Lunar Eclipse 2022: ನಾಳೆ ಚಂದ್ರಗ್ರಹಣ, ಸೂತಕದ ಅವಧಿಯಲ್ಲಿ ಏನು ಮಾಡಬಾರದು ಗೊತ್ತಾ..?

ಜ್ಯೋತಿಷ್ಯದಲ್ಲಿ ಗ್ರಹಣವನ್ನು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಅನೇಕ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಕೆಲವು ಗಂಟೆಗಳ ಮೊದಲು ನಡೆಯುವ ಸೂತಕದಲ್ಲಿಯೂ ಸಹ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

Written by - Puttaraj K Alur | Last Updated : Nov 7, 2022, 03:26 PM IST
  • ಗ್ರಹಣದ ವೇಳೆ ಒಂದೇ ಸ್ಥಳದಲ್ಲಿ ಕುಳಿತು ದೇವರನ್ನು ಸ್ಮರಿಸಿ ಮಂತ್ರ ಪಠಿಸಿದ್ರೆ ಒಳತಾಗುತ್ತದೆ
  • ಗ್ರಹಣದ ವೇಳೆ ಯಾವುದೇ ರೀತಿಯ ಮಂಗಳಕರ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ
  • ಗ್ರಹಣದ ಜೊತೆಗೆ ಸೂತಕ ಕಾಲದಲ್ಲೂ ಯಾವುದೇ ರೀತಿಯ ಕೆಲಸ ಮಾಡದಂತೆ ಜ್ಯೋತಿಷ್ಯದಲ್ಲಿ ಹೇಳಲಾಗಿದೆ
Lunar Eclipse 2022: ನಾಳೆ ಚಂದ್ರಗ್ರಹಣ, ಸೂತಕದ ಅವಧಿಯಲ್ಲಿ ಏನು ಮಾಡಬಾರದು ಗೊತ್ತಾ..? title=
ನಾಳೆ ಚಂದ್ರಗ್ರಹಣ

 ನವದೆಹಲಿ: ಜ್ಯೋತಿಷ್ಯದ ಪ್ರಕಾರ ಗ್ರಹಣವನ್ನು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಯಾವುದೇ ರೀತಿಯ ಮಂಗಳಕರ ಕೆಲಸವನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ದಿನದಂದು ದೇವಾಲಯಗಳಲ್ಲಿ ಪೂಜೆ ಮಾಡುವುದನ್ನು ಸಹ ನಿಷೇಧಿಸಲಾಗಿದೆ. ಆದರೆ ಗ್ರಹಣದ ಸಮಯದಲ್ಲಿ ಒಂದೇ ಸ್ಥಳದಲ್ಲಿ ಕುಳಿತು ದೇವರನ್ನು ಸ್ಮರಿಸಿ ಮಂತ್ರಗಳನ್ನು ಪಠಿಸುವುದರಿಂದ ಎಷ್ಟೋ ಪಟ್ಟು ಹೆಚ್ಚು ಫಲ ಸಿಗುತ್ತದೆ. ಅದೇ ರೀತಿ ಈ ಅವಧಿಯಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಅನ್ನೋದರ ಬಗ್ಗೆ ಧರ್ಮಗ್ರಂಥಗಳಲ್ಲಿ ಅನೇಕ ವಿಷಯಗಳನ್ನು ಹೇಳಲಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಚಂದ್ರಗ್ರಹಣದ ಸೂತಕ ಅವಧಿಯು 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಹಣದ ಜೊತೆಗೆ ಸೂತಕ ಕಾಲದಲ್ಲೂ ಅನೇಕ ಕೆಲಸಗಳನ್ನು ಮಾಡದಂತೆ ಜ್ಯೋತಿಷ್ಯದಲ್ಲಿ ಸಲಹೆ ನೀಡಲಾಗಿದೆ. ಈ ವೇಳೆ ಸ್ವಲ್ಪ ನಿರ್ಲಕ್ಷ್ಯವಾದರೂ ಸಮಸ್ಯೆಗಳು ಎದುರಾಗುತ್ತವಂತೆ. ನಾಳೆ (ನವೆಂಬರ್ 8) ವರ್ಷದ ಕೊನೆಯ ಚಂದ್ರಗ್ರಹಣವು ಹುಣ್ಣಿಮೆಯ ದಿನಾಂಕದಂದು ಸಂಭವಿಸಲಿದೆ. ಇದರ ಸೂತಕವು ಬೆಳಗ್ಗಿನಿಂದಲೇ ಆರಂಭವಾಗುತ್ತದೆ ಮತ್ತು ಗ್ರಹಣ ಮುಗಿಯುವವರೆಗೂ ಇರುತ್ತದೆ. ಸೂತಕದ ಸಮಯದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯಿರಿ.

ಇದನ್ನೂ ಓದಿ: Alum Benefits: ಹರಳೆಣ್ಣೆಯ ಈ ಸುಲಭ ಪರಿಹಾರ ವೈವಾಹಿಕ ಜೀವನದ ಈ ಸಮಸ್ಯೆಯನ್ನೂ ನಿವಾರಿಸುತ್ತದೆ!

ಗ್ರಹಣದ ಸಮಯದಲ್ಲಿ ಏನು ಮಾಡಬೇಕು?

  • ಖಗ್ರಾಸ ಚಂದ್ರಗ್ರಹಣದ ಸಮಯದಲ್ಲಿ ಪೂಜೆ, ದಾನ ಮತ್ತು ಪಠಣ ಇತ್ಯಾದಿಗಳಿಗೆ ವಿಶೇಷ ಮಹತ್ವವಿದೆ. ಈ ದಿನ ಪವಿತ್ರ ನದಿಗಳು ಅಥವಾ ಸರೋವರಗಳಲ್ಲಿ ಸ್ನಾನ ಮಾಡುವುದು ಪ್ರಯೋಜನಕಾರಿ. ದೇವರ ಮಂತ್ರಗಳನ್ನು ಪಠಿಸುವುದು ಉತ್ತಮ. ಈ ಸಮಯದಲ್ಲಿ ಮಂತ್ರವನ್ನು ಪಠಿಸುವುದರಿಂದ ಶೀಘ್ರವೇ ನಿಮಗೆ ಸಿದ್ಧಿ ಪ್ರಾಪ್ತಿಯಾಗುತ್ತದೆ.
  • ಈ ವೇಳೆ ಜನರು ತಮ್ಮ ರಾಶಿಯ ಪ್ರಕಾರ ಅಥವಾ ಅರ್ಹ ಬ್ರಾಹ್ಮಣರನ್ನು ಸಂಪರ್ಕಿಸಿದ ನಂತರ ದಾನ ಮಾಡಬೇಕು. ಈ ದಿನ ಬಡವರಿಗೆ ಮತ್ತು ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡುವುದರಿಂದ ಒಳಿತಾಗಲಿದೆ.

ಸೂತಕದಲ್ಲಿ ಈ ಕೆಲಸ ಮಾಡಬೇಡಿ

  • ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣದ ಅಥವಾ ಸೂತಕದ ಸಮಯದಲ್ಲಿ ದೇವರ ವಿಗ್ರಹವನ್ನು ಅಪ್ಪಿತಪ್ಪಿಯೂ ಮುಟ್ಟಬಾರದು ಎಂದು ಹೇಳಲಾಗಿದೆ.
  • ಈ ಸಮಯದಲ್ಲಿ ಆಹಾರ ಸೇವಿಸುವುದು, ಕುಡಿಯುವುದು, ಮಲಗುವುದು, ಉಗುರು ಕತ್ತರಿಸುವುದು, ಅಡುಗೆ ಮಾಡುವುದು, ಎಣ್ಣೆ ಹಚ್ಚುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ.
  • ಸೂತಕ ಕಾಲದಲ್ಲಿ ಬೇರೆಯವರೊಂದಿಗೆ ಸುಳ್ಳು ಹೇಳುವುದು, ವಂಚನೆ, ಅನುಪಯುಕ್ತ ಸಂಭಾಷಣೆ ಮತ್ತು ಮೂತ್ರ ವಿಸರ್ಜನೆ ಇತ್ಯಾದಿಗಳಿಂದ ದೂರವಿರುವುದು ಒಳ್ಳೆಯದು.
  • ಸೂತಕದ ಪ್ರಾರಂಭದ ಮೊದಲು ಉಪ್ಪಿನಕಾಯಿ, ಹಾಲು, ಮೊಸರು, ನೀರು ಮತ್ತು ಇತರ ಆಹಾರ ಪದಾರ್ಥಗಳಲ್ಲಿ ಹುಲ್ಲನ್ನು ಹಾಕಬೇಕು. ಇದರಿಂದ ಅವು ಕಲುಷಿತವಾಗುವುದಿಲ್ಲ ಎಂದು ಹೇಳಲಾಗುತ್ತದೆ. ಹುಲ್ಲು ಇಲ್ಲದಿದ್ದರೆ ತುಳಸಿ ಎಲೆಗಳನ್ನು ಕೂಡ ಹಾಕಬಹುದು. 
  • ಸೂತಕದ ಸಮಯದಲ್ಲಿ ಗರ್ಭಿಣಿಯರು ತಮ್ಮ ಹೊಟ್ಟೆಯ ಮೇಲೆ ಹಸುವಿನ ಸಗಣಿಯನ್ನು ಲೇಪಿಸಬೇಕು ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಚಾಕು, ಸೂಜಿ ಇತ್ಯಾದಿಗಳಿಂದ ಯಾವುದೇ ಕೆಲಸ ಮಾಡಬೇಡಿ. ಈ ಸಮಯದಲ್ಲಿ ನಡೆಯುವುದು ಮತ್ತು ಮಲಗುವುದನ್ನು ಆದಷ್ಟು ತಪ್ಪಿಸಬೇಕು.

ಇದನ್ನೂ ಓದಿ: Vastu Tips: ಮನೆಯಲ್ಲಿ ಈ ಸಸ್ಯವನ್ನು ಎಂದಿಗೂ ನೆಡಬೇಡಿ: ದೀರ್ಘಕಾಲದವರೆಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News