Chandra Grahan: ಇಂದು ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸುತ್ತಿದೆ. ಭಾರತದಲ್ಲಿಯೂ ಗ್ರಹಣ ಕಾಣಿಸಿಕೊಳ್ಳುವುದರಿಂದ ಸೂತಕದ ಅವಧಿ ಮಾನ್ಯವಾಗಿರುತ್ತದೆ. ಇಂದಿನ ಪಂಚಾಂಗ, ಗ್ರಹಣ ಕಾಲ, ಎಲ್ಲೆಲ್ಲಿ ಗ್ರಹಣ ಗೋಚರಿಸಲಿದೆ ಎಂಬ ಬಗ್ಗೆ  ಆಚಾರ್ಯ ಡಾ.ಮುರುಳಿಧರ್ ಅವರಿಂದ ಇಲ್ಲಿದೆ ಪ್ರಮುಖ ಮಾಹಿತಿ.


COMMERCIAL BREAK
SCROLL TO CONTINUE READING

ಇಂದಿನ ಪಂಚಾಂಗ:
ದಿನಾಂಕ-  8 ನವೆಂಬರ್ 2022, ವಾರ-ಮಂಗಳವಾರ, ನಕ್ಷತ್ರ- ಭರಣಿ, ತಿಥಿ-ಕಾರ್ತಿಕ/ ದೊಡ್ಡ ಗೌರಿ ಹುಣ್ಣಿಮೆ, ಯೋಗ-ವ್ಯತಿಪಾತ, ಕರಣ- ಬವಕರಣ 


ಇದನ್ನೂ ಓದಿ- Lunar Eclipse 2022: ಕಾರ್ತಿಕ ಪೂರ್ಣಿಮೆಯಂದು ಚಂದ್ರಗ್ರಹಣ, ಸೂರ್ಯನಂತೆ ಬೆಳಗಲಿದೆ ಈ ರಾಶಿಯವರ ಅದೃಷ್ಟ


ವಿಶೇಷ ಮಾಹಿತಿ: 1) ಚಂದ್ರ ಗ್ರಹಣ 2) ಗುರುನಾನಕ್ ಜಯಂತಿ 


ಗ್ರಹಣ: ರಾಹುಗ್ರಸ್ತಗ್ರಸ್ತೋದಯ ಚಂದ್ರಗ್ರಹಣ


ಗ್ರಹಣ ಕಾಲ:-
ಗ್ರಹಣ ಸ್ಪರ್ಶ- ಮಧ್ಯಾಹ್ನ 02:38
ಮಧ್ಯ ಕಾಲ- ಸಂಜೆ 04:29
ಮೋಕ್ಷ ಕಾಲ- ಸಂಜೆ 06:19


ಭಾರತದಲ್ಲಿ ಗ್ರಹಣ ಗೋಚರಿಸುವ ಸ್ಥಳಗಳು:
ಅಗರ್ತಲ, ಅಜವಾಲ್, ಗಯಾ, ಪಾಟ್ನ, ಭುವನೇಶ್ವರ, ಶಿಲ್ಲಾಂಗ್, ಗ್ಯಾಂಗ್ ಟಕ್, ರಾಂಚಿ, ಪಾಂಡೀಚೇರಿ, ಮುಂಬೈ, ಭೂಪಾಲ್, ದೆಹಲಿ, ಗಾಂಧಿನಗರ, ಶ್ರೀನಗರ, ಶಿಮ್ಲಾ, ತಿರುವನಂತಪುರ, ಹೈದರಾಬಾದ್, ಪಣಜಿ, ರಾಯಪುರ.


ಇದನ್ನೂ ಓದಿ- Lunar Eclipse 2022: ಚಂದ್ರಗ್ರಹಣ, ಸೂತಕದ ಅವಧಿಯಲ್ಲಿ ಏನು ಮಾಡಬಾರದು ಗೊತ್ತಾ..?


ಭೋಜನ ವಿಚಾರ: ಗ್ರಹಣ ಕಾಲದಲ್ಲಿ ಸೂತಕದ ಅವಧಿಯಲ್ಲಿ ಆಹಾರ ಸೇವನೆ ನಿಷಿದ್ಧ. ಹಾಗಾಗಿ, ಗ್ರಹಣದ ಸೂತಕದ ಅವಧಿ ಆರಂಭವಾಗುವ ಮೊದಲು ಬೆಳಿಗ್ಗೆ 11:50ರವರೆಗೆ ಆಹಾರ ಸೇವಿಸಬಹುದು. ಗ್ರಹಣ ಮೋಕ್ಷ ಮುಗಿದ ನಂತರ ಸ್ನಾನ ಮಾಡಿ, ನಂತರ ಹೊಸದಾಗಿ ಉಪಹಾರವನ್ನು ಸಿದ್ಧಪಡಿಸಿಕೊಂಡು, ದೇವರಿಗೆ ಅರ್ಪಿಸಿ ಬಳಿಕ ಆಹಾರ ಸೇವಿಸಬಹುದು.


- ಆಚಾರ್ಯ ಡಾ.ಮುರುಳಿಧರ್ (digitalguru6655@gmail.com)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.