Lemon Benefits For Face: ಚರ್ಮದ ಹಲವು ಸಮಸ್ಯೆಗಳಿಗೆ ರಾಮಬಾಣ ನಿಂಬೆ
ನಿಂಬೆ ಫೇಸ್ ಪ್ಯಾಕ್ (Lemon Face Pack) ಬಳಸಿಕೊಂಡು ನೀವು ಆರೋಗ್ಯಕರ ಚರ್ಮವನ್ನು ಪಡೆಯಬಹುದು.
Lemon Benefits For Face: ಮುಖದ ಮೇಲಿನ ಕಲೆಗಳನ್ನು ನಿವಾರಿಸಲು ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕಗಳಿಗಿಂತ ಮನೆಯಲ್ಲಿಯೇ ಇರುವ ಹಲವು ಪದಾರ್ಥಗಳು ಹೆಚ್ಚು ಪ್ರಯೋಜನಕಾರಿ ಎಂದು ಹಿರಿಯರು ಹೇಳಿರುವುದನ್ನು ಕೇಳಿರಬಹುದು. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ನಿಂಬೆಹಣ್ಣು. ನಿಂಬೆ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅಷ್ಟೇ ಅಲ್ಲ ಚರ್ಮದ ಹಲವು ಸಮಸ್ಯೆಗಳಿಗೆ ಇದು ರಾಮಬಾಣ ಇದ್ದಂತೆ. ನಿಂಬೆ ಹಣ್ಣಿನ ಬಳಕೆಯಿಂದ ಮುಖದ ಮೇಲಿನ ಕಪ್ಪು ಕಲೆಯನ್ನು ಸಹ ತೆಗೆದುಹಾಕಬಹುದು. ಅಲ್ಲದೆ, ಮುಖದ ಹೊಳಪನ್ನು ಮರಳಿ ತರಲು ನಿಂಬೆ ಸಹಾಯ ಮಾಡುತ್ತದೆ. ವಾಸ್ತವವಾಗಿ, ನಿಂಬೆ ರಸವು ಆಮ್ಲೀಯ ಸ್ವಭಾವದ್ದಾಗಿದ್ದು, ಇದು ಡೆಡ್ ಸ್ಕಿನ್ ಕೋಶಗಳನ್ನು ತೆಗೆದುಹಾಕುವುದಲ್ಲದೆ, ಚರ್ಮದ ಮೇಲಿನ ಕಲೆಗಳನ್ನು ನಿವಾರಿಸುತ್ತದೆ.
ನಿಂಬೆ ಬಳಕೆಯಿಂದ ಚರ್ಮದ (Lemon For Skin) ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡಬಹುದು ಎಂದು ಆಯುರ್ವೇದ ವೈದ್ಯ ಅಬ್ರಾರ್ ಮುಲ್ತಾನಿ ಹೇಳುತ್ತಾರೆ. ನಿಂಬೆ ರುಚಿಯಲ್ಲಿ ಆಮ್ಲೀಯವಾಗಿರುತ್ತದೆ, ಜೊತೆಗೆ ಜೀವಾಣುಗಳನ್ನು ಹೊರಹಾಕುವ ಕೆಲಸ ಮಾಡುತ್ತದೆ. ಆದ್ದರಿಂದ, ಎಣ್ಣೆಯುಕ್ತ ಚರ್ಮಕ್ಕೆ ಸಂಬಂಧಿಸಿದ ಕಲೆಗಳನ್ನು ತೆಗೆದುಹಾಕುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ.
ಮುಖಕ್ಕೆ ನೈಸರ್ಗಿಕ ಬ್ಲೀಚ್:
ನೀವು ಟೊಮೆಟೊ ಜ್ಯೂಸ್, ನಿಂಬೆ ರಸ (Lemon Juice) ಮತ್ತು ಹಾಲನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಬೇಕು. ನಂತರ 10 ನಿಮಿಷಗಳ ಅದನ್ನು ಒಣಗಲು ಬಿಡಿ. ಬಳಿಕ ನಿಮ್ಮ ಮುಖವನ್ನು ಚೆನ್ನಾಗಿ ತೊಳೆಯಿರಿ. ಇದು ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ- Lemon Water : ಈ ಆರು ಕಾರಣಕ್ಕೆ ನಿಂಬೂಪಾನಿ ಜೊತೆ ದಿನ ಶುರುಮಾಡಬೇಡಿ
ನೈಸರ್ಗಿಕ ಫೇಸ್ ಸ್ಕ್ರಬ್:
ಈ ಸ್ಕ್ರಬ್ ತಯಾರಿಸಲು, ನೀವು ತಣ್ಣನೆಯ ಹಾಲು ಮತ್ತು ತಾಜಾ ನಿಂಬೆ ರಸವನ್ನು ಬಾದಾಮಿ ಪುಡಿ ಅಥವಾ ಕಿತ್ತಳೆ ಸಿಪ್ಪೆ ಪುಡಿ ಅಥವಾ ಓಟ್ಸ್ ನೊಂದಿಗೆ ಬೆರೆಸಬೇಕು. ಇದರ ನಂತರ, ಈ ಪೇಸ್ಟ್ ಅನ್ನು ಚರ್ಮದ ಮೇಲೆ ನಿಧಾನವಾಗಿ ಹಚ್ಚಿ ನಂತರ 10 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಮುಖದ ಮೇಲಿನ ಕಲೆಯನ್ನು ನಿವಾರಿಸುತ್ತದೆ.
ಎಣ್ಣೆಯುಕ್ತ ಚರ್ಮಕ್ಕಾಗಿ ಫೇಸ್ ಪ್ಯಾಕ್:
ಮೊದಲನೆಯದಾಗಿ, ಅರ್ಧ ಟೀಸ್ಪೂನ್ ಅರಿಶಿನ ಪುಡಿ, 2 ಟೀಸ್ಪೂನ್ ನಿಂಬೆ ರಸ, 3 ಟೀಸ್ಪೂನ್ ಪಪ್ಪಾಯಿ ತಿರುಳನ್ನು ಚೆನ್ನಾಗಿ ಬೆರೆಸಿ ಪೇಸ್ಟ್ ಮಾಡಿ. ನಂತರ ಮುಖದ ಮೇಲೆ ಅನ್ವಯಿಸಿ ಮತ್ತು 20 ನಿಮಿಷಗಳ ನಂತರ ತೊಳೆಯಿರಿ. ಇದು ಮುಖದ ಹೊಳಪನ್ನು ಮರಳಿ ತರುತ್ತದೆ.
ಇದನ್ನೂ ಓದಿ- ಜಸ್ಟ್ ಒಂದ ಗ್ಲಾಸ್ ನಿಂಬೆ ಶರಬತ್ತು ನೀಡುತ್ತೆ ಈ ಆರು ಆರೋಗ್ಯ ಲಾಭ
ಒಣ ಚರ್ಮಕ್ಕಾಗಿ:
ಇದಕ್ಕಾಗಿ, ನೀವು 3 ಟೀ ಚಮಚ ನಿಂಬೆ ರಸ, ಜೇನುತುಪ್ಪ ಮತ್ತು ಅರ್ಧ ಟೀ ಚಮಚ ಎಲೆಕೋಸು (ಬೇಯಿಸಿದ ಮತ್ತು ಪುಡಿಮಾಡಿದ) ಬೆರೆಸಿ ಪೇಸ್ಟ್ ತಯಾರಿಸಬೇಕು. ಈಗ ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿ 10 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಇದರಿಂದ ಮುಖ ಸುಂದರವಾಗಿರುತ್ತದೆ.
ಫೇಸ್ ಕ್ಲೆನ್ಸರ್ ಆಗಿ ಬಳಸಿ:
ಇದಕ್ಕಾಗಿ, ನೀವು ಮಾಗಿದ ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಬೇಕು. ನಂತರ ಇದಕ್ಕೆ ಸ್ವಲ್ಪ ನಿಂಬೆ ರಸ ಸೇರಿಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ಮುಖ ಮತ್ತು ಕೈಗಳಿಗೆ ಹಚ್ಚಿ, ನಂತರ 10 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ