ನವದೆಹಲಿ : ವರ್ಷದ ಕೊನೆಯ ಸೂರ್ಯಗ್ರಹಣ (Solar Eclipse) ಡಿಸೆಂಬರ್ 4 ಶನಿವಾರ ಸಂಭವಿಸಲಿದೆ. ಈ ಸೂರ್ಯಗ್ರಹಣ ಬಹಳ ವಿಶೇಷ ಎನ್ನಲಾಗಿದೆ. ಇದಕ್ಕೆ ಒಂದು ಕಾರಣ, ಇದು ಮಾರ್ಗಶೀರ್ಷ ಮಾಸದ ಶನಿ ಅಮಾವಾಸ್ಯೆಯ ದಿನದಂದು ನಡೆಯುತ್ತದೆ. ಇದಲ್ಲದೇ ಈ ಗ್ರಹಣದ ವೇಳೆ ರಾಹುವಿನ ನೆರಳು ಕೂಡ ಇರುತ್ತದೆ. ಜ್ಯೋತಿಷಿಗಳ (Astrology) ಪ್ರಕಾರ ಶನಿವಾರ ಸೂರ್ಯಗ್ರಹಣದ ವೇಳೆ ಅಶುಭ ಯೋಗ ಉಂಟಾಗುತ್ತದೆ. ಸೂರ್ಯಗ್ರಹಣದ ಸಮಯದಲ್ಲಿ, ರಾಹು ಮತ್ತು ಕೇತುಗಳಿಂದ ( Rahu and ketu) ಸೂರ್ಯ ಪೀಡಿತನಾಗುತ್ತಾನೆ ಎಂದು ನಂಬಲಾಗಿದೆ. 


COMMERCIAL BREAK
SCROLL TO CONTINUE READING

ಭಾರತದಲ್ಲಿ ಗೋಚರಿಸುವುದಿಲ್ಲ ಗ್ರಹಣ : 
ಈ ಸೂರ್ಯಗ್ರಹಣವು (Solar eclipse) 4ನೇ ಡಿಸೆಂಬರ್ ಬೆಳಿಗ್ಗೆ 10:59 ರಿಂದ ಮಧ್ಯಾಹ್ನ 03:07 ರವರೆಗೆ ಇರುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ, ಅದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. ಈ ಖಗ್ರಾಸ ಸೂರ್ಯಗ್ರಹಣವು ದಕ್ಷಿಣ ಗೋಳಾರ್ಧದ ದೇಶಗಳಾದ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಅಂಟಾರ್ಟಿಕಾ, ದಕ್ಷಿಣ ಅಟ್ಲಾಂಟಿಕ್ ಸಾಗರ ಮತ್ತು ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಗೋಚರಿಸುತ್ತದೆ. ಗ್ರಹಣದ ಸಮಯದಲ್ಲಿ, ನಮ್ಮ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನಲಾಗಿದೆ. 


ಇದನ್ನೂ ಓದಿ: Mangal Rashi Parivartan 2021 : ಈ ದಿನ ರಾಶಿ ಬದಲಿಸಲಿದೆ ಮಂಗಳ ಗ್ರಹ : ಈ 6 ರಾಶಿಯವರಿಗೆ ಹೊಳೆಯಲಿದೆ ಅದೃಷ್ಟ!


ಹಾರ್ಮೋನುಗಳನ್ನು ನಿಯಂತ್ರಿಸಬಹುದು :
ಸೂರ್ಯಗ್ರಹಣದ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ಸಂಭವಿಸಬಹುದು. ಇದಲ್ಲದೆ, ಸೂರ್ಯಗ್ರಹಣದ ಸಮಯದಲ್ಲಿ ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು. ಗರ್ಭಿಣಿಯರು ಗ್ರಹಣದ ಸಮಯದಲ್ಲಿ ತರಕಾರಿಗಳನ್ನು (Vegetable) ಕತ್ತರಿಸುವುದು, ಮಲಗುವುದು, ಮುಂತಾದ ಚಟುವಟಿಕೆಗಳಿಂದ ದೂರವಿರಬೇಕು.  ಈ ವೇಳೆ  ಧಾರ್ಮಿಕ ಗ್ರಂಥಗಳನ್ನು ಪಠಿಸಿ, ಸಂತೋಷವಾಗಿರಲು ಪ್ರಯತ್ನಿಸಬೇಕು. 


ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ :
ಗ್ರಹಣದ ಸಮಯದಲ್ಲಿ, ಸೂರ್ಯನ ನಕಾರಾತ್ಮಕ ಕಿರಣಗಳು ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ (effect on mental health) ಬೀರುತ್ತವೆ ಎಂದು ನಂಬಲಾಗಿದೆ. ಹಾಗಾಗಿ ಈ ಅವಧಿಯಲ್ಲಿ ಯಾವುದೇ ಮಹತ್ವದ ಕೆಲಸ ಮಾಡಬೇಡಿ. ಮನಃಪೂರ್ವಕವಾಗಿ ದೇವರನ್ನು ಜಪಿಸಬೇಕು.


ಇದನ್ನೂ ಓದಿBasil Seeds: ತುಳಸಿ ಎಲೆಗಿಂತಲೂ ಬೀಜದಲ್ಲಿದೆ ಅದ್ಬುತ ಶಕ್ತಿ, ನಿತ್ಯ ಸೇವಿಸಿದರೆ ದೂರವಾಗಲಿದೆ ಸಮಸ್ಯೆ


ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ:
ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯನನ್ನು ಬರಿಗಣ್ಣಿನಿಂದ ನೋಡುವುದು ಸುರಕ್ಷಿತವಲ್ಲ.  ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡುವುದು ಹಾನಿಕಾರಕವಾಗಿದೆ. 


ಆಹಾರದ ಮೇಲೆ ಕೆಟ್ಟ ಪರಿಣಾಮ : 
ಗ್ರಹಣದ ಸಮಯದಲ್ಲಿ ತಿನ್ನುವುದು, ಕುಡಿಯುವುದನ್ನು ನಿಷೇಧಿಸಲಾಗಿದೆ. ಗ್ರಹಣ ಸಮಯದಲ್ಲಿ ಆಹಾರವನ್ನು (food) ತಿನ್ನಬಾರದು ಅಥವಾ ಅಡುಗೆ ಮಾಡಬಾರದು ಎಂದು ಸಲಹೆ ನೀಡಲಾಗುತ್ತದೆ. ಏಕೆಂದರೆ ಸೂರ್ಯಗ್ರಹಣದಿಂದಾಗಿ ಆಹಾರ ಬೇಗನೇ ಹಾಳಾಗುತ್ತದೆ. ಆದರೆ ಹಾಲು, ತುಪ್ಪ, ಎಣ್ಣೆ, ಪನೀರ್, ಉಪ್ಪಿನಕಾಯಿ, ಮತ್ತು ಆಹಾರ ಪದಾರ್ಥಗಳಲ್ಲಿ  ತುಳಸಿ ಎಲೆಗಳನ್ನು (tulsi leaves) ಹಾಕುವುದರಿಂದ ಗ್ರಹಣ ಕಾಲದಲ್ಲಿ ಈ ಆಹಾರ ಕಲುಷಿತವಾಗುವುದಿಲ್ಲ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.