Ketu gochar: ಮುಂದಿನ ಒಂದು ವರ್ಷದವರೆಗೆ ಈ 4 ರಾಶಿಯವರ ಮೇಲೆ ಕೃಪೆ ತೋರುತ್ತಾನೆ ಕೇತು
Ketu Gochar 2023 Date: ನಿಧಾನವಾಗಿ ಚಲಿಸುವ ಗ್ರಹಗಳಲ್ಲಿ ಒಂದಾದ ಕೇತು ಈಗ ಮುಂದಿನ ವರ್ಷ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಅಲ್ಲಿಯವರೆಗೂ ತುಲಾ ರಾಶಿಯಲ್ಲಿ ನೆಲೆಸುವುದರಿಂದ 4 ರಾಶಿಯವರಿಗೆ ಅಧಿಕ ಧನ, ಉನ್ನತ ಸ್ಥಾನ, ಗೌರವ ದೊರೆಯುತ್ತದೆ.
ಬೆಂಗಳೂರು : Ketu Gochar 2023 Date : ಕೇತು ಕಳೆದ ಏಪ್ರಿಲ್ ನಲ್ಲಿ ತುಲಾ ರಾಶಿಯನ್ನು ಪ್ರವೇಶಿಸಿದೆ. ಮುಂದಿನ ವರ್ಷ ಅಂದರೆ, 2023 ಅಕ್ಟೋಬರ್ 30 ರವರೆಗೆ ಇಡೀ ರಾಶಿಯಲ್ಲಿ ಇರಲಿದ್ದಾನೆ. ಸಾಮಾನ್ಯವಾಗಿ, ಕೇತು ಅಂದ ಕೂಡಲೇ ನಕಾರಾತ್ಮಕತೆಯ ಭಾವ ಜನರ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಕೇತು ಕೂಡಾ ಮಂಗಳಕರ ಫಲಿತಾಂಶಗಳನ್ನು ನೀಡುತ್ತಾನೆ. ಯಾವಾಗಲೂ ಹಿಮ್ಮುಖ ಚಲನೆಯಲ್ಲಿರುವ ಕೇತು, ಯಾರ ಜಾತಕದಲ್ಲಿ ಮಂಗಳಕರ ಸ್ಥಾನದಲ್ಲಿರುತ್ತಾನೆಯೋ, ಅವರಿಎ ಅಪಾರ ಸಂಪತ್ತು, ಮತ್ತು ಗೌರವವನ್ನು ಕರುಣಿಸುತ್ತಾನೆ. ಮುಂದಿನ ವರ್ಷದ ಅಕ್ಟೋಬರ್ ತಿಂಗಳವರೆಗೆ 4 ರಾಶಿಯವರಿಗೆ ತುಂಬಾ ಅದೃಷ್ಟವಾಗಲಿದೆ.
ಈ ರಾಶಿಯವರ ಮೇಲೇ ಕೃಪಾ ದೃಷ್ಟಿ ಹರಿಸುತ್ತಿದ್ದಾನೆ ಕೇತು :
ಕರ್ಕಾಟಕ: ಕರ್ಕ ರಾಶಿಯವರಿಗೆ ಈ ಸಮಯ ಉತ್ತಮವಾಗಿರುತ್ತದೆ. ಅವರು ಯಾವುದೇ ಕೆಲಸವನ್ನು ಮಾಡಬೇಕೆಂದಿದ್ದರೂ ಅದರಲ್ಲಿ ಯಶಸ್ಸು ಕಾಣಲಿದ್ದಾರೆ. ವ್ರತ್ತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಲಿದೆ. ಉನ್ನತ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ : Friday Remedy: ಶುಕ್ರವಾರದ ಈ ಬೀಗ ಜಡಿಯುವ ಉಪಾಯ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ
ಸಿಂಹ: ತುಲಾ ರಾಶಿಯಲ್ಲಿ ಕೇತುವಿನ ಸಂಚಾರವು ಸಿಂಹ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ರಾಶಿಯವರ ಧೈರ್ಯ, ಶಕ್ತಿ ಹೆಚ್ಚುತ್ತದೆ. ನಾಯಕರಾಗಿ ದೊಡ್ಡ ಜವಾಬ್ದಾರಿಯನ್ನು ಪಡೆಯಬಹುದು. ಈ ಸಮಯವು ಸಿಂಹ ರಾಶಿಯವರ ಪಾಲಿಗೆ ಭಾರೀ ಶುಭಾವಾಗಿರಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.
ತುಲಾ: ಈ ಕೇತು ಸಂಕ್ರಮವು ತುಲಾ ರಾಶಿಯವರಿಗೂ ಲಾಭದಾಯಕವಾಗಿರಲಿದೆ. ಈ ರಾಶಿಯವರು ಹೊಸ ಉದ್ಯೋಗವನ್ನು ಪಡೆಯಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಆದಾಯ ಸಿಗುತ್ತದೆ.
ಇದನ್ನೂ ಓದಿ: Astrology : ಈ ರಾಶಿಯವರಿಂದ ದೂರವಿರುವುದು ಉತ್ತಮ : ಇವರು ಮಹಾ ಕೋಪಿಷ್ಟರಂತೆ!
ವೃಶ್ಚಿಕ: ಕೇತುವಿನ ಸಂಕ್ರಮಣ ಕಾಲವು ವೃಶ್ಚಿಕ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕೆಲಸದಲ್ಲಿ ಪ್ರಗತಿ ಕಂಡುಬರಲಿದೆ. ಪ್ರಮೋಷನ್-ಇನ್ಕ್ರಿಮೆಂಟ್ ಲಭ್ಯವಾಗಬಹುದು. ವ್ಯಾಪಾರಿಗಳಿಗೂ ಲಾಭವಾಗಲಿದೆ. ಹೆಚ್ಚಿದ ಧೈರ್ಯದಿಂದ, ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸುಲಭವಾಗುತ್ತದೆ. ಜೀವನದಲ್ಲಿ ಸಂತೋಷ ಉಳಿಯುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.