BreakUP: ವಾರದ ಈ ದಿನ ಅತಿ ಹೆಚ್ಚು ಬ್ರೇಕ್ ಅಪ್ ಆಗುತ್ತವಂತೆ... ಕಾರಣ ಇಲ್ಲಿದೆ

BreakUP: ಸಂಬಂಧ ಮುರಿದು ಬೀಳುವುದರಿಂದ ಆತ್ಮವಿಶ್ವಾಸ ಕುಂದುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Last Updated : Dec 16, 2020, 12:21 PM IST
  • ಸಂಬಂಧ ಮುರಿದು ಬೀಳುವುದರಿಂದ ಆತ್ಮವಿಶ್ವಾಸ ಕುಂದುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
  • ಶುಕ್ರವಾರ ಹೆಚ್ಚಿನ ಸಂಬಂಧಗಳು ಮುರಿಯುತ್ತವೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
  • ವರದಿಯ ಪ್ರಕಾರ, ಹೆಚ್ಚಿನ ಸಂಗಾತಿಗೆಳು ಮಂಗಳವಾರ ಸೇರಲು ಇಷ್ಟಪಡುತ್ತಾರೆ.
BreakUP: ವಾರದ ಈ ದಿನ ಅತಿ ಹೆಚ್ಚು ಬ್ರೇಕ್ ಅಪ್ ಆಗುತ್ತವಂತೆ... ಕಾರಣ ಇಲ್ಲಿದೆ title=
BreakUP

ನವದೆಹಲಿ: BreakUP ಸಂಬಂಧ ಮುರಿದುಬಿದ್ದಾಗ ಜನರು ನಿರಾಶರಾಗುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಇದರಿಂದ ಕೆಲವೊಮ್ಮೆ ಜನರು ಖಿನ್ನತೆಗೆ ಒಳಗಾಗುತ್ತಾರೆ. ಸಂಬಂಧದ ಮುರಿದು ಬೀಳುವಿಕೆ (BreakUP) ಆತ್ಮವಿಶ್ವಾಸವನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಜನರೊಂದಿಗೆ ಹೆಚ್ಚು ಸಂವಹನ ನಡೆಸದಿರುವುದು, ತಮ್ಮಲ್ಲಿಯೇ  ನಿರತರಾಗಿರುವುದು, ಕೆಲಸದಲ್ಲಿ ಭಾವನೆ ಇಲ್ಲದಿರುವುದು ಮುಂತಾದ ವಿಷಯಗಳನ್ನು ಸಹ ಕಾಣಬಹುದು. ವಾರದಲ್ಲಿನ ಒಂದು ದಿನ ಸಂಬಂಧ ಮುರಿದು ಬೀಳುವ ಅಪಾಯ ಹೆಚ್ಚಾಗಿರುತ್ತದೆ ಎಂದು ಇತ್ತೀಚೆಗೆ ಒಂದು ಸಂಶೋಧನೆ ತೋರಿಸಿದೆ. ಸಂಬಂಧ ಮುರಿದುಹೋಗುವ ಕಾರಣವನ್ನೂ ಈ ವರದಿಯಲ್ಲಿ ನೀಡಲಾಗಿದೆ.

ವಾರದ ದಿನಗಳಲ್ಲಿ ಶುಕ್ರವಾರ ಅತಿ ಹೆಚ್ಚು ಸಂಬಂಧಗಳು ಮುರಿಯುತ್ತವೆ ಎಂದು ಹೇಳಲಾಗಿದೆ.  ಇಂಗ್ಲಿಷ್ ವೆಬ್‌ಸೈಟ್ encounters ಸಾವಿರಾರು ಜನರ ಮೇಲೆ ಈ ಸಂಶೋಧನೆಯನ್ನು ಮಾಡಿದೆ. ವರದಿಯ ಪ್ರಕಾರ, ಜನರು ಶುಕ್ರವಾರ ಪ್ರೀತಿಯಲ್ಲಿ ಹೆಚ್ಚು ಮೋಸ ಮಾಡುತ್ತಾರೆ. ಶುಕ್ರವಾರ, ಸಂಗಾತಿಗಳು ಪರಸ್ಪರ ಹೆಚ್ಚು ಜಗಳವಾಡುತ್ತಾರೆ. ಅಲ್ಲದೆ, ಈ ದಿನ, ಸಂಬಂಧ ಮುರಿದುಹೋಗುವ ಅಪಾಯವೂ ಹೆಚ್ಚು. ಈ ದಿನ, ಸಂತಾತಿಗಳು ಪರಸ್ಪರ ಹೆಚ್ಚು ಸತ್ಯವನ್ನು ಮರೆಮಾಡುತ್ತಾರೆ. ವರದಿಯ ಪ್ರಕಾರ, ವಿಶ್ವಾದ್ಯಂತ ಸುಮಾರು 75 ಪ್ರತಿಶತದಷ್ಟು ವಿಚ್ಛೇದನೆಗಳು ಶುಕ್ರವಾರ ಸಂಭವಿಸುತ್ತವೆ.

ಇದನ್ನು ಓದಿ- Higher Risk Of Coronavirus: ಮದುವೆಯಾಗಲು Interest ಇಲ್ಲವೇ...? ಈ ಸುದ್ದಿ Miss ಮಾಡದೆ ಓದಿ

ಈ ಪರಿಸ್ಥಿತಿಯಲ್ಲಿ ಸುಳ್ಳನ್ನು ಅವಲಂಭಿಸಬೇಕಾಗುತ್ತದೆ
ಈ ಕುರಿತು ಮಾತನಾಡಿರುವ illicit encounters ವಕ್ತಾರ, "ರಿಲೇಶನ್ ಶಿಪ್ ನಲ್ಲಿ ಧೋಕಾ ಸಿಗುವುದು ಹೊಸ ಸಂಗತಿಯಲ್ಲಿ. ಒಂದು ವೇಳೆ ಸಂಗಾತಿಗಳು ಪರಸ್ಪರ ಮೆಚ್ಚುತ್ತಿಲ್ಲ ಎಂದಾದರೆ ಅವರು ಪರಸ್ಪರರಿಂದ ಬೆನ್ನುಬಿಡಿಸಲು ಯೋಚಿಸುತ್ತಾರೆ. ಅವರು ಬೇರೆಯಾರನ್ನಾದರೂ ಮೆಚ್ಚುತ್ತಿರುವ ಸಾಧ್ಯತೆಯೂ ಕೂಡ ಇಲ್ಲಿ ಇರುತ್ತದೆ. ಆದರೆ, ತಮ್ಮ ಎದುರಿಗಿರುವ ವ್ಯಕ್ತಿಯ ಜೊತೆಗೆ ಅವರು ಈ ಸಂಗತಿಯನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ಅವರು ಸುಳ್ಳನ್ನು ಅವಲಂಭಿಸಬೇಕಾಗಿ ಬರುತ್ತದೆ.

ಇದನ್ನು ಓದಿ-Sleepy Hollow Village: ಇಲ್ಲಿನ ಜನ ನಡು ರಸ್ತೆಯಲ್ಲಿಯೇ ನಿದ್ರೆಗೆ ಜಾರುತ್ತಾರಂತೆ.., ಕಾರಣ ಇಲ್ಲಿದೆ

ಈ ಸ್ಥಿತಿಗಳಲ್ಲಿ ಬ್ರೇಕ್ ಅಪ್ ಅವಕಾಶಗಳು ಹೆಚ್ಚುತ್ತವೆ.
ವರದಿಯ ಪ್ರಕಾರ ಬಹುತೇಕ ಸಂಗಾತಿಗಳು ಮಂಗಳವಾರ ಸೇರಲು ಬಯಸುತ್ತಾರೆ. ರಿಲೇಶನ್ ಶಿಪ್ ನಿಂದ ದೂರ ಹೋಗಲು ಅವರು ಸುಳ್ಳು ಹೇಳುತ್ತಾರೆ. ಕೆಲ ಜನರು ಪರಸ್ಪರ ಬೇಸತ್ತಿರುವುದು ಕೂಡ ಒಂದು ಕಾರಣ. ಈ ಕಾರಣ ಬ್ರೇಕ್ ಅಪ್ ಚಾನ್ಸ್ ಗಳು ಹೆಚ್ಚಾಗುತ್ತವೆ.

Trending News