ತ್ವಚೆಯ ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಈ ವಸ್ತುಗಳೊಂದಿಗೆ ರೋಸ್ ವಾಟರ್ ಬಳಸಿ

Skin Care: ಸುಂದರ ತ್ವಚೆಯನ್ನು ಪಡೆಯಲು ದುಬಾರಿ ಪ್ರಾಡಕ್ಟ್ ಗಳನ್ನೇ ಬಳಸಬೇಕು ಎಂದೇನಲ್ಲ, ಸುಲಭವಾಗಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಯೂ ಕಲೆರಹಿತವಾದ ತ್ವಚೆಯನ್ನು ನಿಮ್ಮದಾಗಿಸಬಹುದು. ನೀವೂ ಸಹ ಸುಂದರವಾದ ಕಲೆ ರಹಿತ ತ್ವಚೆಯನ್ನು ಬಯಸಿದರೆ ಅದಕ್ಕಾಗಿ ರೋಸ್ ವಾಟರ್ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

Written by - Yashaswini V | Last Updated : Aug 3, 2022, 11:40 AM IST
  • ರೋಸ್ ವಾಟರ್ ಬಳಕೆಯು ತ್ವಚೆಗೆ ತಾಜಾತನವನ್ನು ತುಂಬುತ್ತದೆ.
  • ಇದು ತ್ವಚೆಯನ್ನು ಹೈಡ್ರೇಟ್ ಆಗಿ ಇಡುವುದಲ್ಲದೆ ಮುಖವನ್ನು ನಿಷ್ಕಳಂಕವಾಗಿಸಲು ಕೆಲಸ ಮಾಡುತ್ತದೆ.
  • ನೀವೂ ಸಹ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು ಬಯಸಿದರೆ, ರೋಸ್ ವಾಟರ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯಿರಿ.
ತ್ವಚೆಯ ಈ ಸಮಸ್ಯೆಗಳಿಂದ ಪರಿಹಾರ ಪಡೆಯಲು ಈ ವಸ್ತುಗಳೊಂದಿಗೆ ರೋಸ್ ವಾಟರ್ ಬಳಸಿ  title=
Rose water for skin care

ತ್ವಚೆಯ ಆರೈಕೆ ಸಲಹೆಗಳು: ನಿಷ್ಕಳಂಕವಾದ ಸುಂದರವಾದ ತ್ವಚೆಯನ್ನು ಪಡೆಯುವುದು ಪ್ರತಿಯೊಬ್ಬರ ಆಸೆ. ಉತ್ತಮ ತ್ವಚೆಯನ್ನು ಪಡೆಯಲು ಕೆಲವರು  ರಾಸಾಯನಿಕಯುಕ್ತ ದುಬಾರಿ ಕ್ರೀಂಗಳ ಮೊರೆ ಹೋಗುತ್ತಾರೆ. ಆದರೆ, ಸುಂದರ ತ್ವಚೆಯನ್ನು ಪಡೆಯಲು ದುಬಾರಿ ಪ್ರಾಡಕ್ಟ್ ಗಳನ್ನೇ ಬಳಸಬೇಕು ಎಂದೇನಲ್ಲ, ಸುಲಭವಾಗಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಯೂ ಕಲೆರಹಿತವಾದ ತ್ವಚೆಯನ್ನು ನಿಮ್ಮದಾಗಿಸಬಹುದು. ನೀವೂ ಸಹ ಸುಂದರವಾದ ಕಲೆ ರಹಿತ ತ್ವಚೆಯನ್ನು ಬಯಸಿದರೆ ಅದಕ್ಕಾಗಿ ರೋಸ್ ವಾಟರ್ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.

ರೋಸ್ ವಾಟರ್  ಬಳಕೆಯು ತ್ವಚೆಗೆ ತಾಜಾತನವನ್ನು ತುಂಬುತ್ತದೆ. ಇದು ತ್ವಚೆಯನ್ನು ಹೈಡ್ರೇಟ್ ಆಗಿ ಇಡುವುದಲ್ಲದೆ ಮುಖವನ್ನು ನಿಷ್ಕಳಂಕವಾಗಿಸಲು ಕೆಲಸ ಮಾಡುತ್ತದೆ. ನೀವೂ ಸಹ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು ಬಯಸಿದರೆ, ರೋಸ್ ವಾಟರ್ ಅನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯಿರಿ.

ಇದನ್ನೂ ಓದಿ- ಇನ್ಸುಲಿನ್ ಉತ್ಪಾದನೆಯನ್ನು ಹೆಚ್ಚಿಸಲು ಡಯಾಬಿಟಿಸ್ ರೋಗಿಗಳ ಡಯಟ್ನಲ್ಲಿರಲಿ ಈ ಆಹಾರಗಳು 

ರೋಸ್ ವಾಟರ್ ಬಳಸಿ ನಿಮ್ಮ ಮುಖವನ್ನು ಹೇಗೆ ಸುಂದರವಾಗಿ ಮಾಡಿಕೊಳ್ಳಬಹುದು ?
ರಾತ್ರಿ ಮಲಗುವಾಗ ರೋಸ್ ವಾಟರ್ ಅನ್ನು ಈ ರೀತಿ ಬಳಸಿ: 

ರೋಸ್ ವಾಟರ್ ಅನ್ನು ಬೆಳಿಗ್ಗೆ ಅಥವಾ ರಾತ್ರಿ ನಿಮಗೆ ಯಾವಾಗ ಅನುಕೂಲ ಎಂದೆನಿಸುತ್ತದೆಯೋ ಆ ಸಮಯದಲ್ಲಿ ಬಳಸಬಹುದು. ಅದಕ್ಕಾಗಿ, ಮೊದಲು   ಹತ್ತಿ ಉಂಡೆಯನ್ನು ತೆಗೆದುಕೊಳ್ಳಿ. ಇದರ ಸಹಾಯದಿಂದ ರೋಸ್ ವಾಟರ್ ಅನ್ನು ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಮುಖಕ್ಕೆ ಉತ್ತಮ ಆಮ್ಲಜನಕ ಸಿಗುತ್ತದೆ ಮತ್ತು ಕಾಂತಿಯುತ ತ್ವಚೆಯನ್ನು ಪಡೆಯಬಹುದು.

ಹೆಸರು ಬೇಳೆ ಮತ್ತು ರೋಸ್ ವಾಟರ್: 
ರಾಸಾಯನಿಕಯುಕ್ತ ಫೇಸ್ ವಾಶ್ ಮತ್ತು ಸ್ಕ್ರಬ್ ಅನ್ನು ಖರೀದಿಸುವುದಕ್ಕಿಂತ ಉತ್ತಮವಾದ ಫೇಸ್ ವಾಶ್ ಮತ್ತು ಸ್ಕ್ರಬ್ ಅನ್ನು ಮನೆಯಲ್ಲಿಯೇ ತಯಾರಿಸುವುದು ಉತ್ತಮ. ಇದಕ್ಕಾಗಿ, ನೀವು ಹೆಸರು ಬೇಳೆ ಮತ್ತು ರೋಸ್ ವಾಟರ್ ಅನ್ನು ಬಳಸಬಹುದು. ಮೊದಲು ಹೆಸರು ಬೇಳೆಯನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದು ಸ್ವಲ್ಪ ಪುಡಿಯಾದ ಬಳಿಕ ಅದನ್ನು ಒಂದು ಡಬ್ಬಿಯಲ್ಲಿ ತುಂಬಿಸಿ ನಿಮ್ಮ ಬಾತ್‌ರೂಮ್‌ನಲ್ಲಿಡಿ. ಪ್ರತಿದಿನ ನೀವು ಫೇಸ್ ವಾಶ್ ಮಾಡುವಾಗ ಈ ಪುಡಿಗೆ ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ, ಮುಖ ತೊಳೆಯಿರಿ. ಇದರಿಂದ ಕಲೆರಹಿತ ತ್ವಚೆಯನ್ನು ನಿಮ್ಮದಾಗಿಸಬಹುದು.

ಇದನ್ನೂ ಓದಿ- ಮಾನ್ಸೂನ್‌ನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಆಹಾರಗಳನ್ನು ಸೇವಿಸಿ

ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ :
ಅನಾದಿ ಕಾಲದಿಂದಲ್ಲೂ ಮುಲ್ತಾನಿ ಮಿಟ್ಟಿಯನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತದೆ. ಮುಲ್ತಾನಿ ಮಿಟ್ಟಿಯನ್ನು ಸಾಮಾನ್ಯ ನೀರಿನಲ್ಲಿ ನೆನೆಸಿ ಮತ್ತು ಪೇಸ್ಟ್ ರೂಪದಲ್ಲಿ ತಯಾರಿಸಿ. ಇದರ ನಂತರ, ಅದರಲ್ಲಿ ನಿಂಬೆ ಮತ್ತು ರೋಸ್ ವಾಟರ್ ಮಿಶ್ರಣ ಮಾಡಿ.  ಅದನ್ನು ಮುಖಕ್ಕೆ ಹಚ್ಚಿ.  10 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ವಾರದಲ್ಲಿ ಒಂದೆರಡು ಬಾರಿ ಹೀಗೆ ಮಾಡುವುದರಿಂದ ಕಲೆರಹಿತವಾದ ಸುಂದರವಾದ ತ್ವಚೆಯನ್ನು ನಿಮ್ಮದಾಗಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News