Chanakya Niti for Life: ಮಹಾನ್ ತತ್ವಜ್ಞಾನಿಯಾಗಿದ್ದ ಆಚಾರ್ಯ ಚಾಣಕ್ಯರು ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ರಾಜತಾಂತ್ರಿಕತೆಯ ಬಗ್ಗೆ ಮಾತ್ರವಲ್ಲದೆ, ವಾಸ್ತವಿಕ ಜೀವನದ ಕುರಿತು ಕೆಲ ನೀತಿಗಳನ್ನು ತನ್ನ ನೀತಿ ಶಾಸ್ತ್ರದಲ್ಲಿ ಹೇಳಿದ್ದಾರೆ. ಆಚಾರ್ಯ ಚಾಣಕ್ಯರ ಈ ನೀತಿಗಳನ್ನು ಅನುಸರಿಸಿ ಒಬ್ಬ ವ್ಯಕ್ತಿ ಅನೇಕ ಸಮಸ್ಯೆಗಳನ್ನು ತಪ್ಪಿಸಬಹುದು. ಇದರ ಜೊತೆಗೆ ಸಂಕಷ್ಟದ ಕಾಲವನ್ನು ಕೂಡ ಆತ ಸುಲಭವಾಗಿ ಎದುರಿಸಬಹುದು. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನೆರವಾಗುವ ಆ ಪ್ರಮುಖ ನೀತಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಎಂತಹ ಪರಿಸ್ಥಿತಿ ಎದುರಾದರೂ ಕೂಡ ನಿಮ್ಮ ಈ ಗುಟ್ಟು ಯಾರಿಗೂ ಹೇಳಬೇಡಿ
ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನ ಸಾಕಷ್ಟು ಏರಿಳಿತಗಳಿಂದ ಕೂಡಿರುತ್ತದೆ ಮತ್ತು ಸಾಕಷ್ಟು ಸವಾಲುಗಳು ಎದುರಾಗುತ್ತವೆ ಎಂದು ಹೇಳುತ್ತಾರೆ. ಇಂತಹ ಪರಿಸ್ಥಿತಿಗಳಲ್ಲಿ ಧೈರ್ಯದಿಂದ ಮುಂದಕ್ಕೆ ಸಾಗಬೇಕು ಹಾಗೂ ಕೆಲ ಸಂಗತಿಗಳನ್ನು ಯಾರೊಂದಿಗೂ ಕೂಡ ಹಂಚಿಕೊಳ್ಳಬಾರದು ಎಂದು ಅವರು ಹೇಳುತ್ತಾರೆ. ನಿಮ್ಮ ದುಃಖಗಳು ಹಾಗೂ ಸಮಸ್ಯೆಗಳನ್ನು ಪ್ರತಿಯೊಬ್ಬರ ಮುಂದೆ ವ್ಯಕ್ತಪಡಿಸುವುದು ನಿಮ್ಮನ್ನು ಸಂಕಷ್ಟಕ್ಕೀಡು ಮಾಡಬಹುದು ಹಾಗೂ ನಿಮ್ಮನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಬಹುದು. 

>> ವ್ಯಾಪಾರದಲ್ಲಿ ನಿಮಗೆ ದೊಡ್ಡ ನಷ್ಟ ಉಂಟಾದಾಗ ಎಲ್ಲರ ಮುಂದೆ ಅದನ್ನು ಹೇಳಿಕೊಳ್ಳಬೇಡಿ ಎಂದು ಚಾಣಕ್ಯ ನೀತಿ ಹೇಳುತ್ತದೆ. ಬದಲಿಗೆ ಈ ನಷ್ಟದ ಬಗ್ಗೆ ಯಾರ ಮುಂದೆಯೂ ಮಾತನಾಡದಿರುವುದು ಉತ್ತಮ. ಇಲ್ಲದಿದ್ದರೆ, ಜನರು ನಿಮ್ಮೊಂದಿಗೆ ವ್ಯಾಪಾರ ಮಾಡುವುದರಿಂದ ದೂರ ಸರಿಯಲು ಪ್ರಾರಂಭಿಸುತ್ತಾರೆ, ಇದು ನಿಮ್ಮ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು. ಅಲ್ಲದೆ ನೀವು ಗೌರವವನ್ನು ಸಹ ಕಳೆದುಕೊಳ್ಳುವಿರಿ.

>> ಪತಿ ಅಥವಾ ಪತ್ನಿಯಲ್ಲಿ ದೋಷಗಳಿರುವುದು ಅಥವಾ ಪ್ರತಿದಿನ ಜಗಳವಾಡುವುದು ಒಳ್ಳೆಯದಲ್ಲ. ಇದು ಇಡೀ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನೀವು ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸುವುದು ಉತ್ತಮ. ಹಾಗೆಯೇ ಪತಿ-ಪತ್ನಿಯರ ನಡುವಿನ ಜಗಳದ ಬಗ್ಗೆ ಯಾರಿಗೂ ಹೇಳಬೇಡಿ ಎಂಬುದನ್ನು ಸದಾ ನೆನಪಿನಲ್ಲಿಡಿ. ಪರಸ್ಪರ ಕೆಟ್ಟದ್ದನ್ನು ಮಾತನಾಡಬೇಡಿ. ಇಲ್ಲದಿದ್ದರೆ ಜಗಳ ಮುಗಿದರೂ ಕೂಡ ಜನರ ದೃಷ್ಟಿಯಲ್ಲಿ ನಿಮ್ಮ ಬೆಗೆಗಿನ ಇಮೇಜ್ ಶಾಶ್ವತವಾಗಿ ಹಾಳಾಗುತ್ತದೆ. ಅಲ್ಲದೆ, ನಿಮ್ಮ ವೈವಾಹಿಕ ಜೀವನವು ಇತರರಿಗೆ ತಮಾಷೆಯ ವಿಷಯವಾಗುತ್ತದೆ.


ಇದನ್ನೂ ಓದಿ-Akshaya Tritiya 2023: ಆರು ಶುಭ ಮಹಾಯೋಗಗಳ ನಿರ್ಮಾಣ, ಮಹತ್ವ ಆರು ನೂರು ಪಟ್ಟು ಹೆಚ್ಚು, ಇಲ್ಲಿದೆ ಕಂಪ್ಲೇಟ್ ಮಾಹಿತಿ!

>> ಯಾವುದೇ ಒಂದು ವಿಷಯದ ಕಾರಣ ಅವಮಾನ ನಿಮ್ಮ ಪಾಲಿಗೆ ಬಂದಿದ್ದರೆ, ಅದನ್ನು ಯಾರಿಗೂ ಕೂಡ ಹೇಳಬೇಡಿ. ನಿಮಗಾದ ಅವಮಾನವನ್ನು ನೀವು ನಿಮ್ಮೊಳಗೆಯೇ ಇಟ್ಟುಕೊಳ್ಳುವುದು ಜಾಣತನ. ಅದನ್ನು ಎಲ್ಲರಿಗೂ ಹೇಳಿ ಅವರ ದೃಷ್ಟಿಯಲ್ಲಿರುವ ನಿಮ್ಮ ಬಗೆಗಿನ ಗೌರವವನ್ನು ಕಡಿಮೆ ಮಾಡಿಕೊಳ್ಳಬೇಡಿ.


ಇದನ್ನೂ ಓದಿ-Summer Health Tips: ಬಿರುಬಿಸಿಲಲ್ಲಿ ಸತಾಯಿಸುತ್ತಿದೆಯೇ ಕೊಲೆಸ್ಟ್ರಾಲ್ ಸಮಸ್ಯೆ, ಈ ತರಕಾರಿಗಳನ್ನು ಮನೆಗೆ ತನ್ನಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.