Kitchen Sink: ಹಿಂದಿನ ಕಾಲದಲ್ಲಿ ಮನೆಯ ಆಚೆ ಅಥವಾ ಹಿತ್ತಲಿನಲ್ಲಿ ಪಾತ್ರೆ ತೊಳೆಯುತ್ತಿದ್ದರು. ಆದರೆ ಇತ್ತೀಚೆಗೆ ಅಡುಗೆ ಮನೆಯ ಸಿಂಕ್‌ನಲ್ಲಿ ಪಾತ್ರೆ ತೊಳೆಯುವ ವಾಡಿಕೆಯಿದೆ. ಆದರೆ ಈ ಸಿಂಕ್‌ನಲ್ಲಿ ತ್ಯಾಜ್ಯ ವಸ್ತುಗಳು ಹೋಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹಾಗೊಂದು ವೇಳೆ ಏನಾದರೂ ತ್ಯಾಜ್ಯ ಈ ಸಿಂಕ್‌ಗೆ ಸೇರದರೆ ಅದು ಬ್ಲಾಕ್‌ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅದೊಂದು ವೇಳೆ ಸಿಂಕ್‌ ಕಟ್ಟಿಕೊಂಡರೆ ವಾಸನೆ ಬರುತ್ತದೆ. ಇದು ಗೃಹಿಣಿಯರಿಗೆ ದೊಡ್ಡ ತಲೆಬಿಸಿಯೇ ಹೌದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಎರಡು ರಾಶಿಯವರನ್ನು ಇದೇ ತಿಂಗಳಿನಿಂದ ಮತ್ತೆ ಕಾಡಲಿದ್ದಾನೆ ಶನಿ ಮಹಾತ್ಮ


ಆದರೆ ಇನ್ಮುಂದೆ ನಿಮ್ಮ ಮನೆಯ ಸಿಂಕ್‌ ಕಟ್ಟಿಕೊಂಡರೆ ಚಿಂತಿಸುವ ಅಗತ್ಯವಿಲ್ಲ. ಅದನ್ನು ಸುಲಭವಾಗಿ ಸರಿಪಡಿಸಲು ಇಲ್ಲೊಂದು ವಿಧಾನವಿದೆ. ಈ ಒಂದು ವಸ್ತುವಿನಿಂದ ಕಿಚನ್‌ ಸಿಂಕ್‌ ಅನ್ನು ಸರಳವಾಗ ಸರಿಪಡಿಸಬಹುದು. 


ಕಿಚನ್ ಸಿಂಕ್ ನಲ್ಲಿ ಸಿಲುಕಿಕೊಂಡ ತ್ಯಾಜ್ಯ ವಸ್ತುಗಳನ್ನು ಕ್ಲೀನ್ ಮಾಡಲು ಅಡುಗೆ ಸೋಡಾ ಮತ್ತು ವಿನೆಗರ್ ಬಳಸುವುದು ಉತ್ತಮ ಮಾರ್ಗವಾಗಿದೆ. ಒಂದು ವೇಳೆ ನಿಮ್ಮ ಕಿಚನ್‌ ಸಿಂಕ್‌ ಕಟ್ಟಿಕೊಂಡರೆ ಸಿಂಕ್ ರಂಧ್ರಕ್ಕೆ ಅರ್ಧ ಕಪ್ ಅಡುಗೆ ಸೋಡಾ ಮತ್ತು ಅರ್ಧ ಕಪ್ ಬಿಳಿ ವಿನೆಗರ್ ಹಾಕಿ. ಸ್ವಲ್ಪ ಹೊತ್ತು ಬಿಟ್ಟು ಬಿಸಿ ನೀರನ್ನು ಸುರಿಯಿರಿ. ಇದರಿಂದ ಸಿಂಕ್ ಕ್ಲೀನ್ ಆಗುತ್ತದೆ.


ಅಡುಗೆ ಸೋಡಾದ ಜೊತೆಗೆ ಉಪ್ಪನ್ನು ಬಳಸಿ ಕೂಡ ಸಿಂಕ್ ಕ್ಲೀನ್ ಮಾಡಬಹುದು. ಒಂದು ಕಪ್ ಅಡುಗೆ ಸೋಡಾ, ಅರ್ಧ ಕಪ್ ಉಪ್ಪನ್ನು ಸಿಂಕ್‌ ರಂಧ್ರಕ್ಕೆ ಹಾಕಿ. ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ಎರಡು ಕಪ್ ಬಿಸಿ ನೀರನ್ನು ಸಿಂಕ್ ಗೆ ಸುರಿಯಿರಿ. ಇದರಿಂದ ಮುಚ್ಚಿ ಹೋದ ಸಿಂಕ್ ಬಹುಬೇಗ ಕ್ಲಿಯರ್ ಆಗುತ್ತದೆ.


ಇದನ್ನೂ ಓದಿ: Bathing with Salt Water: ನೀರಿಗೆ ಉಪ್ಪು ಬೆರೆಸಿ ಸ್ನಾನ ಮಾಡುವುದರಿಂದ ಈ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.