Rudraksha Significance: ಹಿಂದೂ ಧರ್ಮದಲ್ಲಿ ರುದ್ರಾಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಭಗವಾನ್ ಭೋಲೆನಾಥನ ಕಣ್ಣೀರಿನಿಂದ ರುದ್ರಾಕ್ಷವು ಹುಟ್ಟಿಕೊಂಡಿದೆ ಎಂದು ನಂಬಲಾಗಿದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳಿವೆ. ರುದ್ರಾಕ್ಷವನ್ನು ಧರಿಸುವುದರಿಂದ ಆಗುವ ಪ್ರಯೋಜನಗಳನ್ನು ಧರ್ಮ, ಜ್ಯೋತಿಷ್ಯ ಮತ್ತು ವಿಜ್ಞಾನದಲ್ಲಿಯೂ ಹೇಳಲಾಗಿದೆ. ಇದನ್ನು ಧರಿಸುವುದರಿಂದ ಅನೇಕ ತೊಂದರೆಗಳಿಂದ ರಕ್ಷಿಸುತ್ತದೆ, ಆಲೋಚನೆಯನ್ನು ಧನಾತ್ಮಕವಾಗಿರಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಶುದ್ಧವಾದ ಮನಸ್ಸಿನಿಂದ ನೇಮ-ನಿಷ್ಠೆಯಿಂದ ಧರಿಸಿದಾಗ ಮಾತ್ರ ಅದರ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ ಮತ್ತು ರುದ್ರಾಕ್ಷವನ್ನು ಧರಿಸಿದ ನಂತರ, ವ್ಯಕ್ತಿಯು ಅಗತ್ಯ ನಿಯಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ ರುದ್ರಾಕ್ಷವು ಅಶುದ್ಧವಾಗುತ್ತದೆ ಮತ್ತು ಲಾಭದ ಬದಲು ಹಾನಿಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ರುದ್ರಾಕ್ಷಿಯನ್ನು ಧರಿಸುವುದಕ್ಕೆ ಸಂಬಂಧಿಸಿದ ಈ ನಿಯಮಗಳನ್ನು ತಿಳಿಯುವುದು ಬಹಳ ಮುಖ್ಯ. 


COMMERCIAL BREAK
SCROLL TO CONTINUE READING

ಈ ಜನರು ರುದ್ರಾಕ್ಷವನ್ನು ಧರಿಸಬಾರದು :
ಮಗುವಿನ ಜನನದ ನಂತರ, ತಾಯಿ ಮತ್ತು ಮಗು ಕೆಲವು ದಿನಗಳವರೆಗೆ ಅಶುದ್ಧವಾಗಿರುತ್ತಾರೆ ಎಂದು ನಂಬಲಾಗಿದೆ. ಅಂತಹ ಸಮಯದಲ್ಲಿ ತಾಯಿಯು ಅಪ್ಪಿತಪ್ಪಿಯೂ ರುದ್ರಾಕ್ಷವನ್ನು ಧರಿಸಬಾರದು. ಇದಲ್ಲದೇ ರುದ್ರಾಕ್ಷವನ್ನು ಧರಿಸಿರುವವರು ಕೂಡ ತಾಯಿ ಮತ್ತು ಮಗು ಇರುವಂತಹ ಕೋಣೆಗೆ ಹೋಗಬಾರದು. ರುದ್ರಾಕ್ಷವನ್ನು ಧರಿಸಿದರೆ, ಸೂತಕವನ್ನು ತೆಗೆದ ನಂತರವೇ ನವಜಾತ ಶಿಶು ಅಥವಾ ಮಗುವಿನ ತಾಯಿಯ ಬಳಿಗೆ ಹೋಗಿ ಅಥವಾ ತಾಯಿ ಮತ್ತು ಮಗುವಿನ ಕೋಣೆಗೆ ಪ್ರವೇಶಿಸುವ ಮೊದಲು ರುದ್ರಾಕ್ಷಿಯನ್ನು ತೆಗೆದುಹಾಕುವುದು ಒಳ್ಳೆಯದು ಎನ್ನಲಾಗುತ್ತದೆ.


ಇದನ್ನೂ ಓದಿ- Solar Eclipse 2022: ಈ ದಿನದಂದು ವರ್ಷದ ಮೊದಲ ಸೂರ್ಯಗ್ರಹಣ, ಈ 4 ರಾಶಿಯವರ ಜೀವನದಲ್ಲಿ ವಿಶೇಷ ಬದಲಾವಣೆ


ಈ ಸಮಯದಲ್ಲಿ ತಪ್ಪಾಗಿಯೂ ರುದ್ರಾಕ್ಷವನ್ನು ಧರಿಸಬೇಡಿ :
ರುದ್ರಾಕ್ಷವನ್ನು ಧರಿಸುವಾಗ ತಪ್ಪಾಗಿಯೂ ಧೂಮಪಾನ ಮಾಡಬೇಡಿ ಮತ್ತು ಮಾಂಸಾಹಾರಿ ಆಹಾರವನ್ನು ಸೇವಿಸಬೇಡಿ. ಈ ಕಾರಣದಿಂದಾಗಿ, ರುದ್ರಾಕ್ಷವು ಅಶುದ್ಧವಾಗುತ್ತದೆ ಮತ್ತು ಅದು ನಿಮಗೆ ಪ್ರಯೋಜನದ ಬದಲು ದೊಡ್ಡ ಹಾನಿಯನ್ನುಂಟುಮಾಡುತ್ತದೆ.


ಮಲಗುವಾಗಲೂ ರುದ್ರಾಕ್ಷವನ್ನು ಧರಿಸಬಾರದು. ಪ್ರತಿ ರಾತ್ರಿ ಮಲಗುವ ಮುನ್ನ ರುದ್ರಾಕ್ಷಿಯನ್ನು ತೆಗೆದು ದಿಂಬಿನ ಕೆಳಗೆ ಇಡುವುದು ಉತ್ತಮ. ಇದರಿಂದ ಮನಸ್ಸು ಶಾಂತವಾಗಿರುತ್ತದೆ, ಕೆಟ್ಟ ಕನಸುಗಳು ಬರುವುದಿಲ್ಲ ಮತ್ತು ಒಳ್ಳೆಯ ನಿದ್ದೆ ಬರುತ್ತದೆ ಎಂಬ ನಂಬಿಕೆ ಇದೆ.


ಇದನ್ನೂ ಓದಿ- Hanuman Jayanti 2022: ಶನಿ-ರಾಹು-ಕೇತುಗಳ ಕಾಟದಿಂದ ಮುಕ್ತಿ ಪಡೆಯಲು ಈ ಉಪಾಯಗಳನ್ನು ಮಾಡಿ


ಶವಯಾತ್ರೆಯಲ್ಲಿಯೂ ರುದ್ರಾಕ್ಷವನ್ನು ಧರಿಸಬಾರದು. ಹೀಗೆ ಮಾಡುವುದರಿಂದ ರುದ್ರಾಕ್ಷವು ಅಶುದ್ಧವಾಗುತ್ತದೆ ಮತ್ತು ಅದು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.