂಪು ಶ್ರೀಗಂಧದ ಪುಡಿಯನ್ನೂ ಸಹ ಬಳಸಬಹುದು.

ಹಸಿರು ಬಣ್ಣ - ಹಸಿರು ಬಣ್ಣವನ್ನು ಮಾಡಲು ಗೋರಂಟಿ ಅಥವಾ ಗೋರಂಟಿ ಪುಡಿಯನ್ನು ಬಳಸಿ. ನೀವು ಪಾಲಕ ಅಥವಾ ಹಸಿರು ಎಲೆಗಳನ್ನು ಒಣಗಿಸಿ ಪುಡಿಮಾಡುವ ಮೂಲಕವೂ ಹಸಿರು ಬಣ್ಣವನ್ನು ಸಹ ಮಾಡಬಹುದು.

ಇದನ್ನೂ ಓದಿ - ಬಟ್ಟೆ ಮೇಲಾದ ಹೋಳಿ ಬಣ್ಣಗಳನ್ನು ಹೇಗೆ ತೆಗೆಯುವುದು ಎಂಬ ಚಿಂತೆಯೇ? ಇಲ್ಲಿದೆ ಪರಿಹಾರ

ಕೆನ್ನೇರಳೆ ಬಣ್ಣ - ಕೆನ್ನೇರಳೆ ಬಣ್ಣಗಳನ್ನು ತಯಾರಿಸಲು ಬೀಟ್ರೂಟ್ ಉತ್ತಮ ಆಯ್ಕೆಯಾಗಿದೆ. ಬೀಟ್ರೂಟ್ ಅನ್ನು ಕತ್ತರಿಸಿ ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಮತ್ತು ರಾತ್ರಿಯಿಡೀ ಬಿಡಿ. ಮರುದಿನ ಕೆನ್ನೇರಳೆ ಬಣ್ಣ ಸಿದ್ಧವಾಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News