Morning Healthy Drinks: ಆರೋಗ್ಯಕರವಾದ ಜೀವನವನ್ನು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ, ಇದಕ್ಕಾಗಿ ನಮ್ಮ ಜೀವನಶೈಲಿಯನ್ನು ಸುಧಾರಿಸುವುದು ಬಹಳ ಮುಖ್ಯ. ಅದರಲ್ಲೂ ಮುಖ್ಯವಾಗಿ ನಾವು ನಮ್ಮ ದಿನವನ್ನು ಹೇಗೆ ಆರಂಭಿಸುತ್ತೇವೆ ಎಂಬುದು ನಮ್ಮ ಆರೋಗ್ಯದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಪ್ರಸ್ತುತ ಬಹುತೇಕ ಜನರನ್ನು ಕಾಡುವ ಸಮಸ್ಯೆ ತೂಕ ಹೆಚ್ಚಳ. ಆಯುರ್ವೇದದ ಪ್ರಕಾರ, ನಾವು ಆರೋಗ್ಯಕರ ಪಾನೀಯಗಳೊಂದಿಗೆ ನಮ್ಮ ದಿನವನ್ನು ಆರಂಭಿಸಿದರೆ ಸುಲಭವಾಗಿ ತೂಕ ಇಳಿಸಬಹುದು. ಮಾತ್ರವಲ್ಲ, ಆಕರ್ಷಕ ಸೌಂದರ್ಯ, ಉತ್ತಮ ಆರೋಗ್ಯವೂ ನಮ್ಮದಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ತೂಕ ಇಳಿಕೆಯಿಂದ ಕಾಂತಿಯುತ ಚರ್ಮದವರೆಗೆ ಸಹಾಯಕ ಈ ಮ್ಯಾಜಿಕಲ್ ಮಾರ್ನಿಂಗ್ ಡ್ರಿಂಕ್ಸ್ ಗಳ ಬಗ್ಗೆ ತಿಳಿಯೋಣ...
ತೂಕ ಇಳಿಕೆಯಿಂದ ಕಾಂತಿಯುತ ಚರ್ಮದವರೆಗೆ ಸಹಾಯಕ ಈ ಮಾರ್ನಿಂಗ್ ಡ್ರಿಂಕ್ಸ್ :
ಅರಿಶಿನದ ನೀರು:
ಉತ್ತಮ ಆಂಟಿ ಬಯೋಟಿಕ್ ಆಗಿರುವ ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಇದು ದೇಹದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆಯುರ್ವೇದದ ಪ್ರಕಾರ, ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಅರಿಶಿನ, ನಿಂಬೆ, ಅಗತ್ಯವಿದ್ದ ಸ್ವಲ್ಪ ಜೇನುತುಪ್ಪವನ್ನು ಮಿಕ್ಸ್ ಮಾಡಿ ಸೇವಿಸಿ. ಇದು ತೂಕ ನಷ್ಟದ ಜೊತೆಗೆ ಉತ್ತಮ ಸೌಂದರ್ಯವರ್ಧಕವೂ ಹೌದು.
ಲೆಮನ್ ವಾಟರ್:
ವಿಟಮಿನ್ ಸಿಯಲ್ಲಿ ಸಮೃದ್ಧವಾಗಿರುವ ನಿಂಬೆ ಹಣ್ಣು ತೂಕ ಇಳಿಕೆಗೆ ಬಹಳ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿರಬಹುದು. ಆದರೆ, ಇದು ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ನಿತ್ಯ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ನಿಂಬೆರಸವನ್ನು ಬೆರೆಸಿ ಕುಡಿಯುವುದರಿಂದ ಆಮ್ಲೀಯತೆ ಸಮಸ್ಯೆ ನಿವಾರಣೆ ಆಗುತ್ತದೆ. ಜೊತೆಗೆ ಈ ಪಾನೀಯವು ನಿಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ, ಅಜೀರ್ಣ ಸಮಸ್ಯೆಯಲ್ಲೂ ಪರಿಹಾರ ನೀಡುತ್ತದೆ.
ಇದನ್ನೂ ಓದಿ- ನೈಸರ್ಗಿಕವಾಗಿ ಬೆಲ್ಲಿ ಫ್ಯಾಟ್ ಕರಗಿಸಲು ಸರಳ ಮನೆಮದ್ದುಗಳು
ಹರ್ಬಲ್ ಡಿಟಾಕ್ಸ್ ಟೀ:
ಹರ್ಬಲ್ ಡಿಟಾಕ್ಸ್ ಟೀ ದೇಹವನ್ನು ನಿರ್ವಿಷಗೊಳಿಸುವ ಮೂಲಕ ತೂಕ ನಷ್ಟಕ್ಕೆ ಪ್ರಯೋಜನಕಾಗಿ ಆಗಿದೆ. ನಿತ್ಯ ಮುಂಜಾನೆ ನಿಮ್ಮ ದಿನವನ್ನು ಹರ್ಬಲ್ ಡಿಟಾಕ್ಸ್ ಟೀ ಮೂಲಕ ಆರಂಭಿಸಿದರೆ ಇದು ಚಯಾಪಚಯ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಬಿಸಿ ನೀರಿನೊಂದಿಗೆ ತುಪ್ಪ:
ಆಯುರ್ವೇದ ಔಷಧದಲ್ಲಿ ತುಪ್ಪವನ್ನು ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ನಂಬಲಾಗಿದೆ. ಆರೋಗ್ಯಕರ ಕೊಬ್ಬಿನಲ್ಲಿ ಸಮೃದ್ಧವಾಗಿರುವ ತುಪ್ಪವನ್ನು ಬಿಸಿ ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಇದು ನಿಮ್ಮ ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಜೀರ್ಣಕ್ರಿಯೆ ಮತ್ತು ಚಯಾಪಚಕ ಕ್ರಿಯೆಗೂ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Weight Loss Drinks: ಮಲಗುವ ಮುನ್ನ ಈ ಡ್ರಿಂಕ್ಸ್ ಕುಡಿದರೆ ಯಾವುದೇ ಜಿಮ್, ವ್ಯಾಯಾಮ ಮಾಡದೆಯೂ ಕರಗುತ್ತೆ ಬೆಲ್ಲಿ ಫ್ಯಾಟ್
ಆಪಲ್ ಸೈಡರ್ ವಿನೆಗರ್:
ಆಪಲ್ ಸೈಡರ್ ವಿನೆಗರ್‌ನಲ್ಲಿರುವ ಅಸಿಟಿಕ್ ಆಮ್ಲವು ದೇಹದಲ್ಲಿ ಶೇಖರಣೆ ಆಗಿರುವ ಕೆಟ್ಟ ಕೊಬ್ಬನ್ನು ಒಡೆಯುವ ಮೂಲಕ ತೂಕ ಇಳಿಕೆಗೆ ಸಹಾಯಕವಾಗಿದೆ. ಅಷ್ಟೇ ಅಲ್ಲ, ನಿತ್ಯ ಬೆಳಿಗ್ಗೆ ಬಿಸಿ ನೀರಿನಲ್ಲಿ ಆಪಲ್ ವಿನೆಗರ್, ಜೇನುತುಪ್ಪ ಮತ್ತು ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಇದು ಚರ್ಮದ ಆರೋಗ್ಯಕ್ಕೂ ಅತ್ಯುತ್ತಮ ಎಂದು ಸಾಬೀತುಪಡಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.