Kharmas 2022-23: ಡಿಸೆಂಬರ್ 16 ರಿಂದ ಖರ್ಮಾಸ ಆರಂಭಗೊಳ್ಳುತ್ತಿದೆ. ಹಿಂದೂ ಧರ್ಮ ಶಾಸ್ತ್ರದಲ್ಲಿ ಖರ್ಮಾಸಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಈ ಮಾಸ ಒಂದೊಮ್ಮೆ ಆರಂಭಗೊಂಡ ಬಳಿಕ, ಮದುವೆ-ವಿವಾಹ ಸೇರಿದಂತೆ ಎಲ್ಲಾ ರೀತಿಯ ಮಂಗಳ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಈ ಬಾರಿಯ ಖರ್ಮಾಸ ಡಿಸೆಂಬರ್ 15 ರಿಂದ ಜನವರಿ 14ರವರೆಗೆ ಇರಲಿದೆ. ಜೋತಿಷ್ಯ ಲೆಕ್ಖಾಚಾರದ ಪ್ರಕಾರ ಖರ್ಮಾಸದಲ್ಲಿ ಕೆಲ ರಾಶಿಗಳ ಜನರ ಮೇಲೆ ಎಲ್ಲಾ ಗ್ರಹಗಳ ವಿಶೇಷ ಕೃಪೆ ಇರಲಿದೆ. ಈ ಗ್ರಹ-ನಕ್ಷತ್ರಗಳ ರಾಶಿ ಪರಿವರ್ತನೆಯಿಂದ ಮಾನವನ ಜೀವನದ ಮೇಲೆ ಭಾರಿ ಪ್ರಭಾವ ಉಂಟಾಗಲಿದೆ. ಜೋತಿಷ್ಯದಲ್ಲಿ ವರ್ನಿಸಲಾಗಿರುವ 12 ರಾಶಿಗಳ ಮೇಲೆ ಇವುಗಳ ನೇರ ಪ್ರಭಾವವನ್ನು ನಾವು ನೋಡಬಹುದು. ಬನ್ನಿ ತಿಳಿದುಕೊಳ್ಳೋಣ,


COMMERCIAL BREAK
SCROLL TO CONTINUE READING

ಮೇಷ ರಾಶಿ- ಮೇಷ ಜಾತಕದವರಿಗೆ ಈ ಸಮಯ ಉತ್ತಮವಾಗಿರಲಿದೆ. ಆದರೆ, ಯಾವುದೇ ಒಂದು ನಿರ್ಧಾರವನ್ನು ಸಾಕಷ್ಟು ಯೋಚನೆಯ ಬಳಿಕವೇ ಕೈಗೊಳ್ಳಿ. ಸಕಾರಾತ್ಮಕ ಕೆಲಸದಲ್ಲಿ ಮನಸ್ಸನ್ನು ತೆಗೆದುಕೊಂಡು ಹೋಗಿ. ಯಶಸ್ಸು ಖಂಡಿತ ನಿಮ್ಮದಾಗಲಿದೆ. ವೃತ್ತಿಯಲ್ಲಿ ಭಾರಿ ಯಶಸ್ಸು ಸಿಗಲಿದೆ. ಈ ಅವಧಿಯಲ್ಲಿ ಪ್ರೇಮ ಪ್ರಸಂಗದಲ್ಲಿ ಸಮಯವನ್ನು ವ್ಯರ್ಥ ಮಾಡಬೇಡಿ. ಪ್ರೀತಿಯಲ್ಲಿ ನಿರಾಶೆ ಸಿಗಬಹುದು. ನಿರುದ್ಯೋಗಿಗಳಿಗೆ ಈ ತಿಂಗಳು ಸಂಕಷ್ಟಗಳಿಂದ ಕೂಡಿರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು.


ಮಿಥುನ ರಾಶಿ- ಈ ರಾಶಿಯ ಜನರ ಪಾಲಿಗೂ ಕೂಡ ಈ ತಿಂಗಳು ಲಾಭದಾಯಕ ಸಾಬೀತಾಗಲಿದೆ. ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗಬಹುದು. ಆದರೆ ಸತತ ಪ್ರಯತ್ನದಿಂದ ನಿಮಗೆ ಯಶಸ್ಸು ಸಿಗಲಿದೆ. ಕಾಯಿಲೆಗಳಿಂದ ಮುಕ್ತಿ ಸಿಗಲಿದೆ. ಕೌಟುಂಬಿಕ ಸುಖ-ಸೌಕರ್ಯಗಳು ಹೆಚ್ಚಾಗಲಿವೆ.ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ. ಘನತೆ ಗೌರವ ಕೂಡ ಹೆಚ್ಚಾಗಲಿದೆ. ಶ್ರೀ ಆಂಜನೇಯನನ್ನು ಪೂಜಿಸಿದರೆ ನಿಮಗೆ ಉತ್ತಮ ಫಲಿತಾಂಶಗಳು ಸಿಗಲಿವೆ.

ಕರ್ಕ ರಾಶಿ- ಕರ್ಕ ಜಾತಕದವರಿಗೆ ಈ ದಿನಗಳು ದೊಡ್ಡ ಸಂತಸದ ಅಥವಾ ಶುಭ ಸುದ್ದಿ ನೀಡಲಿದೆ. ಸರಿಯಾದ ಸಮಯವನ್ನು ತಿಳಿದು ಮುಂದಕ್ಕೆ ಸಾಗಿದರೆ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ತಿಂಗಳ ಬಳಿಕ ಧನ ಹಾಗೂ ನಗದು ಸಮಸ್ಯೆ ನಿಮಗೆ ಇರುವುದಿಲ್ಲ. ದಾಂಪತ್ಯ ಜೀವನ ಸುಖಮಯವಾಗಿರಲಿದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಯಶಸ್ಸು ಸಿಗಲಿದೆ.


ಇದನ್ನೂ ಓದಿ-Hastarekha: ಕೈಯಲ್ಲಿ ಈ ಗುರುತು ಇರುವವರು ಸರ್ಕಾರಿ ನೌಕರಿಯಲ್ಲಿ ಅಪಾರ ಕೀರ್ತಿ ಗಳಿಸುತ್ತಾರೆ

ಮೀನ ರಾಶಿ- ಈ ರಾಶಿಯ ಜನರಿಗೆ ಈ ತಿಂಗಳು ಒಳ್ಳೆಯ ಅವಕಾಶಗಳನ್ನು ತರಲಿದೆ. ನಿಂತು ಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ಹೊಸ ಕಾರ್ಯಗಳು ಆರಂಭಗೊಳ್ಳಲಿವೆ. ಎಲ್ಲಾ ಕಡೆಗಳಿಂದ ಯಶಸ್ಸು ಸಿಗಲಿದೆ. ಹೀಗಿರುವಾಗ ನೀವು ಸ್ವಲ್ಪ ಎಚ್ಚರಿಕೆವಹಿಸವೆಕಾದ ಅವಶ್ಯಕತೆ ಕೂಡ ಇದೆ. ಅವಸರ ಬೇಡ. ಯಾವುದೇ ಸಂಗತಿಯ ಮೇಲೆ ಮಿತಿಯನ್ನು ಮೀರಿ ಪ್ರಯತ್ನಿಸಬೇಡಿ.


ಇದನ್ನೂ ಓದಿ-Big Planet Transit: ಈ ಮಾಸದ ಅತಿದೊಡ್ಡ ರಾಶಿ ಪರಿವರ್ತನೆ ನಾಳೆ, ಈ ರಾಶಿಗಳ ಜನರಿಗೆ ಎಚ್ಚರಿಕೆ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.