ನಿಮ್ಮ ಈ ಐದು ಅಭ್ಯಾಸಗಳೇ ಮೂತ್ರ ಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು, ಕಿಡ್ನಿ ಫೈಲ್ ಆಗುವುದಕ್ಕಿಂತ ಮುನ್ನ ಕಾಣಿಸುತ್ತವೆ ಈ ಲಕ್ಷಣಗಳು
ನಿಮಗೂ ಈ ಕೆಳಗಿನ ಅಭ್ಯಾಸಗಳಿದ್ದರೆ ಅದನ್ನು ತಕ್ಷಣ ಬದಲಾಯಿಸಿಕೊಳ್ಳಿ. ಇಲ್ಲವಾದರೆ ಅದು ಮೂತ್ರ ಪಿಂಡ ಅಥವ ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು.
ನವದೆಹಲಿ : ಮೂತ್ರಪಿಂಡವು ದಿನವಿಡೀ ರಕ್ತವನ್ನು ಸ್ವಚ್ಛಗೊಳಿಸುವ ಮತ್ತು ದೇಹದಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಇದಲ್ಲದೇ, ಇದು ದೇಹದಲ್ಲಿನ ಇಲೆಕ್ಟ್ರೋಲೈಟ್ಸ್ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ನಮ್ಮ ಕೆಲವು ಅಭ್ಯಾಸಗಳು ಮೂತ್ರಪಿಂಡದ ಸಮಸ್ಯೆಗೆ (Kidney problem) ಕಾರಣವಾಗಿಬಿಡಬಹುದು. ಮೂತ್ರಪಿಂಡದ ವೈಫಲ್ಯದ (Kidney failure) ಅಪಾಯವನ್ನು ಕೂಡಾ ತಂದೊಡ್ಡಬಹುದು. ಅತಿದೊಡ್ಡ ಸಮಸ್ಯೆ ಎಂದರೆ ಮೂತ್ರಪಿಂಡದ ರೋಗಗಳ ಲಕ್ಷಣಗಳು ಸಾಕಷ್ಟು ಹಾನಿ ಮತ್ತು ವಿಳಂಬದ ನಂತರ ತಿಳಿದುಬರುತ್ತದೆ.
ಮೂತ್ರಪಿಂಡದ ರೋಗಗಳ ಲಕ್ಷಣಗಳು (Kidney Problems Symptoms) :
ಈ ಕೆಳಗಿನ ಲಕ್ಷಣಗಳು ಕಂಡು ಬಂದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
- ಕೆಳ ಹೊಟ್ಟೆ ನೋವು
- ಕಡಿಮೆ ಮೂತ್ರ ವಿಸರ್ಜನೆ
- ದಣಿವು
- ಉಸಿರಾಟದ ತೊಂದರೆಗಳು (Breathing problem)
- ಎದೆ ನೋವು
- ಪಾದಗಳು ಮತ್ತು ಹಿಮ್ಮಡಿಗಳ ಊತ
ಇದನ್ನೂ ಓದಿ: Benefits and Harms of Pani Puri: ನೀವೂ ಕೂಡ ಗೋಲ್ಗಪ್ಪ ಪ್ರಿಯರೇ! ಅದರ ಅನುಕೂಲ- ಅನಾನುಕೂಲಗಳ ಬಗ್ಗೆಯೂ ಗೊತ್ತಿರಲಿ
ಮೂತ್ರಪಿಂಡದ ಸಮಸ್ಯೆಗೆ ಕಾರಣವಾಗುವ ಅಭ್ಯಾಸಗಳು :
ನಿಮಗೂ ಈ ಕೆಳಗಿನ ಅಭ್ಯಾಸಗಳಿದ್ದರೆ ಅದನ್ನು ತಕ್ಷಣ ಬದಲಾಯಿಸಿಕೊಳ್ಳಿ. ಇಲ್ಲವಾದರೆ ಅದು ಮೂತ್ರ ಪಿಂಡ ಅಥವ ಕಿಡ್ನಿ ವೈಫಲ್ಯಕ್ಕೆ (Kidney fail) ಕಾರಣವಾಗಬಹುದು.
1. ನೀವು ಅತಿಯಾದ ಉಪ್ಪನ್ನು ಸೇವಿಸುತ್ತಿದ್ದರೆ, ರಕ್ತದೊತ್ತಡ ಅಧಿಕವಾಗಬಹುದು. ಇದು ಮೂತ್ರಪಿಂಡಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತದೆ.
2. ನೀವು NSAID ಗಳಂತಹ ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಿದ್ದರೆ ಜಾಗರೂಕರಾಗಿರಬೇಕು. ಏಕೆಂದರೆ, ಇದು ಮೂತ್ರಪಿಂಡದ ರೋಗಗಳ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸುತ್ತದೆ.
3. ಸಾಕಷ್ಟು ನೀರು (Water) ಕುಡಿಯುವುದರಿಂದ, ಮೂತ್ರಪಿಂಡವು ಸೋಡಿಯಂ ಮತ್ತು ಜೀವಾಣುಗಳನ್ನು ಸುಲಭವಾಗಿ ಹೊರಹಾಕುತ್ತದೆ. ನೀವು ನೀರು ಕುಡಿಯದಿದ್ದರೆ, ಮೂತ್ರಪಿಂಡಗಳು ಸೋಡಿಯಂ ಮತ್ತು ಜೀವಾಣುಗಳನ್ನು ಹೊರಹಾಕಲು ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
4. ಧೂಮಪಾನ (Smoking) ಮತ್ತು ಮದ್ಯಪಾನ ಮಾಡುವ ಅಭ್ಯಾಸವು ಮೂತ್ರಪಿಂಡಗಳಿಗೆ ಅಪಾಯಕಾರಿ. ಧೂಮಪಾನ ಮತ್ತು ಮದ್ಯಪಾನ ಮಾಡುವ ಜನರಲ್ಲಿ ಮೂತ್ರಪಿಂಡದ ಕಾಯಿಲೆಗಳ (Kidney Problems) ಅಪಾಯವು ದ್ವಿಗುಣಗೊಳ್ಳುತ್ತದೆ ಎಂದು ಸಂಶೋಧನೆಯಲ್ಲಿ ಕಂಡುಬಂದಿದೆ.
5. ಹೆಚ್ಚು ಸಕ್ಕರೆ (Sugar) ತಿನ್ನುವ ಅಭ್ಯಾಸವನ್ನು ಹೊಂದಿದ್ದರೆ, ಅದು ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಕಾರಣವಾಗಬಹುದು. ಮೂತ್ರಪಿಂಡ ವೈಫಲ್ಯಕ್ಕೆ ಈ ಮೂರು ರೋಗಗಳು ಮುಖ್ಯ ಕಾರಣ.
ಇದನ್ನೂ ಓದಿ: Strong Digestive System Tips : ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಮನೆಯಲ್ಲೇ ಸಿಗುವ 5 ಪದಾರ್ಥಗಳನ್ನ ಸೇವಿಸಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ