ಬೆಂಗಳೂರು : ಹೊಸ ವರ್ಷಾಚರಣೆ ಅಂದ್ರೆ, ಬೆಂಗಳೂರಿನಲ್ಲಿ ಒಂದು ವಿಶೇಷ ಕಳೆ ಇರುತ್ತದೆ. ರಾಜಧಾನಿಯ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ, ವೈಟ್ ಫೀಲ್ಡ್ ಮುಂತಾದ ಪ್ರದೇಶಗಳು ಹೊಸ ರಂಗು ಪಡೆದಿರುತ್ತವೆ. ಹೊಸ ವರ್ಷಾಚರಣೆಗೆ ವಿಶೇಷವಾಗಿ ಸಜ್ಜಾಗಿರುತ್ತವೆ.
ಈ ಸಲವೂ ಹಾಗೇ ಇರುತ್ತಾ ಸಿದ್ದತೆ..?
ನ್ಯೂ ಇಯರ್ ಸೆಲೆಬ್ರೇಟ್ ( New Year) ಮಾಡಲು ಬೆಂಗಳೂರಿಗೆ ಬರುವವರು, ಬೆಂಗಳೂರಿನಲ್ಲೇ ಇರುವವರು ಕೆಲ ವಿಚಾರಗಳನ್ನು ತಿಳಿದುಕೊಳ್ಳುವುದು ಉತ್ತಮ. ರೂಪಾಂತರಿತ ಕರೋನಾ (Mutated Corona) ಹರಡುವುದನ್ನು ತಡೆಯುವ ಉದ್ದೇಶದಿಂದ, ಈ ಸಲ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರು ನಗರ ಪೊಲೀಸ್ ಕಮಿಶನರ್ (Bangaluru Commissioner of Police) ಅವೆಲ್ಲವನ್ನೂ ಸುದ್ದಿಗೋಷ್ಟಿಯಲ್ಲಿಹೇಳಿದ್ದಾರೆ..
ALSO READ : New Year 2021 Auspicious Yog:ವರ್ಷಾರಂಭದ ಮೊದಲ ದಿನವೇ ಮೂರು ಮಹಾ ಸಂಯೋಗಗಳ ನಿರ್ಮಾಣ
ಬೆಂಗಳೂರು ಕಮಿಷನರ್ ಹೇಳಿದ್ದೇನು..?
1. ಬೆಂಗಳೂರಿನಲ್ಲಿ ಡಿಸೆಂಬರ್ 31 ರಂದು ನಿಷೇಧಾಜ್ಞೆ
2. ಡಿ.31ರ ಸಂಜೆ 6 ಗಂಟೆಯಿಂದ ಜನವರಿ 1 ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ
3. ರಾಜಧಾನಿಯ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆಗೆ (Celebration) ಅವಕಾಶ ಇಲ್ಲ
4. ಇಡೀ ಬೆಂಗಳೂರಿನಲ್ಲಿ ನಾಕಾಬಂದಿ ಇರಲಿದೆ.
5. ಭದ್ರತೆಗಾಗಿ 10 ಸಾವಿರ ಪೊಲೀಸರ ನಿಯೋಜನೆ
6. ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ
7. ಪಬ್ ಗಳಲ್ಲಿ (PUB) ಇವೆಂಟ್ ಶೋ ನಡೆಸುವಂತಿಲ್ಲ
8. ವಿಶೇಷ ಡಿಜೆ ಸೆಟ್ ಹಾಕುವಂತಿಲ್ಲ
9. ಕೊವಿಡ್ (COVID-19)ತಡೆ ಮಾರ್ಗಸೂಚಿ ಪಾಲನೆ ಕಡ್ಡಾಯ
10. ಡಿ. 31 ರಂದು ಡ್ರ್ಯಾಗಿಂಗ್ ರೇಸ್, ವ್ಹೀಲಿಂಗ್ ರೇಸ್ ಮಾಡಿದರೆ ಕಠಿಣ ಕ್ರಮ
11. ನಿಯಮ ಮೀರಿದವರ ವಿರುದ್ಧ ಕಠಿಣ ಕ್ರಮ
Section 144 CrPC to be imposed in Bengaluru from 6pm on 31st December till 6am on 1st January: Kamal Pant, Commissioner of Police, Bengaluru pic.twitter.com/Ue75YFfKNG
— ANI (@ANI) December 28, 2020
ALSO READ : ಹೊಸ ವರ್ಷದಲ್ಲಿ Mobile ಫೋನ್‌ಗಳ ರೀಚಾರ್ಜ್ ಆಗಲಿದೆ ದುಬಾರಿ!
ಇವಿಷ್ಟು ಕಮಲ್ ಪಂತ್ (Kamal Panth) ಸುದ್ದಿಗೋಷ್ಠಿಯ ಹೈ ಲೈಟ್ಸ್. ಎಂಜಿ ರಸ್ತೆ, ಕಮರ್ಶಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.