ಈ Blood Group ಹೊಂದಿರುವ ಜನರು ತುಂಬಾ ಕ್ರಿಯೇಟಿವ್ ಆಗಿರುತಾರೆ, ನಿಮ್ಮ ಬ್ಲಡ್ ಗ್ರೂಪ್ ಯಾವುದು?

ಜ್ಯೋತಿಷ್ಯದಲ್ಲಿ, ಜೀವನದ ಎಲ್ಲಾ ಅಂಶಗಳ ಬಗ್ಗೆ ಭವಿಷ್ಯ ಹೇಳಲಾಗಿದೆ. ಜಾತಕ ಮತ್ತು ಹಸ್ತ ರೇಖೆಗಳನ್ನು ನೋಡಿ ಭವಿಷ್ಯವನ್ನು ಹೇಳುವಂತೆ, ವ್ಯಕ್ತಿಯ ರಕ್ತದ ಗುಂಪಿನ ಮೂಲಕವೂ ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು.

Written by - Nitin Tabib | Last Updated : Apr 10, 2022, 09:34 PM IST

    ಸುಳ್ಳು ಹೇಳುವವರನ್ನು ತಿರಸ್ಕರಿಸುತ್ತಾರೆ ಈ ಜನ

  • ಇತರರ ಸಹಾಯಕ್ಕೆ ಯಾವಾಗಲು ತತ್ಪರರಾಗಿರುತ್ತಾರೆ
  • ವಿಶಾಲ ಹೃದಯ ಹೊಂದಿರುತ್ತಾರೆ
ಈ Blood Group ಹೊಂದಿರುವ ಜನರು ತುಂಬಾ ಕ್ರಿಯೇಟಿವ್ ಆಗಿರುತಾರೆ, ನಿಮ್ಮ ಬ್ಲಡ್ ಗ್ರೂಪ್ ಯಾವುದು? title=
Blood Group Astrology

ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ರಕ್ತದ ಗುಂಪಿನ ಮೂಲಕ ವ್ಯಕ್ತಿಯ ಭವಿಷ್ಯ ಮತ್ತು ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಸಂಗತಿಗಳನ್ನು ತಿಳಿದುಕೊಳ್ಳಬಹುದು. ವಾಸ್ತವದಲ್ಲಿ, ಜ್ಯೋತಿಷ್ಯಶಾಸ್ತ್ರದ ಅಡಿಯಲ್ಲಿ ಹಸ್ತಸಾಮುದ್ರಿಕ ಶಾಸ್ತ್ರ, ಸಂಖ್ಯಾಶಾಸ್ತ್ರ, ಮುಖ ಓದುವಿಕೆ, ಸಹಿ ಓದುವಿಕೆ, ಜಾತಕ ವಿಶ್ಲೇಷಣೆ ಇತ್ಯಾದಿಗಳನ್ನು ಒಳಗೊಂಡಿದೆ. ತನ್ಮೂಲಕ ಜೀವನದ ವಿವಿಧ ಅಂಶಗಳ ಬಗ್ಗೆ ಭವಿಷ್ಯ ಹೇಳಬಹುದು. 'ಬಿ' ರಕ್ತದ ಗುಂಪಿನವರ ವ್ಯಕ್ತಿತ್ವ ಹೇಗಿರುತ್ತದೆ ತಿಳಿದುಕೊಳ್ಳೋಣ ಬನ್ನಿ,

'ಬಿ' ರಕ್ತದ ಗುಂಪಿನ ಜನರು ಹೇಗಿರುತ್ತಾರೆ?
ಈ ರಕ್ತದ ಗುಂಪಿನ ಜನರು ಇತರರ ಕಲ್ಯಾಣದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಇವರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಸಿದ್ಧರಾಗಿರುತ್ತಾರೆ. ಕೆಲವೊಮ್ಮೆ ಇವರು ಇತರರಿಗೆ ಒಳ್ಳೆಯದನ್ನು ಮಾಡುವ ತವಕದಲ್ಲಿ ತಮ್ಮ ಸ್ವಂತ ಆಸಕ್ತಿಯನ್ನು ಸಹ ಮರೆತುಬಿಡುತ್ತಾರೆ. ಇದಲ್ಲದೆ, ಈ ರಕ್ತದ ಗುಂಪಿನ ಜನರು ಭಾವನಾತ್ಮಕರಾಗಿರುತ್ತಾರೆ. ಇದಲ್ಲದೆ, ಇವರು ಪ್ರತಿಯೊಂದು ಸಂಬಂಧಕ್ಕೂ ವಿಶೇಷ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಸೌಂದರ್ಯದ ವಿಷಯದಲ್ಲಿ ಇವರು ಇತರರನ್ನು ಮೀರಿಸುತ್ತಾರೆ.

'ಬಿ' ರಕ್ತದ ಗುಂಪಿನ ಜನರ ಗುಣಲಕ್ಷಣಗಳು
ಈ ರಕ್ತದ ಗುಂಪಿನ ಜನರು ಬಹಳ ಸೃಜನಶೀಲರು ಎಂದು ಪರಿಗಣಿಸಲಾಗುತ್ತದೆ. ಈ ಜನರು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಮಯ ತೆಗೆದುಕೊಳ್ಳುವುದಿಲ್ಲ. ಅಲ್ಲದೆ, ಇವರು ತಮ್ಮ ಆಸೆಗಳನ್ನು ಪೂರೈಸಲು ಏನು ಬೇಕಾದರೂ ಮಾಡುತ್ತಾರೆ. ಇದಲ್ಲದೆ, ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಮಾತ್ರ ಸ್ನೇಹ ಮಾಡುತ್ತಾರೆ.

ಪ್ರೀತಿಯ ಜೀವನ ಮತ್ತು ವೈವಾಹಿಕ ಜೀವನ
'ಬಿ' ರಕ್ತದ ಗುಂಪಿನ ಜನರು ಶುದ್ಧ ಹೃದಯವಂತರು. ಈ ಜನರು ಸುಳ್ಳುಗಾರರು ಅಥವಾ ಸುಳ್ಳು ಹೇಳುವವರನ್ನು ದ್ವೇಷಿಸುತ್ತಾರೆ. ಇವರ ಸ್ನೇಹಿತರ ವಲಯದಲ್ಲಿ ಯಾರಾದರೂ ಸುಳ್ಳು ಹೇಳಲು ಹೋದರೆ, ಅವರು ತಕ್ಷಣವೇ ಅವರಿಂದ ದೂರವಾಗುತ್ತಾರೆ. ಈ ರಕ್ತದ ಗುಂಪಿನವರನ್ನು ಮದುವೆಯಾಗುವವರು ಅದೃಷ್ಟವಂತರು. ಇವರು ತಮ್ಮ ಸಂಗಾತಿಯನ್ನು ತುಂಬಾ ಗೌರವಿಸುತ್ತಾರೆ.

ಇದನ್ನೂ ಓದಿ-Hanuman Jayanti 2022: ಶನಿ-ರಾಹು-ಕೇತುಗಳ ಕಾಟದಿಂದ ಮುಕ್ತಿ ಪಡೆಯಲು ಈ ಉಪಾಯಗಳನ್ನು ಮಾಡಿ

'ಬಿ' ರಕ್ತದ ಗುಂಪಿನ ಜನರ ನ್ಯೂನತೆಗಳು
'ಬಿ' ರಕ್ತದ ಗುಂಪಿನ ಜನರು ಬಹು-ಕಾರ್ಯ ಮಾಡುವವರಲ್ಲ. ಕೋಪವು ಇವರ ಮೂಗಿನ ಮೇಲೆ ಇರುತ್ತದೆ. ಇದಲ್ಲದೇ ದುಂದುವೆಚ್ಚದ ವಿಷಯದಲ್ಲಿಯೂ ಇವರು ಇತರರಿಗಿಂತ ಮುಂದಿರುತ್ತಾರೆ.

ಇದನ್ನೂ ಓದಿ-Weekly Horoscope: ಬಡ್ತಿ ಸಿಗಲಿದೆಯಾ ಅಥವಾ ಕೆಲಸ ಬಿಗಡಾಯಿಸಲಿದೆಯಾ? ಇಲ್ಲಿದೆ ವಾರದ ರಾಶಿಫಲ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರೀಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News