Tulsi Plant: ಶುಭ-ಅಶುಭ ಘಟನೆಗಳ ಸೂಚನೆ ನೀಡುತ್ತೆ ತುಳಸಿ, ಈ ಬದಲಾವಣೆಗಳನ್ನು ನಿರ್ಲಕ್ಷಿಸಬೇಡಿ

Vastu Tips For Tulsi Plant: ಮನೆಯಲ್ಲಿ ತುಳಸಿ ಗಿಡವು ಹಠಾತ್ ಒಣಗುವುದು, ಹಸಿರಾಗುವುದು ಮುಂಬರುವ ಘಟನೆಗಳನ್ನು ಸೂಚಿಸುತ್ತದೆ.  

Written by - Yashaswini V | Last Updated : Nov 23, 2021, 02:31 PM IST
  • ತುಳಸಿ ಗಿಡವು ಶುಭ ಮತ್ತು ಅಶುಭ ಘಟನೆಗಳ ಸೂಚನೆಯನ್ನೂ ನೀಡುತ್ತದೆ
  • ಒಣ ತುಳಸಿಯನ್ನು ಮನೆಯಲ್ಲಿ ಇಡುವುದು ಅಶುಭ
  • ತುಳಸಿ ಗಿಡ ಹಠಾತ್ ಒಣಗುವುದು ಕೂಡ ಅಶುಭ
Tulsi Plant: ಶುಭ-ಅಶುಭ ಘಟನೆಗಳ ಸೂಚನೆ ನೀಡುತ್ತೆ ತುಳಸಿ, ಈ ಬದಲಾವಣೆಗಳನ್ನು ನಿರ್ಲಕ್ಷಿಸಬೇಡಿ title=
Tulsi Plant

Tulsi Plant: ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಮಾ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದೆ. ಧರ್ಮ, ಜ್ಯೋತಿಷ್ಯವಲ್ಲದೆ, ವಾಸ್ತು ಶಾಸ್ತ್ರದಲ್ಲೂ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ತುಳಸಿ ವಾಸಿಸುವ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರುತ್ತದೆ ಮತ್ತು ಅದನ್ನು ಪ್ರತಿದಿನ ಪೂಜಿಸಲಾಗುತ್ತದೆ. ಇದಲ್ಲದೆ, ತುಳಸಿ ಸಸ್ಯವು ಪರಿಸರದಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ಆದ್ದರಿಂದ ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ಸರಿಯಾದ ಜಾಗದಲ್ಲಿ ನೆಡುವುದು ಸೂಕ್ತ. 

ತುಳಸಿ (Tulsi) ಗಿಡವನ್ನು ನೆಡುವಾಗ ಅದಕ್ಕೆ ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಉದಾಹರಣೆಗೆ, ತುಳಸಿ ಗಿಡವನ್ನು ಕೊಳಕು ಕೈಗಳಿಂದ ಮುಟ್ಟಬಾರದು ಅಥವಾ ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸಿ ತುಳಸಿಯನ್ನು ಮುಟ್ಟಬಾರದು. ತುಳಸಿ ಗಿಡವು ಅತ್ಯಂತ ಪವಿತ್ರವಾದದ್ದು, ಸ್ನಾನದ ನಂತರ ಅದನ್ನು ಯಾವಾಗಲೂ ಸ್ಪರ್ಶಿಸಬೇಕು. ಇದಲ್ಲದೇ ಪ್ರತಿದಿನ ಸಂಜೆ ತುಳಸಿ ಗಿಡದ ಕೆಳಗೆ ದೀಪ ಹಚ್ಚಿ.  ಇದಲ್ಲದೇ ಭಾನುವಾರ ಮತ್ತು ಏಕಾದಶಿಯಂದು ತುಳಸಿ ಗಿಡಕ್ಕೆ ನೀರು ಹಾಕಬಾರದು. ಈ ದಿನ ತುಳಸಿ ಜೀ ಭಗವಾನ್ ವಿಷ್ಣುವಿಗೆ ಉಪವಾಸವನ್ನು ಮಾಡುತ್ತಾಳೆ. ಹಾಗಾಗಿ ಭಾನುವಾರ ಮತ್ತು ಏಕಾದಶಿಯಂದು ತುಳಸಿಗೆ ನೀರು ಅರ್ಪಿಸುವುದರಿಂದ ತುಳಸಿಯ ಉಪವಾಸವನ್ನು ಮುರಿದಂತಾಗುತ್ತದೆ. 

ಇದನ್ನೂ ಓದಿ- Shani Gochar: ಶನಿಯ ರಾಶಿ ಪರಿವರ್ತನೆ, ನಿಮ್ಮ ಜೀವನದ ಮೇಲೆ ಯಾವ ಪ್ರಭಾವ ಉಂಟಾಗಲಿದೆ, ಇಲ್ಲಿದೆ ವಿವರ

ತುಳಸಿಯಲ್ಲಿನ ಈ ಬದಲಾವಣೆಗಳು ಎಚ್ಚರಿಕೆಯ ಗಂಟೆಗಳು 
ಮನೆಯಲ್ಲಿ ನೆಟ್ಟ ತುಳಸಿ ಗಿಡವು (Tulsi Plant) ಮನೆಯ ಜನರನ್ನು ಅನೇಕ ತೊಂದರೆಗಳಿಂದ ಪಾರು ಮಾಡುವುದಲ್ಲದೆ, ಮುಂಬರುವ ಶುಭ ಮತ್ತು ಅಶುಭ ಘಟನೆಗಳನ್ನು ಸೂಚಿಸುತ್ತದೆ. ಆದ್ದರಿಂದ, ತುಳಸಿ ಸಸ್ಯದಲ್ಲಿ ಹಠಾತ್ ಬದಲಾವಣೆಗಳನ್ನು ನೀವು ನೋಡಿದರೆ, ಅವುಗಳನ್ನು ನಿರ್ಲಕ್ಷಿಸಬೇಡಿ. 

ತುಳಸಿ ಗಿಡ ಒಣಗುವುದು: 
ಮನೆಯಲ್ಲಿರುವ ಹಸಿರು ತುಳಸಿಯು ಹಠಾತ್ತನೆ ಒಣಗಿ ಹೋದರೆ, ಅದು ಸ್ವಲ್ಪ ತೊಂದರೆ ಬರುವ ಸೂಚನೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಚ್ಚೆತ್ತುಕೊಂಡು ತಕ್ಷಣ ಒಣಗಿದ ತುಳಸಿ ಗಿಡವನ್ನು ತೆಗೆದು ಮತ್ತೆ ನೆಡಬೇಕು. ಹಾಗೆಯೇ ವಿಷ್ಣುವನ್ನು ಆರಾಧಿಸಿ. 

ಹೊಸ ಗಿಡ ಉದುರಿದರೆ : 
ಮನೆಯಲ್ಲಿ ಹೊಸ ತುಳಸಿ ಗಿಡ ನೆಟ್ಟು 2 ದಿನದಲ್ಲಿ ಒಣಗಿ ಉದುರಿದರೆ ಅದು ಪಿತೃ ದೋಷದ ಲಕ್ಷಣ. ಪಿತೃ ದೋಷದಿಂದಾಗಿ, ಮನೆಯಲ್ಲಿ ಜಗಳಗಳು ಸಹ ಆಗುತ್ತದೆ. ಈ ಎರಡೂ ಚಿಹ್ನೆಗಳು ಕಂಡುಬಂದರೆ, ತಕ್ಷಣ ಪಿತೃ ದೋಷವನ್ನು ನಿವಾರಿಸಲು ಕ್ರಮ ಕೈಗೊಳ್ಳಿ.

ಇದನ್ನೂ ಓದಿ- ಈ ವಿಷಯಗಳು ಶ್ರೀಮಂತನನ್ನು ಬಡವನನ್ನಾಗಿ ಮಾಡುತ್ತದೆ: ನೀವು ಈ ತಪ್ಪುಗಳನ್ನು ಮಾಡಬೇಡಿ

ತುಳಸಿ ಹಠಾತ್ತನೆ ಹಸಿರು ಬಣ್ಣಕ್ಕೆ ತಿರುಗಿದರೆ:
 ತುಳಸಿ ಗಿಡವು ಇದ್ದಕ್ಕಿದ್ದಂತೆ ಬೆಳೆದು ತುಂಬಾ ಹಸಿರಾಗಿದ್ದರೆ, ಅದು ತುಂಬಾ ಮಂಗಳಕರವಾಗಿದೆ. ಇದು ಕೆಲವು ಸಂತೋಷದ ಘಟನೆಯ ಮುನ್ಸೂಚನೆ ಆಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News