ಫ್ಯಾಟ್ ಬರ್ನಿಂಗ್ ಡಯಟ್‌:  ತೂಕ ಇಳಿಸಲು ಬಯಸುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದಕ್ಕಾಗಿ ು ವಾಕ್, ಯೋಗ, ವ್ಯಾಯಾಮದ ಜೊತೆಗೆ ಉತ್ತಮ ಆಹಾರ ಕ್ರಮವೂ ಬಹಳ ಮುಖ್ಯ. ನಿಮ್ಮ ಡಯಟ್‌ನಲ್ಲಿ ಕೆಲವು ಆಹಾರಗಳನ್ನು ಸೇರಿಸುವುದರಿಂದ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ತೂಕವನ್ನು ಕಳೆದುಕೊಳ್ಳಲು, ನಾವು ಪ್ರತಿದಿನ ಪೌಷ್ಠಿಕವಾದ ಆಹಾರವನ್ನು ಸೇವಿಸಬೇಕು. ಉದಾಹರಣೆಗೆ, ದೇಹವು ವಿವಿಧ ವಸ್ತುಗಳನ್ನು ಹೀರಿಕೊಳ್ಳಲು ನಮಗೆ ಕೊಬ್ಬು ಬೇಕಾಗುತ್ತದೆ. ಫ್ಯಾಟ್ ಬರ್ನಿಂಗ್ ಗಾಗಿ ಪ್ರೋಟೀನ್ ಆಹಾರ ಬಹಳ ಮುಖ್ಯ. ಇದರೊಂದಿಗೆ ತೂಕ ನಷ್ಟವನ್ನು ಉತ್ತೇಜಿಸಲು ಕಡಿಮೆ ಕಾರ್ಬೋಹೈಡ್ರೇಟ್ಗಳನ್ನು ಸೇವಿಸಬಹುದು. ಪೌಷ್ಟಿಕ ತಜ್ಞರು  ಹೊಟ್ಟೆ, ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ನಿತ್ಯ  ಕೆಲವು ಆಹಾರಗಳನ್ನು ಸೇವಿಸುವಂತೆ ಸಲಹೆ ನೀಡುತ್ತಾರೆ. 
ಅಂತಹ ಆಹಾರಗಳ ಬಗ್ಗೆ ತಿಳಿಯೋಣ...


COMMERCIAL BREAK
SCROLL TO CONTINUE READING

ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ನಿತ್ಯ ಈ ಆಹಾರಗಳನ್ನು ತಪ್ಪದೇ ಸೇವಿಸುವುದು ಸಹಾಯಕವಾಗಿದೆ.
* ಸಾಮೆ ಅಕ್ಕಿ:
ತೂಕ ಇಳಿಸಿಕೊಳ್ಳಲು ನಿಮ್ಮ ನಿತ್ಯದ ಆಹಾರದಲ್ಲಿ ಸಿರಿಧಾನ್ಯಗಾನ್ನು ಬಳಸುವುದು ಪ್ರಯೋಜನಕಾರಿ ಆಗಿದೆ. ಅಕ್ಕಿಯ ಬದಲಾಗಿ ಇವುಗಳನ್ನು ಬಳಸುವುದು ಬಹಳ ಲಾಭದಾಯಕವಾಗಿದೆ. ಅವುಗಳಲ್ಲಿ ಸಾಮೆ ಅಕ್ಕಿಯು ನಿಮ್ಮ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಲು ಸಹಾಯಕವಾಗಿದೆ. 


ವಾಸ್ತವವಾಗಿ, ಸಾಮೆ ಅಕ್ಕಿಯಲ್ಲಿ ಪ್ರೋಟೀನ್‌ ಸಮೃದ್ಧವಾಗಿದೆ. ಈ ಪೋಷಕಾಂಶವು ನಮ್ಮ ಶಕ್ತಿಯನ್ನು ಹೆಚ್ಚಿಸಲು ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಪ್ರೋಟೀನ್ ದೇಹದಲ್ಲಿ ಕೊಬ್ಬನ್ನು ಸುಡುವುದನ್ನು ಉತ್ತೇಜಿಸುತ್ತದೆ. ಹೆಚ್ಚಿನ ಪ್ರೋಟೀನ್ ಭರಿತ ಆಹಾರವು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕ್ಯಾಲೊರಿಗಳನ್ನು ವೇಗವಾಗಿ ಸುಡುತ್ತದೆ. ಸಾಮೆ ಅಕ್ಕಿಯಲ್ಲಿ  ವಿಟಮಿನ್ ಇ, ಕಬ್ಬಿಣ, ಸತು ಮತ್ತು ಸೆಲೆನಿಯಮ್ ಕೂಡ ಸಮೃದ್ಧವಾಗಿದೆ. 


ಇದನ್ನೂ ಓದಿ- Gastric Problem: ಗ್ಯಾಸ್ಟ್ರಿಕ್‌ ಸಮಸ್ಯೆಗೆ ವೀಳ್ಯದೆಲೆಯಲ್ಲಿದೆ ಮದ್ದು!


* ಹಸಿರು ಸೊಪ್ಪು- ತರಕಾರಿಗಳು:
ನಿತ್ಯ ಆಹಾರದಲ್ಲಿ ಹಸಿರು ಸೊಪ್ಪು-ತರಕಾರಿಗಳನ್ನು ಸೇವಿಸುವುದು ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ನಿತ್ಯ ನಿಮ್ಮ ಡಯಟ್‌ನಲ್ಲಿ ಪಾಲಕ್, ಎಲೆಕೋಸು ಸೇರಿದಂತೆ ಇನ್ನೂ ಕೆಲವು ಹಸಿರು ಸೊಪ್ಪು ತರಕಾರಿಗಳನ್ನು ಬಳಸಿ. ಈ ಸೊಪ್ಪು ತರಕಾರಿಗಳು ಕೊಬ್ಬನ್ನು ಸುಡುವ ಪ್ರಕ್ರಿಯೆಯಲ್ಲಿ ಸಹಾಯಕವಾಗಬಹುದು. ಈ ತರಕಾರಿಗಳು ಕಬ್ಬಿಣ, ಮೆಗ್ನೀಸಿಯಮ್ ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ ಮತ್ತು ಸಾಕಷ್ಟು ಶಕ್ತಿಯನ್ನು ನೀಡುತ್ತದೆ. ಈ ಪೋಷಕಾಂಶಗಳು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ಸುಡುವುದನ್ನು ಉತ್ತೇಜಿಸುತ್ತದೆ. 


ಇದನ್ನೂ ಓದಿ- ತ್ವಚೆಯ ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಈ ವಸ್ತುಗಳೊಂದಿಗೆ ರೋಸ್ ವಾಟರ್ ಬಳಸಿ


* ಹಸಿರು ಚಹಾ:
ಗ್ರೀನ್ ಟೀಯನ್ನು ಆರೋಗ್ಯಕರ ಪಾನೀಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದು ಶೂನ್ಯ ಕ್ಯಾಲೊರಿಗಳನ್ನು ಹೊಂದಿದೆ ಮತ್ತು ಹಾಲು ಮತ್ತು ಸಕ್ಕರೆಯೊಂದಿಗೆ ಚಹಾಕ್ಕೆ ಆರೋಗ್ಯಕರ ಪರ್ಯಾಯವಾಗಿದೆ. ಹಸಿರು ಚಹಾವು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ, ಇದು ನಿಮ್ಮ ತೂಕವನ್ನು ವೇಗವಾಗಿ ಕಳೆದುಕೊಳ್ಳುವಂತೆ ಮಾಡುತ್ತದೆ. ಹೆಚ್ಚಿನ ಚಯಾಪಚಯ ಕ್ರಿಯೆಯು ಸಾಮಾನ್ಯಕ್ಕಿಂತ ವೇಗವಾಗಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಗ್ರೀನ್ ಟೀಯಲ್ಲಿರುವ ಪ್ರಮುಖ ಅಂಶ ಕೆಫೀನ್ ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಆಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.