Dark Spots on Face: ಚರ್ಮದ ಮೇಲಿನ ಕಲೆ ನಿವಾರಣೆಗೆ ಶುಂಠಿಯನ್ನು ಈ ರೀತಿ ಬಳಸಿ

Dark Spots on Face: ಮುಖದ ಮೇಲಿನ ಕಲೆ ನಿವಾರಣೆ ಬಗ್ಗೆ ನೀವು ತಲೆಕೆಡಿಸಿಕೊಂಡಿದ್ದರೆ, ಚಿಂತೆಬಿಡಿ. ಚರ್ಮದ ಮೇಲಿನ ಕಲೆ ನಿವಾರಣೆಗಾಗಿ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಶುಂಠಿಯನ್ನು ಹೇಗೆ ಬಳಸುವುದು ಎಂದು ತಿಳಿಯಿರಿ.

Written by - Yashaswini V | Last Updated : Sep 7, 2021, 02:25 PM IST
  • ಮುಖದ ಮೇಲೆ ಕಾಣುವ ಕಪ್ಪು ಕಲೆಗಳನ್ನು ತೆಗೆದುಹಾಕಲು ಶುಂಠಿಯನ್ನು ಕೂಡ ಬಳಸಬಹುದು
  • ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಲು ಶುಂಠಿ ಪ್ರಯೋಜನಕಾರಿ ಆಗಿದೆ
  • ಶುಂಠಿಯೊಂದಿಗೆ, ಆಲಿವ್ ಎಣ್ಣೆಯನ್ನು ಬೆರೆಸಿ ಹಚ್ಚುವುದರಿಂದಲೂ ಸಹ ಕಲೆಗಳನ್ನು ತೆಗೆದುಹಾಕಬಹುದು
Dark Spots on Face: ಚರ್ಮದ ಮೇಲಿನ ಕಲೆ ನಿವಾರಣೆಗೆ ಶುಂಠಿಯನ್ನು ಈ ರೀತಿ ಬಳಸಿ title=
How To Remove Dark Spots On Face

Dark Spots on Face: ಮುಖದ ಮೇಲಿನ ಕಲೆಗಳು ಕಾಳಜಿಗೆ ಕಾರಣವಾಗಬಹುದು. ಏಕೆಂದರೆ ಇದು ನಿಮ್ಮ ಮುಖದ ಸೌಂದರ್ಯ ಮತ್ತು ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ. ಆದರೆ ನಮ್ಮ ಅಡುಗೆಮನೆಯಲ್ಲಿ ಇಂತಹ ಅನೇಕ ವಸ್ತುಗಳು ಇವೆ, ಇದು ಅನೇಕ ಚರ್ಮದ ಸಮಸ್ಯೆಗಳನ್ನು ತೆಗೆದುಹಾಕುತ್ತದೆ. ಕಪ್ಪು ಕಲೆಗಳನ್ನು ತೆಗೆದುಹಾಕಲು ಶುಂಠಿಯನ್ನು ಕೂಡ ಬಳಸಬಹುದು. ಶುಂಠಿಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣಗಳು ನೈಸರ್ಗಿಕವಾಗಿ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಶುಂಠಿ ಮತ್ತು ಅಲೋವೆರಾ:
ಚರ್ಮದ ಮೇಲಿನ ಕಲೆಗಳನ್ನು ತೆಗೆದುಹಾಕಲು (Remove Dark Spots On Face), 1 ಟೀ ಚಮಚ ಶುಂಠಿ ರಸ ಮತ್ತು ಅಲೋವೆರಾ ಜೆಲ್ ಜೊತೆಗೆ ಕೆಲವು ಹನಿ ಜೇನುತುಪ್ಪವನ್ನು ಮಿಶ್ರಣ ಮಾಡಿ. ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿದ ಪೇಸ್ಟ್ ಅನ್ನು ಕಲೆಗಳ ಮೇಲೆ ಹಚ್ಚಿ ಮತ್ತು ಅರ್ಧ ಘಂಟೆಯ ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ.

ಇದನ್ನೂ ಓದಿ- Nipah Virus: ನಿಫಾ ವೈರಸ್ Vs ಕರೋನಾ ವೈರಸ್, ಯಾವ ವೈರಸ್ ಹೆಚ್ಚು ಅಪಾಯಕಾರಿ ಎಂದು ತಿಳಿದಿದೆಯೇ?

ಶುಂಠಿ ಮತ್ತು ಆಲಿವ್:
ಶುಂಠಿಯೊಂದಿಗೆ, ಆಲಿವ್ ಎಣ್ಣೆಯನ್ನು ಬೆರೆಸಿ ಹಚ್ಚುವುದರಿಂದಲೂ ಸಹ ಕಲೆಗಳನ್ನು ತೆಗೆದುಹಾಕಬಹುದು. ನೀವು ಕೇವಲ 1 ಟೀಚಮಚ ಶುಂಠಿ ರಸ ಮತ್ತು ಸ್ವಲ್ಪ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿ ಮತ್ತು 15 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಿಂದ ಅದನ್ನು ಸ್ವಚ್ಚಗೊಳಿಸಿ.

ಶುಂಠಿ ಮತ್ತು ಜೇನುತುಪ್ಪ:
ಸ್ವಲ್ಪ ಶುಂಠಿಯ ಪುಡಿ ಜೊತೆಗೆ ಜೇನುತುಪ್ಪವನ್ನು (Ginger With Honey) ಬೆರೆಸಿ ಕಲೆಗಳ ಮೇಲೆ ಹಚ್ಚಿ. ಈ ಪೇಸ್ಟ್ ಅನ್ನು 20 ನಿಮಿಷಗಳ ಕಾಲ ಕಲೆಗಳ ಮೇಲೆ ಬಿಡಿ ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. 

ಇದನ್ನೂ ಓದಿ- Food To Increase Blood: ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸಲು ತಪ್ಪದೇ ಸೇವಿಸಿ ಈ ವಸ್ತುಗಳನ್ನು

ಶುಂಠಿ ಮತ್ತು ಗ್ರೀನ್ ಟೀ: 
ಮುಖದ ಮೇಲಿನ ಕಲೆಗಳನ್ನು ತೆಗೆದುಹಾಕಲು, 1 ಕಪ್ ಗ್ರೀನ್ ಟೀ (Green Tea) ಜೊತೆಗೆ ಸ್ವಲ್ಪ ಶುಂಠಿಯ ರಸವನ್ನು ಮಿಶ್ರಣ ಮಾಡಿ. ಅದರ ನಂತರ ಆ ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿ ಮತ್ತು ಅರ್ಧ ಘಂಟೆಯವರೆಗೆ ಹಾಗೇ ಬಿಡಿ. ಬಳಿಕ ಉಗುರುಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಶುಂಠಿ ಮತ್ತು ನಿಂಬೆ: 
1 ಚಮಚ ಶುಂಠಿ ರಸ ಮತ್ತು 1 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ. ಈಗ ಈ ಮಿಶ್ರಣವನ್ನು ಮುಖದ ಮೇಲಿನ ಕಲೆಗಳಿಗೆ ಹಚ್ಚಿ. ಸುಮಾರು 15 ನಿಮಿಷಗಳ ನಂತರ ಮುಖವನ್ನು ಸಾಮಾನ್ಯ ನೀರಿನಿಂದ ಸ್ವಚ್ಛಗೊಳಿಸಿ. ಶುಂಠಿಯನ್ನು ಈ ರೀತಿ ಬಳಸುವುದರಿಂದ ಮುಖದ ಮೇಲಿನ ಕಲೆ ನಿವಾರಿಸಬಹುದು ಎಂದು ಹೇಳಲಾಗುತ್ತದೆ.

ಸೂಚನೆ- ಇಲ್ಲಿ ನೀಡಿರುವ ಮಾಹಿತಿಯು ಯಾವುದೇ ವೈದ್ಯಕೀಯ ಸಲಹೆಗೆ ಬದಲಿಯಾಗಿಲ್ಲ. ಇದನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ನೀಡಲಾಗುತ್ತಿದೆ. ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ಥಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News