ಕನಸಿನಲ್ಲಿ ಹಣ ಕಾಣಿಸುತ್ತಿದೆಯೇ ? ಈ ಕನಸಿನ ಅರ್ಥವೇನು ಗೊತ್ತಾ ?
ಸ್ವಪ್ನ ಶಾಸ್ತ್ರದ ಪ್ರಕಾರ ನಮಗೆ ಬೀಳುವ ಪ್ರತಿ ಕನಸು ಮುಂದೆ ಘಟಿಸಬಹುದಾದ ಘಟನೆಗಳ ಮುನ್ಸೂಚನೆ ನೀಡುತ್ತದೆ. ನಿಮ್ಮ ಕನಸಿನಲ್ಲಿ ಅನೇಕ ಬಾರಿ ಹಣವನ್ನು ನೋಡಿರಬಹುದು. ಹಾಗಾದರೆ ಕನಸಿನಲ್ಲಿ ಹಣ ಕಂಡರೆ ಅದು ಶುಭವೋ ? ಅಶುಭವೋ ? ಈ ಕನಸು ನೀಡುವ ಮುನ್ಸೂಚನೆ ಏನು ನೋಡೋಣ.
ಬೆಂಗಳೂರು : ನಿದ್ದೆ ಮಾಡುವಾಗ ಕನಸು ಬೀಳುವುದು ಸಾಮಾನ್ಯ. ಕನಸು ಬೀಳದಿರುವವರು ಯಾರೂ ಇರಲಿಕ್ಕಿಲ್ಲ. ಆದರೆ ನಿದ್ದೆಯಲ್ಲಿ ಬೀಳುವ ಕನಸು ಸಾಮಾನ್ಯ ಎಂದು ನಾವು ಸುಮ್ಮನಾಗುತ್ತೇವೆ. ಆದರೆ ನಮಗೆ ಬೀಳುವ ಪ್ರತಿ ಕನಸಿಗೂ ಅದರದ್ದೇ ಆದ ಅರ್ಥವಿರುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿನ ಅರ್ಥಗಳನ್ನು ವಿವರಿಸಿ ಹೇಳಲಾಗಿದೆ. ಕನಸುಗಳಲ್ಲಿ ಕೆಲವು ಒಳ್ಳೆಯ ಕನಸು ಇನ್ನು ಕೆಲವು ಕೆಟ್ಟ ಕನಸು ಎಂದು ವಿಂಗಡಿಸಲಾಗಿದೆ. ಕೆಲವೊಂದು ಕನಸುಗಳು ಬಿದ್ದ ಮಾರನೇ ದಿನ ಅದೇನೋ ಒಂದು ರೀತಿಯ ಉಲ್ಲಾಸವಿರುತ್ತದೆ. ಇನ್ನು ಕೆಲವು ಕನಸಿನ ನಂತರ ಮನಸ್ಸು ಚಡಪಡಿಸಲು ಆರಂಭಿಸುತ್ತದೆ. ಚಿಂತೆ ಹೆಚ್ಚಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ ನಮಗೆ ಬೀಳುವ ಪ್ರತಿ ಕನಸು ಮುಂದೆ ಘಟಿಸಬಹುದಾದ ಘಟನೆಗಳ ಮುನ್ಸೂಚನೆ ನೀಡುತ್ತದೆ. ನಿಮ್ಮ ಕನಸಿನಲ್ಲಿ ಅನೇಕ ಬಾರಿ ಹಣವನ್ನು ನೋಡಿರಬಹುದು. ಹಾಗಾದರೆ ಕನಸಿನಲ್ಲಿ ಹಣ ಕಂಡರೆ ಅದು ಶುಭವೋ ? ಅಶುಭವೋ ? ಈ ಕನಸು ನೀಡುವ ಮುನ್ಸೂಚನೆ ಏನು ನೋಡೋಣ.
ಬ್ಯಾಂಕಿನಲ್ಲಿ ಇಟ್ಟಿರುವ ಹಣ ಕನಸಿನಲ್ಲಿ ಬಂದರೆ :
ಬ್ಯಾಂಕಿನಲ್ಲಿ ಹಣವನ್ನು ಠೇವಣಿ ಮಾಡುತ್ತಿರುವಂತೆ ಕನಸು ಕಂಡರೆ, ಅದನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಕನಸು ಶೀಘ್ರದಲ್ಲೇ ಯಾವ ಮೂಲೆಯಿಂದಾದರೂ ಹಣ ಬಂದು ನಿಮ್ಮ ಕೈ ಸೇರುತ್ತದೆ ಎನ್ನುವುದರ ಸಂಕೇತವಾಗಿರುತ್ತದೆ. ಮತ್ತೊಂದೆಡೆ, ಯಾರಿಂದಲಾದರೂ ಹಣ ಪಡೆಯುತ್ತಿರುವಂತೆ ಕನಸು ಕಂಡರೆ, ಅದು ಕೂಡಾ ಎಲ್ಲಿಂದಲಾದರೂ ಹಣ ಸಿಗುತ್ತದೆ ಎನ್ನುವುದನ್ನು ಸೂಚಿಸುತ್ತದೆ. ಇದರರ್ಥ ಕೆಟ್ಟ ದಿನಗಳು ಕೊನೆಗೊಂಡು ಒಳ್ಳೆಯ ದಿನಗಳು ಬರಲಿವೆ ಎನ್ನುವುದಾಗಿರುತ್ತದೆ.
ಇದನ್ನೂ ಓದಿ : Vastu Tips: ಮನೆಯ ಈ ದಿಕ್ಕಿನಲ್ಲಿ ಟಿವಿ ಇಡುವುದರಿಂದ ಧನ ನಷ್ಟ
ನಾಣ್ಯಗಳು ಕಂಡರೆ :
ಕನಸಿನಲ್ಲಿ ಅನೇಕ ನಾಣ್ಯಗಳನ್ನು ಒಟ್ಟಿಗೆ ನೋಡುವುದು ಶುಭವಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ ಹೀಗೆ ಅನೇಕ ನಾಣ್ಯಗಳು ಒಟ್ಟಿಗೆ ಕನಸಿನಲ್ಲಿ ಬಂದರೆ ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಇನ್ನು ಕನಸಿನಲ್ಲಿ ಹಣವನ್ನು ಕಳೆದುಕೊಳ್ಳುವುದು ಕೂಡಾ ಅಶುಭವೆಂದು ಹೇಳಲಾಗುತ್ತದೆ. ಇದು ಆರ್ಥಿಕ ಸಂಕಷ್ಟದ ಮುನ್ಸೂಚನೆಯಾಗಿರುತ್ತದೆ.
ಹೂತಿಟ್ಟ ಹಣ ಕನಸಿನಲ್ಲಿ ಕಂಡರೆ :
ಸಾಕಷ್ಟು ಸಲ ಎಲ್ಲೋ ಹೂತಿಟ್ಟ ಹಣ ಕನಸಿನಲ್ಲಿ ಕಾಣಿಸುತ್ತದೆ. ಆದರೆ ಇದು ಬರೀ ಕನಸು ಎಂದುಕೊಂಡು ಕನಸು ಬಿದ್ದವರು ಕೂಡಾ ಸುಮ್ಮನಾಗಿ ಬಿಡುತ್ತಾರೆ. ಆದರೆ ಹೂತಿಟ್ಟ ಹಣ ಕನಸಿನಲ್ಲಿ ಬಂದರೆ ಅದು ಮುಂದೆ ಆಗಲಿರುವ ಭಾರೀ ಲಾಭದ ಮುನ್ಸೂಚನೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುವುದು ಮಾತ್ರವಲ್ಲ ಭದ್ರವಾಗಿರಲಿದೆ ಎನ್ನುವ ಸಂಕೇತವನ್ನು ಈ ಕನಸು ನೀಡುತ್ತದೆ.
ಇದನ್ನೂ ಓದಿ : 2023 ರಲ್ಲಿ ಸ್ವಂತ ಮನೆಯ ಒಡೆಯರಾಗುತ್ತಾರೆ ಈ ರಾಶಿಯವರು, ಕೂಡಿ ಬರುವುದು ಕಂಕಣ ಭಾಗ್ಯ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.