Big Planet Transit: ಈ ಮಾಸದ ಅತಿದೊಡ್ಡ ರಾಶಿ ಪರಿವರ್ತನೆ ನಾಳೆ, ಈ ರಾಶಿಗಳ ಜನರಿಗೆ ಎಚ್ಚರಿಕೆ!

Sun Transit 2022: ಎಲ್ಲಾ ಗ್ರಹಗಳಿಗೆ ಸೂರ್ಯದೇವ ರಾಜ. ಪ್ರತಿ ತಿಂಗಳಿಗೊಮ್ಮೆ ಸೂರ್ಯ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನಿಗೆ ವಿಶೇಷ ಸ್ಥಾನಮಾನ ಪ್ರಾಪ್ತಿ ಇದೆ. ಡಿಸೆಂಬರ್ 16ರಂದು ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ.   

Written by - Nitin Tabib | Last Updated : Dec 15, 2022, 07:18 PM IST
  • ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನಿಗೆ ವಿಶೇಷ ಸ್ಥಾನಮಾನ ಪ್ರಾಪ್ತಿ ಇದೆ.
  • ಡಿಸೆಂಬರ್ 16ರಂದು ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ.
Big Planet Transit: ಈ ಮಾಸದ ಅತಿದೊಡ್ಡ ರಾಶಿ ಪರಿವರ್ತನೆ ನಾಳೆ, ಈ ರಾಶಿಗಳ ಜನರಿಗೆ ಎಚ್ಚರಿಕೆ! title=
Sun Transit 2022

Surya Sankranti 2022: ಎಲ್ಲಾ ಗ್ರಹಗಳಿಗೆ ಸೂರ್ಯದೇವ ರಾಜ. ಪ್ರತಿ ತಿಂಗಳಿಗೊಮ್ಮೆ ಸೂರ್ಯ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯದೇವನಿಗೆ ವಿಶೇಷ ಸ್ಥಾನಮಾನ ಪ್ರಾಪ್ತಿ ಇದೆ. ಡಿಸೆಂಬರ್ 16ರಂದು ಸೂರ್ಯ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಈ ದಿನ ಸೂರ್ಯ ವೃಶ್ಚಿಕ ರಾಶಿಯಿಂದ ಧನು ರಾಶಿಗೆ ಸಾಗಲಿದ್ದಾನೆ. ಸೂರ್ಯ ಧನು ರಾಶಿಗೆ ಪ್ರವೇಶಿಸುತ್ತಿದ್ದಂತೆ, ಕೆಲ ರಾಶಿಗಳ ಜನರು ವಿಶೇಷ ಎಚ್ಚರಿಕೆಯನ್ನು ವಹಿಸಬೇಕಾಗಬಕುದು. ಯಾರಿಗೆ ಈ ರಾಶಿ ಪರಿವರ್ತನೆ ಕಷ್ಟವನ್ನು ನೀಡಲಿದೆ ತಿಳಿದುಕೊಳ್ಳೋಣ ಬನ್ನಿ,

ಧನು ರಾಶಿ -  ಭಾವನೆಗಳನ್ನು ನಿಯಂತ್ರಣದಲ್ಲಿಡಿ. ಆತ್ಮವಿಶ್ವಾಸದ ಕೊರತೆ ಕಾಡಲಿದೆ. ಕ್ರೋಧದ ಅತಿರೇಕವನ್ನು ನಿಯಂತ್ರಿಸಿ. ಕೌಟುಂಬಿಕ ಜವಾಬ್ದಾರಿ ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಾನ ಪರಿವರ್ತನೆಯ ಸಾಧ್ಯತೆ ಇದೆ. ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. ದಾಂಪತ್ಯ ಜೀವನದಲ್ಲಿ ಅಡಚಣೆಗಳು ಎದುರಾಗಲಿವೆ.

ಮಕರ ರಾಶಿ - ಆತ್ಮವಿಶ್ವಾಸದ ಕೊರತೆ ಕಾಡಲಿದೆ. ಶಾಂತಚಿತ್ತದಿಂದಿರಲು ಪ್ರಯತ್ನಿಸಿ. ಆರೋಗ್ಯದ ಪ್ರತಿ ಮುಂಜಾಗ್ರತೆವಹಿಸಿ. ಸಂಗ್ರಹಿಸಿಟ್ಟ ಹಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ವಸ್ತ್ರಗಳ ಮೇಲೆ ಹಣ ವ್ಯಯವಾಗಲಿದೆ. ನೌಕರಿಯಲ್ಲಿ ಕಾರ್ಯಕ್ಷೇತ್ರದ ಬದಲಾವಣೆಯ ಎಲ್ಲಾ ಲಕ್ಷಣಗಳಿವೆ. ಪರಿಶ್ರಮ ಹೆಚ್ಚಾಗಲಿದ್ದು, ಖರ್ಚು ಕೂಡ ಹೆಚ್ಚಾಗಲಿದೆ.

ಇದನ್ನೂ ಓದಿ-Sun Transit 2022: ನಾಳೆ ಧನು ಸಂಕ್ರಾಂತಿ, ರಾಶಿಗನುಗುಣವಾಗಿ ಈ ಉಪಾಯ ಮಾಡಿ, ಚಿನ್ನದಂತೆ ಹೊಳೆಯುತ್ತೆ ಅದೃಷ್ಟ

ಕುಂಭ ರಾಶಿ - ಮನಸ್ಸಿನಲ್ಲಿ ನಿರಾಶೆ ಹಾಗೂ ಅಸಂತೋಶದ ಭಾವ ಇರಲಿದೆ. ಆತ್ಮವಿಶ್ವಾಸದ ಕೊರತೆ ಕಾಡಲಿದೆ. ಖರ್ಚು ಹೆಚ್ಚಾಗಲಿದೆ. ಮೇಲಾಧಿಕಾರಿಗಳ ಜೊತೆಗೆ ಭಿನ್ನಮತ ಹೆಚ್ಚಾಗಲಿದೆ. ಪರಿವರ್ತನೆ ಕೂಡ ಸಂಭವಿಸಲಿದೆ. ಸಂಗಾತಿಯ ಜೊತೆಗೆ ಕಾಲ ಕಳೆಯುವುದು ಉತ್ತಮ. ಇಲ್ಲದಿದ್ದರೆ, ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-Relationship Tips: ಪತಿ-ಪತ್ನಿಯರ ನಡುವಿನ ಪ್ರೀತಿ ಹೆಚ್ಚಾಗಬೇಕೆ? ಈ ಸಂಗತಿಗಳು ನಿಮ್ಮ ಆಹಾರದಲ್ಲಿರಲಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News