ಬೆಂಗಳೂರು : Shani Transit 2022 Effect : ಜುಲೈನಲ್ಲಿ ಅನೇಕ ದೊಡ್ಡ ಗ್ರಹಗಳ ರಾಶಿ ಪರಿವರ್ತನೆಯಾಗಲಿದೆ. ಇದರಲ್ಲಿ ಶನಿಗ್ರಹವೂ ಸೇರಿದೆ. ಜುಲೈ 12 ರಂದು, ಶನಿಯು ಮಕರ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಜುಲೈ 12 ರಂದು ಮಕರ ರಾಶಿ ಪ್ರವೇಶಿಸಿದ ಶನಿದೇವ ನಂತರ ಜನವರಿ 17, 2023 ರವರೆಗೆ ಮಕರ ರಾಶಿಯಲ್ಲಿಯೇ ಇರುತ್ತಾನೆ. ಇದಕ್ಕೂ ಮೊದಲು ಏಪ್ರಿಲ್‌ನಲ್ಲಿಯೇ, ಶನಿಗ್ರಹ ತನ್ನ ರಾಶಿಯನ್ನು ಬದಲಾಯಿಸಿ ಕುಂಭ ರಾಶಿಯನ್ನು ಪ್ರವೇಶಿಸಿತ್ತು. ಇದಾದ ನಂತರ ಜೂನ್ 5 ರಂದು ಹಿಮ್ಮುಖ ಚಲನೆಯಲ್ಲಿತ್ತು. ಈಗ ಮತ್ತೆ ಶನಿಯು ಜುಲೈ 12 ರಂದು ಮಕರ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ಈ ಬದಲಾವಣೆಯಿಂದಾಗಿ ಎರಡು ರಾಶಿಗಳು ಮತ್ತೆ ಶನಿಯ ಹಿಡಿತಕ್ಕೆ ಬರಲಿವೆ.
ಈ ರಾಶಿಯವರಿಗೆ ಆರಂಭವಾಗಲಿದೆ ಎರಡೂವರೆ ವರ್ಷದ ಶನಿ ದೆಸೆ :
ಶನಿಯು ತನ್ನ ರಾಶಿಯನ್ನು ಬದಲಾಯಿಸಿದ ತಕ್ಷಣ, ಎಲ್ಲಾ ರಾಶಿಯವರಿಗೂ ಶುಭ ಮತ್ತು ಅಶುಭ ಪರಿಣಾಮಗಳು ಕಂಡುಬರುತ್ತವೆ. ಶನಿಯು ಮಕರ ರಾಶಿಯನ್ನು ಪ್ರವೇಶಿಸಿದ ಕೂಡಲೇ ಮಿಥುನ ಮತ್ತು ತುಲಾ ರಾಶಿಯವರಿಗೆ ಶನಿ ಧೈಯ್ಯಾ ಅಂದರೆ ಎರಡೂವರೆ ಶನಿ ದೆಸೆ ಆರಂಭವಾಗಲಿದೆ. ಮುಂದಿನ ವರ್ಷದ ಜನವರಿ 17 ರವರೆಗೆ ಈ ಎರಡು ರಾಶಿಗಳ ಜನರ ಮೇಲೆ ಶನಿಯು ಕ್ರೂರ ದೃಷ್ಟಿ ಬೀರಲಿದ್ದಾನೆ. ಸಾಮಾನ್ಯವಾಗಿ ಶನಿ ಧೈಯ್ಯಾ ಅಂದರೆ ಎರದೂವರೆ ವರ್ಷಗಳ ಶನಿ ಕಾಟ ಇರುತ್ತದೆ. ಆದರೆ ಇಲ್ಲಿ ಈ ರಾಶಿಗಳ ಮೇಲೆ ಎರಡೂವರೆ ವರ್ಷಗಳ ಕಾಲದ ಬದಲು 6 ತಿಂಗಳು ಮಾತ್ರ ಶನಿ ಕಾಟ ಇರಲಿದೆ.
ಇದನ್ನೂ ಓದಿ : Maha Purush Rajyog: 30 ವರ್ಷಗಳ ಬಳಿಕ ತನ್ನ ಮೂಲ ತ್ರಿಕೋನ ರಾಶಿಯಲ್ಲಿ ಈ ಗ್ರಹ, ವಿಶೇಷ ಕಾಕತಾಳೀಯದಿಂದ ಈ ಜನರ ಕನಸು ನನಸು
ಈ ಎರಡು ರಾಶಿಯವರಿಗೆ ಸಿಗಲಿದೆ ಮುಕ್ತಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಏಪ್ರಿಲ್ 29 ರಂದು ಶನಿಯು ಕುಂಭ ರಾಶಿ ಪ್ರವೇಶಿಸುವುದರೊಂದಿಗೆ ಕರ್ಕ ಮತ್ತು ವೃಶ್ಚಿಕ ರಾಶಿಯವರಿಗೆ ಎರಡೂವರೆ ಶನಿ ದೆಸೆ ಆರಂಭವಾಗಿತ್ತು. ಆದರೆ ಜುಲೈ 12 ರಂದು, ಶನಿಯು ಮಕರ ರಾಶಿ ಪ್ರವೇಶಿಸುವುದರೊಂದಿಗೆ ಈ ಎರಡೂ ರಾಶಿಗಳು ಶನಿಕಾಟದಿಂದ ಮುಕ್ತಿ ಪಡೆಯಲಿದೆ. ಆದರೆ ಮತ್ತೆ 6 ತಿಂಗಳ ಬಳಿಕ ಎರಡೂ ರಾಶಿಯವರ ಶನಿಮ್ಹಾತಮಾನ ಹಿಡಿತಕ್ಕೆ ಸಿಲುಕಲಿದ್ದಾರೆ.
ಶನಿ ಧೈಯ್ಯಾ ಪರಿಣಾಮಗಳನ್ನು ತಪ್ಪಿಸಲು ಏನು ಮಾಡಬೇಕು ? :
ಶನಿಯ ವಕ್ರ ದೃಷ್ಟಿ ಯಾರ ಮೇಲೆ ಬೀಳುತ್ತದೆಯೋ ಅವರ ಜೀವನದ ಪ್ರತಿ ಹಂತದಲ್ಲಿಯೂ ಸಮಸ್ಯೆ ಎದುರಿಸಬೇಕಾಗುತ್ತದೆ. ಮಾಡುವ ಎಲ್ಲಾ ಕೆಲಸದಲ್ಲಿಯೂ ಅಡೆತಡೆಗಳು ಎದುರಾಗುತ್ತವೆ. ಹೀಗಾಗಿ ಆ ಸಂದರ್ಭದಲ್ಲಿ ಏನೇ ಕೆಲಸ ಮಾಡಬೇಕಾದರೂ ಎಚ್ಚರದಿಂದಿರಬೇಕು. ಶನಿಯ ಪ್ರಭಾವವನ್ನು ತಪ್ಪಿಸಲು, ಸಾಧ್ಯವಾದಷ್ಟು ದನ ಧರ್ಮಗಳನ್ನು ಮಾಡಿ, ಮಾಡಿ. . ಶನಿವಾರದಂದು ಶನಿ ದೇವರಿಗೆ ಎಳ್ಳೆಣ್ಣೆ ಅರ್ಪಿಸಿ. ಆಂಜನೇಯನ ಭಕ್ತರ ಮೇಲೆ ಶನಿ ಕ್ರೂರವಾಗಿರುವುದಿಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಆಂಜನೇಯ ದೇವರನ್ನು ಪ್ರಾರ್ಥಿಸಿ.
ಇದನ್ನೂ ಓದಿ : ಹುಡುಗರ ಈ ಅಭ್ಯಾಸಗಳಿಗೆ ಹುಡುಗಿಯರು ಮನಸೋಲುತ್ತಾರೆ! ಏನು ಆ ರಹಸ್ಯ ತಿಳಿಯಿರಿ
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ