ವಾರಾಂತ್ಯದಲ್ಲಿ ಹೇರ್ ಕಟ್ ಮಾಡಿಸುವ ಮೊದಲು ಈ ವಿಚಾರ ತಿಳಿದುಕೊಳ್ಳಿ
ಶನಿವಾರ, ಭಾನುವಾರ ಬಂತೆಂದರೆ ಸಲೂನ್ ಗಳಲ್ಲಿ ಜನ ತುಂಬಿರುತ್ತಾರೆ. ಆದರೆ ಶಾಸ್ತ್ರ ಶಕುನಗಳನ್ನು ನಂಬುವುದಾದರೆ, ಶಾಸ್ತ್ರಗಳ ಪ್ರಕಾರ ಶನಿವಾರ, ಭಾನುವಾರ ಕೂದಲಿಗೆ ಕತ್ತರಿ ಹಾಕಬಾರದಂತೆ.
ನವದೆಹಲಿ : ವಾರಪೂರ್ತಿಯ ಬ್ಯುಸಿ ಕೆಲಸಗಳಿಂದ ಕೆಲವೊಂದು ಕೆಲಸಗಳನ್ನು ವಾರಾಂತ್ಯಕ್ಕೇ ಇಟ್ಟುಕೊಂಡು ಬಿಡುತ್ತೇವೆ. ಈ ಕೆಲಸಗಳು ವಾರಾಂತ್ಯಕ್ಕೇ (week end) ಮಾಡುವಂತದ್ದು ಎಂದು ಮೊದಲೇ ನಿರ್ಧರಿಸಿಕೊಂಡಿರುತ್ತೇವೆ. ಅಂಥಹ ಕೆಲಸಗಳಲ್ಲಿ ಕ್ಷೌರ ಅಥವಾ ಹೇರ್ ಕಟ್ (Hair cut) ಕೂಡಾ ಒಂದು. ಶನಿವಾರ, ಭಾನುವಾರ ಬಂತೆಂದರೆ ಸಲೂನ್ ಗಳಲ್ಲಿ ಜನ ತುಂಬಿರುತ್ತಾರೆ. ಆದರೆ ಶಾಸ್ತ್ರ ಶಕುನಗಳನ್ನು ನಂಬುವುದಾದರೆ, ಶಾಸ್ತ್ರಗಳ ಪ್ರಕಾರ ಶನಿವಾರ, ಭಾನುವಾರ (Sunday) ಕೂದಲಿಗೆ ಕತ್ತರಿ ಹಾಕಬಾರದಂತೆ. ಹಾಗಿದ್ದರೆ ಯಾವ ದಿನ ಕ್ಷೌರ ಮಾಡಿಸಬಹುದು ಯಾವ ದಿನ ಮಾಡಿಸಬಾರದು ತಿಳಿಯೋಣ..
ಧನ ಮತ್ತು ಬುದ್ದಿ ಹಾನಿಯಾಗುತ್ತದೆ :
ಮಹಾಭಾರತದ ಶಿಸ್ತು ಪರ್ವದಲ್ಲಿ ಹೇಳಿರುವ ಪ್ರಕಾರ, ಭಾನುವಾರ (Sunday) ಅಂದರೆ ಸೂರ್ಯ ದೇವನ ದಿನ. ಭಾನುವಾರದ ದಿನ ಕ್ಷೌರ (Hair cut) ಮಾಡಿಸಿದರೆ ಸಂಪತ್ತು, ಬುದ್ಧಿವಂತಿಕೆ ಮತ್ತು ಧರ್ಮ ನಾಶವಾಗುತ್ತದೆಯಂತೆ. ಹಾಗಾಗಿ ಈ ದಿನ ಯಾರೂ ಕ್ಷೌರ ಮಾಡಿಸಬಾರದಂತೆ. ಸಾಮಾನ್ಯವಾಗಿ ರಜಾದಿನವಾದದ ಕಾರಣ ಭಾನುವಾರ ಹೆಚ್ಚಿನವರು ಕ್ಷೌರ ಮಾಡಿಸುತ್ತಾರೆ. ಆದರೆ ಭಾನುವಾರ ಕ್ಷೌರ ಮಾಡಿಸಿದರೆ ಅಶುಭ ಫಲ ದೊರೆಯುತ್ತದೆಯಂತೆ.
ಇದನ್ನೂ ಓದಿ : Relationship: ಪುರುಷರಲ್ಲಿ ಮಹಿಳೆಯರು ನೋಡುವುದೇನು? ಇಂಪ್ರೆಷನ್ ಹೊಡೆಯೋ ಮುನ್ನ ಈ ಸುದ್ದಿ ಓದ್ರಿ
- ಇನ್ನು ಸೋಮವಾರ (Monday) ಕೂಡಾ ಕ್ಷೌರಕ್ಕೆ ಹೇಳಿ ಮಾಡಿಸಿದ ದಿನವಲ್ಲ. ಈ ದಿನದ ಕ್ಷೌರ ಮಾಡಿಸಿದರೆ, ಮಾನಸಿಕ ಕ್ಷೋಭೆಗೆ ಕಾರಣವಾಗುತ್ತದೆಯಂತೆ, ಇನ್ನು ಈ ದಿನ ಕ್ಷೌರ ಮಾಡಿಸುವುದು ಮಕ್ಕಳಿಗೂ ಒಳ್ಳೆಯದಲ್ಲ ಎನ್ನಲಾಗಿದೆ.
- ಧರ್ಮಗ್ರಂಥಗಳ ಪ್ರಕಾರ, ಮಂಗಳವಾರ (tuesday) ಕ್ಷೌರ ಮಾಡಿಸಿದರೆ ಅಕಾಲಿಕ ಸಾವಿಗೆ ಕಾರಣವಾಗುತ್ತದೆಯಂತೆ.
- ಕೂದಲು ಮತ್ತು ಉಗುರುಗಳನ್ನು ಕತ್ತರಿಸಲು ಬುಧವಾರ (Wedbnesday) ಅತ್ಯಂತ ಶುಭ ದಿನ. ಈ ದಿನ ಕ್ಷೌರ ಮಾಡಿಸಿದರೆ, ಉಗುರು ಕತ್ತರಿಸಿದರೆ, ಸಂಪತ್ತನ್ನು ಹೆಚ್ಚಿಸುತ್ತದೆ ಮತ್ತು ಸಮೃದ್ಧಿಯಾಗುತ್ತದೆಯಂತೆ.
ಇದನ್ನೂ ಓದಿ : Vastu tips : ಮನೆಯಲ್ಲಿ ಈ ಒಂದು ವಸ್ತುಯಿದ್ದರೆ ಸಾಕು Positive energy ತುಂಬಿರುತ್ತದೆ
- ಗುರುವಾರ (Thursday) ಕ್ಷೌರದಿಂದಾಗಿ, ಹಣದ ನಷ್ಟದ ಜೊತೆಗೆ, ಇದು ಗೌರವಕ್ಕೂ ಧಕ್ಕೆಯುಂಟಾಗುತ್ತದೆ.
ಬುಧವಾರದಂತೆ, ಶುಕ್ರವಾರವೂ (Friday) ಹೇರ್ ಕಟ್ ಮತ್ತು ಉಗುರು ಕತ್ತರಿಸಲು ಒಳ್ಳೆಯ ದಿನ ಎಂದು ಪರಿಗಣಿಸಲಾಗುತ್ತದೆ. ಶುಕ್ರವಾರ ಕೂದಲು ಕತ್ತರಿಸುವುದರಿಂದ , ಲಾಭ ಮತ್ತು ಖ್ಯಾತಿಯ ಹೆಚ್ಚುತ್ತದೆಯಂತೆ.
- ಶನಿವಾರ ಕ್ಷೌರ ಮಾಡಿಸುವುದು ಕೂಡಾ ಒಳ್ಳೆಯದಲ್ಲ. ಇದು ಕೂಡಾ ಅಕಾಲಿಕ ಸಾವಿಗೆ ಕಾರಣವಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ : ಈ ನಾಲ್ಕು ಚಿಹ್ನೆ ಕೈಯಲ್ಲಿದ್ದರೆ ಹಣದ ಕೊರತೆಯಾಗುವುದೇ ಇಲ್ಲ; ದೇವರ ಕೃಪೆ ಸದಾ ಇವರ ಮೇಲಿರುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.