ನವದೆಹಲಿ: COVID-19 ವೈರಸ್ ಮೂಲಕ ಎಲ್ಲರನ್ನೂ ಒಂದಲ್ಲಾ ಒಂದು ರೀತಿಯಲ್ಲಿ ಕಾಡಿದ 2020 ಅನ್ನು ಬೀಳ್ಕೊಟ್ಟು 2021 ಅನ್ನು ಬರಮಾಡಿಕೊಳ್ಳಲು ಕ್ಷಣಗಣನೆ ಶುರುವಾಗಿದೆ. ಈ ಹಿನ್ನಲೆಯಲ್ಲಿ ಹೊಸ ವರ್ಷದ (New Year)ಸಂಭ್ರಮಾಚರಣೆಯನ್ನು‌  ಜನ ಹೇಗೆ ಮಾಡಲು ಬಯಸಿದ್ದಾರೆ ಎಂದು ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಅದರ ಮಾಹಿತಿಗಳು ಕುತೂಹಲಕಾರಿಯಾಗಿವೆ.


COMMERCIAL BREAK
SCROLL TO CONTINUE READING

ಸಮೀಕ್ಷೆಗೆ ಪ್ರತಿಕ್ರಿಯಿಸಿರುವ ಶೇಕಡಾ 50ಕ್ಕೂ ಹೆಚ್ಚು ಜನರು COVID -19 ಸಾಂಕ್ರಾಮಿಕದ ಕಾರಣಕ್ಕೆ ಮನೆಯಿಂದ ಹೋಗುವುದರ ಬದಲು ಮನೆಯಲ್ಲೇ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದಾರೆ‌.


ಶೇಕಡಾ 65ಕ್ಕೂ ಹೆಚ್ಚು ಜನರು ಆನ್‌ಲೈನ್‌ನಲ್ಲಿ (Online Booking) ಆಹಾರವನ್ನು ಆರ್ಡರ್ ಮಾಡಲು ಯೋಜಿಸುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.


ಇದನ್ನೂ ಓದಿ: New Year : ಬೆಂಗಳೂರಿನಲ್ಲಿ ಹೊಸ ವರ್ಷ ಸೆಲಬ್ರೇಟ್ ಮಾಡ್ತೀರಾ? ಮೊದಲು ಇದನ್ನೊಮ್ಮೆ ಓದಿ


'ಹಾಸ್ಪಿಟಾಲಿಟಿ ಕನ್ಸಲ್ಟೆಂಟ್ ಅವಿಗ್ನಾ ಸೊಲ್ಯೂಷನ್ಸ್' (Hospitality Consultant Avighna Solutions) ದೇಶಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಮತದಾನ ಮಾಡಿದವರ ಪೈಕಿ ಶೇಕಡಾ 10ರಷ್ಟು ಜನರು ಮಾತ್ರ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಿಗೆ ಹೋಗಲು ಉತ್ಸುಕರಾಗಿದ್ದಾರೆಂದು ತಿಳಿದುಬಂದಿದೆ.


ಶೇಕಡಾ 15ರಷ್ಟು ಜನರು ಬೆಟ್ಟ ಅಥವಾ ಬೀಚ್‌ಗಳಿಗೆ ಹೋಗಿ ಹೊಸ ವರ್ಷ 2021 (New Year 2021) ಬರಮಾಡಿಕೊಳ್ಳಲು ಯೋಜಿಸಿದ್ದಾರೆ.


ಇದನ್ನೂ ಓದಿ: New Year ಸಂಭ್ರಮಾಚರಣೆಗೆ ತಡೆ: ನೈಟ್ ಕರ್ಪ್ಯೂ ಹೋಗ್ತಿದ್ದಂತೆ ಬರ್ತಿದೆ ಟಾಪ್ ರೂಲ್ಸ್!


ಡಿಸೆಂಬರ್ 1 ರಿಂದ ಡಿಸೆಂಬರ್ 21 ರವರೆಗೆ 4,500ಕ್ಕೂ ಹೆಚ್ಚು ಜನರನ್ನು ಮಾತನಾಡಿಸಿ ಸಮೀಕ್ಷೆ ನಡೆಸಲಾಗಿದೆ. ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ಮಾಹಿತಿ ನೀಡಲಾಗಿದೆ ಎಂದು ಗುರಗಾಂವ್ ಮೂಲದ ಕನ್ಸಲ್ಟೆನ್ಸಿಯ ಸಂಸ್ಥಾಪಕ ಮಾಯಾಂಕ್ ಶೇಖರ್ ಸುದ್ದಿ ಸಂಸ್ಥೆ ಪಿಟಿಐ (PTI)ಗೆ ತಿಳಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.