Friday Remedy: ಶುಕ್ರವಾರದ ಈ ಬೀಗ ಜಡಿಯುವ ಉಪಾಯ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ

Closed Lock Remedy: ಕೆಲವೊಮ್ಮೆ ವ್ಯಕ್ತಿಯ ಜೀವನದಲ್ಲಿ ಎಲ್ಲವೂ ಇದ್ದರೂ ಕೂಡ ಆ ವ್ಯಕ್ತಿ ತನ್ನ ಜೀವನದಿಂದ ಸಂತೋಷವಾಗಿರುವುದಿಲ್ಲ. ಹನವಿದ್ದರೂ ಕೂಡ ಆತ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಇತರ ಹಲವು ಸಮಸ್ಯೆಗಳು ವ್ಯಕ್ತಿಯನ್ನು ಸುತ್ತುವರೆದಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಜೋತಿಷ್ಯ ಶಾಸ್ತ್ರದಲ್ಲಿ ಸೂಚಿಸಲಾಗಿರುವ ಬೀಗ ಜಡಿಯುವ ಉಪಾಯ ತುಂಬಾ ಉಪಯುಕ್ತ ಸಾಬೀತಾಗಲಿದೆ.   

Written by - Nitin Tabib | Last Updated : May 26, 2022, 08:41 PM IST
  • ಹಲವು ಬಾರಿ ವ್ಯಕ್ತಿ ಎಷ್ಟೇ ಕಷ್ಟಪಟ್ಟರು ಕೂಡ ಆತನ ಭಾಗ್ಯದ ಬಾಗಿಲು ತೆರೆಯುವುದೇ ಇಲ್ಲ
  • ಆದರೆ, ಶುಕ್ರವಾರ ಈ ಒಂದು ಉಪಾಯ ನಿಮ್ಮ ಭಾಗ್ಯದ ಬಾಗಿಲು ಖಂಡಿತ ತೆರೆಯಲಿದೆ.
  • ವಾಸ್ತು ಶಾಸ್ತ್ರದ ಆ ಉಪಾಯ ಯಾವುದು ತಿಳಿದುಕೊಳ್ಳೋಣ ಬನ್ನಿ
Friday Remedy: ಶುಕ್ರವಾರದ ಈ ಬೀಗ ಜಡಿಯುವ ಉಪಾಯ ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ title=
Friday Remedies

Vastu Tips: ಹಣದುಬ್ಬರದ ಈ ಕಾಲದಲ್ಲಿ ಜನರು ಹಣದ ಹಿಂದೆ ಧಾವಿಸುತ್ತಿರುವುದನ್ನು ನೀವು ಗಮನಿಸಬಹುದು. ದೇವಿ ಲಕ್ಷ್ಮಿಯ ಕೃಪೆಗಾಗಿ ವ್ಯಕ್ತಿ ಹಗಲು-ರಾತ್ರಿ ಶ್ರಮಿಸುತ್ತಾನೆ. ಪೂಜೆ-ಪುನಸ್ಕಾರ ಹಾಗೂ ಉಪಾಸನೆಯಲ್ಲಿ ತೊಡಗುತ್ತಾನೆ. ಜೀವನ ಸುಖ-ಶಾಂತಿ ಹಾಗೂ ಸಮೃದ್ಧಿಯಿಂದ ಕಳೆಯಬೇಕು ಎಂಬುದೇ ಇದರ ಹಿಂದಿನ ಉದ್ದೇಶವಾಗಿರುತ್ತದೆ. ಆದರೆ, ಹಲವು ಬಾರಿ ವ್ಯಕ್ತಿಗೆ ಜೀವನದಲ್ಲಿ ಎಲ್ಲವೂ ಕೂಡ ಪ್ರಾಪ್ತಿಯಾಗುವುದಿಲ್ಲ. ಇದರಿಂದ ಆತ ತುಂಬಾ ಹತಾಶನಾಗುತ್ತಾನೆ. ಆದರೆ, ಜೋತಿಷ್ಯ ಶಾಸ್ತ್ರ ವ್ಯಕ್ತಿಗೆ ಆತನ ಭಾಗ್ಯ ಬೆಳಗಲು ಹಾಗೂ ಮಕಾಡೆ ಮಲಗಿರುವ ಭಾಗ್ಯವನ್ನು ಬಡಿದೆಬ್ಬಿಸುವ ಹಲವು ಉಪಾಯಗಳನ್ನು ಸೂಚಿಸುತ್ತದೆ. ಅವುಗಳಲ್ಲಿ ಶುಕ್ರವಾರದ ಬೀಗ ಜಡಿಯುವ ಉಪಾಯ ಕೂಡ ಒಂದು. ಹಾಗಾದರೆ ಬನ್ನಿ, ಈ ಉಪಾಯದಿಂದ ನಿಮ್ಮ ಭಾಗ್ಯ ಹೇಗೆ ಬದಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. 

ಶುಕ್ರವಾರದ ದಿನ ಈ ಉಪಾಯವನ್ನು ಅನುಸರಿಸಿ
>> ವಾಸ್ತುಶಾಸ್ತ್ರದ ಪ್ರಕಾರ, ಎಲ್ಲಕ್ಕಿಂತ ಮೊದಲು ಶುಕ್ರವಾರ ಮಾರುಕಟ್ಟೆಗೆ ಹೋಗಿ ಒಂದು ಬೀಗ ಜಡಿದಿರುವ ಬೀಗವನ್ನು ಖರೀದಿಸಿ, ಅದನ್ನು ಖುದ್ದಾಗಿ ಆಗಲಿ ಅಥವಾ ಅಂಗಡಿಯ ಮಾಲೀಕನಿಂದಲೇ ಆಗಲಿ ತೆರೆಯಿಸಬೇಡಿ. ಬೀಗ ಜಡಿದಿರುವ ಈ ಬೀಗವನ್ನು ಮನೆಗೆ ತಂದು ಅದನ್ನು ನೀವು ಮಲಗುವ ಜಾಗದಲ್ಲಿ ದಿಂಬಿನ ಬಳಿ ಇರಿಸಿ. ಮಾರನೆಯ ದಿನ ಬೆಳಗ್ಗೆ ಸ್ನಾನ ಮಾಡದೆಯೇ ಆ ಬೀಗವನ್ನು ತೆಗೆದುಕೊಂಡು ಹೋಗಿ ಅಶ್ವತ್ಥ ಮರದ ಕೆಳಗೆ ಇರಿಸಿ. ಅದನ್ನು ಇರಿಸುವಾಗ 'ನನ್ನ ಬೀಗ ಜಡಿದಿರುವ ಭಾಗ್ಯವನ್ನು ನಾನು ನಿನ್ನ ಬಳಿ ಬಿಟ್ಟು ಹೋಗುತ್ತಿದ್ದೇನೆ' ಎಂದು ಹೇಳಿ. ಒಮ್ಮೆ ಈ ರೀತಿ ಮಾಡಿದ ಬಳಿಕ ಹಿಂದಿರುಗಿ ನೋಡಬೇಡಿ ಮತ್ತು ಅದನ್ನು ಪುನಃ ಸ್ಪರ್ಶಿಸಬೇಡಿ.  ನೇರವಾಗಿ ಮನೆಗೆ ಬನ್ನಿ. 

ಇದನ್ನೂ ಓದಿ-Palmistry: ಯಾರ ಹಸ್ತದಲ್ಲಿ ಈ ಚಿಹ್ನೆ ಇರುತ್ತದೆಯೋ ಅವರು 40 ವರ್ಷ ದಾಟುತ್ತಿದ್ದಂತೆಯೇ ಯಶಸ್ಸಿನ ಉತ್ತುಂಗಕ್ಕೆ ಏರುತ್ತಾರೆ

ಇದಾದ ಬಳಿಕ ಯಾವುದೇ ವ್ಯಕ್ತಿ ಆ ಬೀಗ ಜಡಿದ ಬೀಗವನ್ನು ತೆರೆದರೆ, ನಿಮ್ಮ ಭಾಗ್ಯದ ಬಾಗಿಲು ಕೂಡ ತೆರೆದುಕೊಳ್ಳಲಿದೆ. ಈ ಉಪಾಯವನ್ನು ಶುಕ್ಲಪಕ್ಷದ ಶುಕ್ರವಾರ ಮಾಡುವುದು ಸಾಕಷ್ಟು ಶ್ರೇಯಸ್ಸು ತರಲಿದೆ. ಸತತ ಮೂರು ಶುಕ್ರವಾರಗಳಂದು ನೀವು ಈ ಉಪಾಯವನ್ನು ಮಾಡಬೇಕು. ಇದರ ಜೊತೆಗೆ ನೀವು ಕನಕಧಾರಾ ಮಂತ್ರವನ್ನು ಕೂಡ ನಿಯಮಿತವಾಗಿ ಪಠಿಸಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಮುಚ್ಚಿಹೋದ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ ಮತ್ತು ದೇವಿ ಲಕ್ಷ್ಮಿಯ ಕೃಪೆಯಿಂದ ಮನೆಯಲ್ಲಿ ಅಪಾರ ಧನವೃಷ್ಟಿಯಾಗುತ್ತದೆ. 

ಇದನ್ನೂ ಓದಿ-ಶನಿ ಸಾಡೇ ಸಾತಿ, ಧೈಯ್ಯಾದಿಂದ ಬಳಲುತ್ತಿರುವವರು ಮೇ 30 ರಂದು ಈ ಕೆಲಸ ಮಾಡಿದರೆ ಸಿಗಲಿದೆ ಎಲ್ಲಾ ಕಷ್ಟಗಳಿಂದ ಮುಕ್ತಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News