ಶಿಲ್ಪಾ ಶೆಟ್ಟಿಯಂತಹ ಸ್ಲಿಮ್ ಫಿಗರ್ ಪಡೆಯಲು ನಿಮ್ಮ ಡಯಟ್ನಲ್ಲಿರಲಿ ಈ ಆಹಾರಗಳು
Weight Loss Tips: ತೆಳ್ಳನೆಯ ಬಳುಕುವ ಸೊಂಟವನ್ನು ಪಡೆಯುವುದೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ, ಇದಕ್ಕಾಗಿ ಜೀವನಶೈಲಿಯನ್ನು ಬದಲಾಯಿಸುವುದು ಬಹಳ ಮುಖ್ಯ. ನೀವೂ ಕೂಡ ತೂಕ ಇಳಿಸಿ ನಟಿ ಶಿಲ್ಪಾ ಶೆಟ್ಟಿಯಂತಹ ಬಳುಕುವ ಸೊಂಟವನ್ನು ಪಡೆಯಲು ಬಯಸಿದರೆ ನಿಮ್ಮ ಡಯಟ್ನಲ್ಲಿ ಯಾವ ಆಹಾರಗಳನ್ನು ಸೇರಿಸುವುದು ಅಗತ್ಯ ಎಂದು ತಿಳಿಯಿರಿ.
Weight Loss Tips: ಪ್ರಸ್ತುತ ಬಹುತೇಕ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಬೆಲ್ಲಿ ಫ್ಯಾಟ್ ಕರಗಿಸಲು ಜನರು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಾರೆ. ತೂಕ ಹೆಚ್ಚಳಕ್ಕೆ ಪ್ರಮುಖ ಕಾರಣ, ನಮ್ಮ ಆಹಾರ ಪದ್ಧತಿ ಮತ್ತು ತಪ್ಪಾದ ಜೀವನ ಶೈಲಿ. ನೀವೂ ಕೂಡ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಅದಕ್ಕಾಗಿ ನಿಮ್ಮ ಆಹಾರ ಪದ್ದತಿಯಲ್ಲಿ ಬದಲಾವಣೆ ಅಗತ್ಯ. ಬೆಲ್ಲಿ ಫ್ಯಾಟ್ ಕರಗಿಸಿ ಶಿಲ್ಪಾ ಶೆಟ್ಟಿಯಂತಹ ಬಳಕುವ ಸೊಂಟವನ್ನು ಪಡೆಯಲು ಬಯಸಿದರೆ ನಿಮ್ಮ ಡಯಟ್ನಲ್ಲಿ ಈ ಆಹಾರಗಳನ್ನು ತಪ್ಪದೇ ಸೇರಿಸಿ.
ಬೆಲ್ಲಿ ಫ್ಯಾಟ್ ಕರಗಿಸಿ ಶಿಲ್ಪಾ ಶೆಟ್ಟಿಯಂತಹ ಬಳಕುವ ಸೊಂಟ ಪಡೆಯಲು ನಿಮ್ಮ ಡಯಟ್ನಲ್ಲಿರಲಿ ಈ ಆಹಾರಗಳು :
ಪಾಲಕ್ ಸೊಪ್ಪು:
ಹಸಿರು ಸೊಪ್ಪು-ತರಕಾರಿಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ ಪಾಲಕ್ ಸೊಪ್ಪನ್ನು ನಿಮ್ಮ ಡಯಟ್ನ ಭಾಗವಾಗಿಸಿ. ಪಾಲಕ್ ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಫೈಬರ್ ಜೊತೆಗೆ ಪೋಷಕಾಂಶಗಳು ಸಮೃದ್ಧವಾಗಿದೆ.
ಪರಂಗಿ ಹಣ್ಣು:
ತೂಕ ನಷ್ಟಕ್ಕೆ ಪರಂಗಿ ಹಣ್ಣನ್ನು ಬೆಸ್ಟ್ ಫ್ರೂಟ್ ಎಂದು ಪರಿಗಣಿಸಲಾಗಿದೆ. ಪರಂಗಿ ಹಣ್ಣಿನಲ್ಲಿ ಫೈಬರ್ ಸಮೃದ್ಧವಾಗಿದ್ದು ಇದು ದೇಹದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಲು ಸಹಾಯಕವಾಗಿದೆ.
ಇದನ್ನೂ ಓದಿ- ಈ ಮಸಾಲೆಗಳಿಂದ ಕರುಳಿನ ಅಸ್ವಸ್ಥತೆಗೆ ಸಿಗುತ್ತೆ ಸುಲಭ ಪರಿಹಾರ
ಸೂರ್ಯಕಾಂತಿ ಬೀಜಗಳು:
ಫೈಬರ್ನಲ್ಲಿ ಸಮೃದ್ಧವಾಗಿರುವ ಸೂರ್ಯಕಾಂತಿ ಬೀಜಗಳ ಸೇವನೆಯು ಚಯಾಪಚಯವನ್ನು ಹೆಚ್ಚಿಸಿ ಬೊಜ್ಜನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿ ಆಗಿದೆ.
ಬೇಳೆಕಾಳು:
ನಿತ್ಯ ನಿಮ್ಮ ಡಯಟ್ನಲ್ಲಿ ಬೇಳೆಕಾಳುಗಳನ್ನು ಬಳಸುವುದರಿಂದಲೂ ತೂಕವನ್ನು ಇಳಿಸಬಹುದು. ಆದರೆ, ನಿತ್ಯ ಒಂದೇ ರೀತಿಯ ಬೇಳೆಕಾಳನ್ನು ಬಳಸುವ ಬದಲಿಗೆ ಬೇರೆ ಬೇರೆ ಬೇಳೆಕಾಳುಗಳನ್ನು ಬಳಸುವುದು, ಅವುಗಳ ಸೂಪ್ ತಯಾರಿಸಿ ಸವಿಯುವುದರಿಂದ ಸೊಂಟದ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಸುಲಭವಾಗಿ ಕರಗಿಸಬಹುದಾಗಿದೆ.
ಇದನ್ನೂ ಓದಿ- Morning Healthy Drinks: ತೂಕ ಇಳಿಕೆಯಿಂದ ಕಾಂತಿಯುತ ಚರ್ಮದವರೆಗೆ ಸಹಾಯಕ ಈ ಮಾರ್ನಿಂಗ್ ಡ್ರಿಂಕ್ಸ್
ಧಾನ್ಯಗಳು:
ನಿಮ್ಮ ಡಯಟ್ನಲ್ಲಿ ಓಟ್ಸ್, ರಾಗಿ ಮತ್ತು ಬಾರ್ಲಿಯಂತಹ ಧಾನ್ಯಗಳನ್ನು ಸೇರಿಸುವುದರಿಂದಲೂ ಆರೋಗ್ಯಕರವಾಗಿ ತೂಕ ಇಳಿಸಬಹುದು ಎಂದು ಹೇಳಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.