ನವದೆಹಲಿ : ಮುಖವನ್ನು ಆರೋಗ್ಯಕರವಾಗಿ ಮತ್ತು ಕಲೆರಹಿತವಾಗಿಸಲು ಹಲವು ಮನೆಮದ್ದುಗಳನ್ನು (Home remedies) ಬಳಸಲಾಗುತ್ತದೆ. ಈ ವಸ್ತುಗಳಲ್ಲಿ ಇರುವ ಪೌಷ್ಟಿಕಾಂಶವು ಚರ್ಮವನ್ನು ತಲುಪುತ್ತದೆ ಮತ್ತು ಪ್ರಯೋಜನಗಳನ್ನು ನೀಡುತ್ತದೆ. ತ್ವಚೆಯ ಆರೋಗ್ಯಕ್ಕೆ (Skin care) ಬಳಸುವ ಮನೆಮದ್ದಿನಲ್ಲಿ ನಿಂಬೆ ಕೂಡಾ ಮುಖ್ಯ ಪಾತ್ರ ವಹಿಸುತ್ತದೆ.  ನಿಂಬೆ ತ್ವಚೆಗೆ ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ.  


COMMERCIAL BREAK
SCROLL TO CONTINUE READING

ನಿಂಬೆಹಣ್ಣನ್ನು ಬಳಸುವುದರಿಂದ ಆಗುವ ಪ್ರಯೋಜನಗಳು ಇವು : 
ನಿಂಬೆ (Lemon) ಅಂದರೆ ಸಿಟ್ರಸ್ ಹಣ್ಣು ಎಂದು ಎಲ್ಲರಿಗೂ ತಿಳಿದಿದೆ. ಇದರಲ್ಲಿ ವಿಟಮಿನ್-ಸಿ (Vitamin -C) ಸಮೃದ್ಧವಾಗಿದೆ. ಹೆಲ್ತ್‌ಲೈನ್ ಪ್ರಕಾರ, ನಿಂಬೆಯನ್ನು ಬಳಸಿದರೆ ಈ ಎಲ್ಲಾ ಪ್ರಯೋಜನಗಳು ಸಿಗಲಿವೆ. 


ಇದನ್ನೂ ಓದಿ : Benefits of Cucumber Water: ಆರೋಗ್ಯಕ್ಕೆ ವರದಾನ ಸವತೆಕಾಯಿ ನೀರು


1. ನಿಂಬೆಯಲ್ಲಿರುವ ಆಸಿಡಿಕ್ ಮಟ್ಟದ ಕಾರಣದಿಂದಾಗಿ, ಮೊಡವೆಗಳಿಗೆ (Pimple) ಕಾರಣವಾಗುವ ಇಂಫ್ಲಮೇಶನ್ ಮತ್ತು ಪ್ರಾಕೃತಿಕ ಎಣ್ಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದರಲ್ಲಿರುವ AHA ಡೆಡ್ ಸೆಲ್ ಗಳನ್ನು  ಒಡೆಯುವ ಕೆಲಸ ಮಾಡುತ್ತದೆ. ಇದರಿಂದ ಬ್ಲಾಕ್ ಹೆಡ್ ಗಳನ್ನು ಕೂಡಾ ತಡೆಯಬಹುದು.  
2. ನಿಂಬೆಹಣ್ಣು ಇಂಫ್ಲಮೇಟರಿ ಆಕ್ನೆಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ನಿವಾರಿಸುವ ಗುಣಗಳನ್ನು ಹೊಂದಿದೆ. ಈ ಬ್ಯಾಕ್ಟೀರಿಯಾದ ಹೆಸರು Propionibacterium. ಇದರೊಂದಿಗೆ, ನಿಂಬೆಯಲ್ಲಿರುವ ಶಿಲೀಂಧ್ರ-ವಿರೋಧಿ ಗುಣಗಳು ಚರ್ಮದ ಮೇಲೆ ಬೀಳುವ  ದದ್ದುಗಳನ್ನು ತಡೆಯುತ್ತದೆ. 
3. ನಿಂಬೆಯನ್ನು ಬಳಸಿ ಚರ್ಮದ ಮೇಲಿನ (Skin Care) ಕಲೆಗಳನ್ನು ಕಡಿಮೆ ಮಾಡಬಹುದು. ಅಲ್ಲದೆ, ಮುಖದ ಮೇಲೆ ಬೆಳೆಯುವ ಕೂದಲನ್ನು ಕೂಡಾ ಇದು ಕಡಿಮೆ ಮಾಡುತ್ತದೆ.
4. ಅನೇಕ ಬಾರಿ ನಿಂಬೆಯ ಬಳಕೆಯು ತಲೆಹೊಟ್ಟು (Dandruff) ಮತ್ತು ಸೋರಿಯಾಸಿಸ್ ಅನ್ನು ನಿವಾರಿಸುವಲ್ಲಿಯೂ  ಸಹಕಾರಿಯಾಗಿದೆ. ಇದರಲ್ಲಿರುವ AHA ಡೆಡ್ ಸೆಲ್ ಗಳನ್ನು ಸ್ವಚ್ಛಗೊಳಿಸುತ್ತದೆ.
5. ನಿಂಬೆಯಲ್ಲಿರುವ ವಿಟಮಿನ್-ಸಿ ಚರ್ಮದಲ್ಲಿ ಕೊಲೆಜನ್ ಮಟ್ಟವನ್ನು ಹೆಚ್ಚಿಸುತ್ತದೆ. ಕೊಲೆಜನ್  ಒಂದು ಪ್ರೋಟೀನ್ ಆಗಿದ್ದು, ವಯಸ್ಸಾಗುತ್ತಿದ್ದಂತೆ, ಇದು ಕಡಿಮೆಯಾಗುತ್ತದೆ. 


ಇದನ್ನೂ ಓದಿ :  Benefits Of Ragi-Milk: ನಿತ್ಯ ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ ರಾಗಿ ಬೆರೆಸಿ ಕುಡಿದರೆ ಸಿಗುತ್ತೆ ಅದ್ಭುತ ಲಾಭ


ನಿಂಬೆಯ ಕೆಲವೊಂದು ಅನಾನುಕೂಲತೆಗಳು :  
-ಚರ್ಮದ ತುರಿಕೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. 
-ನಿಂಬೆಯ ಬಳಕೆಯ ನಂತರ ಸೂರ್ಯನ ಹಾನಿಕಾರಕ ಕಿರಣಗಳ ಅಪಾಯ ಹೆಚ್ಚಾಗುತ್ತದೆ.
-ಲ್ಯುಕೋಡರ್ಮಾ 
-ಸನ್ ಬರ್ನ್ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.