Lemon Peel Benefits In Cleaning: ನಿಂಬೆ ಹಣ್ಣಿನ ಮತ್ತು ಅದರ ಸಿಪ್ಪೆಯ ಆರೋಗ್ಯ ಪ್ರಯೋಜನಗಳ ಕುರಿತು ಬಹುತೇಕರಿಗೆ ತಿಳಿದೇ ಇದೆ. ಆದರೆ, ಅಡುಗೆ ಮನೆ ಸ್ವಚ್ಛತೆಗೂ (How to use lemon peel for cleaning ) ಕೂಡ ನಿಂಬೆ ಹಣ್ಣನ್ನು ಬಳಸಬಹುದು ಎಂಬುದು ಕೆಲವೇ ಕೆಲ ಜನರಿಗೆ ತಿಳಿದಿದೆ. ಇಂದಿನ ಈ ಲೇಖನದಲ್ಲಿ ನಾವು ನಿಮಗೆ ನಿಂಬೆ ಸಿಪ್ಪೆಯನ್ನು ಅಡುಗೆ ಮನೆ ಸ್ವಚ್ಛತೆಗೆ ಹೇಗೆ ಬಳಸಬೇಕು ಎಂಬುದನ್ನು ಹೇಳಿಕೊಡಲಿದ್ದೇವೆ. (Lifestyle News In Kannada)

COMMERCIAL BREAK
SCROLL TO CONTINUE READING

ನಮ್ಮ ಮನೆಯ ಪ್ರಮುಖ ಭಾಗಗಳಲ್ಲಿ ಅಡುಗೆ ಮನೆ ಒಂದು ಮಹತ್ವದ ಭಾಗವಾಗಿದೆ. ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಜಿಡ್ಡು ಕಲೆಗಳು ಬೀಳುವುದು ಒಂದು ಸಾಮಾನ್ಯ ಸಂಗತಿ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಯೋಚಿಸುವುದಾದರೆ, ಅಡುಗೆ ಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಅದರ ನೈರ್ಮಲ್ಯತೆಯ ಕಡೆಗೆ ನಾವು ಹೆಚ್ಚಿನ ಗಮನಹಾರಿಸಬೇಕು. ಸಾಮಾನ್ಯವಾಗಿ ಜನರು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳು ಮತ್ತು ಕ್ಲೀನರ್ ಗಳನ್ನು ಬಳಸಿ ಅಡುಗೆ ಮನೆ ಸ್ವಚ್ಛ ಮಾಡುತ್ತಾರೆ. ಆದರೆ ಕೆಲ ನೈಸರ್ಗಿಕ ಮತ್ತು ಆರೋಗ್ಯಕ್ಕೆ ಹೆಚ್ಚಿನ ಹಾನಿ ಮಾಡದ ನೈಸರ್ಗಿಕ ಕ್ಲೀನರ್ ಗಳನ್ನು ಬಳಸುವುದು ಯಾವಾಗಲೂ ಒಂದು ಉತ್ತಮ ಆಯ್ಕೆ ಸಾಬೀತಾಗುತ್ತದೆ. ಇಂತಹ ನೈಸರ್ಗಿಕ ಕ್ಲೀನರ್ ಗಳಲ್ಲಿ ನಿಂಬೆ ಸಿಪ್ಪೆ ಕೂಡ ಶಾಮಿಲಾಗಿದೆ (Lemon peel for cleanliness benefits). ಬನ್ನಿ ಅದನ್ನು ಅಡುಗೆ ಮನೆಯಲ್ಲಿ ಏಲ್ಲಿ ಮತ್ತು ಹೇಗೆ ಉಪಯೋಗಿಸಬೇಕು ತಿಳಿದುಕೊಳ್ಳೋಣ, (Lifestyle News In Kannada)


ಪಾತ್ರೆಗಳ ಮೇಲೆ ಇರುವ ಮೊಂಡು ಕಲೆ ಹಾಗೂ ವಾಸನೆ ಹೋಗಲಾಡಿಸಲು ನಿಂಬೆ ಸಿಪ್ಪೆ ಬಳಕೆ (Lemon peel for cleanliness benefits)
ಅಡುಗೆ ಮನೆಯಲ್ಲಿರುವ ಪಾತ್ರೆಗಳನ್ನು ನಾವು ದೀರ್ಘ ಕಾಲ ಬಳಸುವುದರಿಂದ, ಕೆಲ ಮೊಂಡು ಕಲೆಗಳು ಪಾತ್ರೆಗಳ ಮೇಲೆ ಹಾಗೆಯೇ ಅಂಟಿಕೊಂಡಿರುತ್ತವೆ. ಅದರಲ್ಲೂ ವಿಶೇಷವಾಗಿ ಎಣ್ಣೆ ಕಲೆಗಳು. ಅವುಗಳನ್ನು ತೆಗೆದುಹಾಕಲು ನಿಂಬೆ ಸಿಪ್ಪೆಯಿಂದ ಪಾತ್ರೆಗಳನ್ನು ಉಜ್ಜಿ, ಅದು ಕೇವಲ ಪಾತ್ರೆಗಳಿಂದ ಈ ಕಳೆಗಳನ್ನು ಮಾತ್ರ ತೆಗೆದುಹಾಕದೆ ಪಾತ್ರೆಗಳಿಗೆ ನೈಸರ್ಗಿಕ ಪರಿಮಳವನ್ನು ನೀಡುತ್ತದೆ. 


ನೆಲ ಸ್ವಚ್ಛಗೊಳಿಸಲು ಈ ರೀತಿ ಬಳಸಿ
ಮನೆಯಲ್ಲಿ ನೆಲವನ್ನು ಸ್ವಚ್ಛಗೊಳಿಸಲು ಕೂಡ ಜನರು ರಾಸಾಯನಿಕ ಹೊಂದಿದ ಕ್ಲೀನರ್ ಬಳಸುತ್ತಾರೆ. ಆದರೆ ದೀರ್ಘಕಾಲದವರೆಗೆ ಇಂತಹ ಕ್ಲೀನರ್ ಗಳನ್ನು ಬಳಸುವುದರಿಂದ ನೆಲಕ್ಕೆ ಹಾನಿಯುಂಟು ಮಾಡುತ್ತವೆ. ಹೀಗಿರುವಾಗ ನಿಂಬೆ ಸಿಪ್ಪೆಯ ಪೇಸ್ಟ್ ಅನ್ನು ತಯಾರಿಸಿ ಅದರಿಂದ ನೆಲ ಸ್ವಚ್ಛಗೊಳಿಸಿದರೆ, ಅದು ಮಾರ್ಬಲ್, ಗ್ರಾನೈಟ್ ಅನ್ನು ಸ್ವಚ್ಛಗೊಳಿಸುವುದರ ಜೊತೆಗೆ ಅವುಗಳ ನೈಸರ್ಗಿಕ ಹೊಳಪನ್ನು ಕಾಪಾಡುತ್ತದೆ. 


ಡಸ್ಟ್‌ಬಿನ್‌ನಿಂದ ಕೂಡ ವಾಸನೆ ಬರುವುದಿಲ್ಲ
ಸಾಮಾನ್ಯವಾಗಿ ಅಡುಗೆ ಮಾಡುವಾಗ ಉಳಿಯುವ ತ್ಯಾಜ್ಯ ಪದಾರ್ಥಗಳನ್ನು ನಾವು ಅಡುಗೆ ಮನೆಯಲ್ಲಿಟ್ಟಿರುವ ಕಸದ ತೊಟ್ಟಿಗೆ ಎಸೆಯುತ್ತೇವೆ. ಇದರಿಂದ ಅಡುಗೆ ಮನೆಯಲ್ಲಿ ಗಬ್ಬು ವಾಸನೆ ಪಸರಿಸಲು ಪ್ರಾರಂಭಿತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲ ಒಣಗಿದ ನಿಂಬೆ ಸಿಪ್ಪೆಗಳನ್ನು ನೀವು ಕಸದ ತೊಟ್ಟಿಯಲ್ಲಿರಿಸಬಹುದು. ಬೇಕಾದರೆ ನೀವು ನಿಮ್ಮ ಕಸದ ತೊಟ್ಟಿಗೆ ನಿಂಬೆ ರಸವನ್ನು ಕೂಡ ಸಿಂಪಡಿಸಬಹುದು. 


ಮೈಕ್ರೋವೇವ್ ಓವೆನ್ ಹೊಳೆಯುವಂತೆ ಮಾಡುತ್ತದೆ
ಸಾಮಾನ್ಯವಾಗಿ ಪಿಜ್ಜಾ, ಬರ್ಗರ್, ಗ್ರೀಲ್ ಮಾಡಲಾಗುವ ಆಹಾರಗಳಿಗಾಗಿ ಜನ ಮೈಕ್ರೋವೇವ್ ಓವೆನ್  ಬಳಸುತ್ತಾರೆ. ಅದರಲ್ಲಿ ಸ್ವಚ್ಛತೆ ಮಾಡಲು ಸ್ಥಳಾವಕಾಶ ಕಮ್ಮಿ ಉರುವುದರಿಂದ ಮೂಲೆ ಮೂಲೆಯಲ್ಲಿ ಜಿಡ್ಡು ಹಾಗೆಯೇ ಉಳಿದು ಹೋಗುತ್ತದೆ. ಹೀಗಾಗಿ ಅದನ್ನು ಸ್ವಚ್ಛಗೊಳಿಸಲು ಒಂದು ಪಾತ್ರೆಯಲ್ಲಿ ಕೆಲ ನಿಂಬೆ ತುಂಡುಗಳನ್ನು ಹಾಕಿ, ಅದನ್ನು ಬಿಸಿ ಮಾಡಲು ಓವೆನ್ ನಲ್ಲಿ ಇರಿಸಿ. ಸ್ವಲ್ಪ ಸಮಯದ ಬಳಿಕ ಈ ನೀರಿನಿಂದ ಆವಿ ಹೊರಬರಲಾರಂಬಿಸುತ್ತದೆ. ಈ ಆವಿ ಓವೆನ್ ಒಳಗೋಡೆಗಳ ಮೇಲೆ ಸಂಗ್ರಹವಾಗುತ್ತದೆ. ಸಂಗ್ರಹವಾದ ಮೊಂಡು ಜಿಡ್ಡನ್ನು ಸಡಿಲಗೊಳಿಸುತ್ತದೆ, ಈಗ ಒಂದು ಒದ್ದೆ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ. 


ಇದನ್ನೂ ಓದಿ-Green Papaya Benefits: ತೂಕ ಇಳಿಕೆ ಸೇರಿದಂತೆ ಹಲವು ಆರೋಗ್ಯ ಲಾಭಗಳನ್ನು ನೀಡುತ್ತೇ ಹಸಿರು ಪಪ್ಪಾಯಿ ಸೇವನೆ!


ಮಸಾಲೆ ಪದಾರ್ಥಗಳ ಡಬ್ಬಿಯನ್ನು ಹೊಳೆಯುವಂತೆ ಮಾಡುತ್ತದೆ
ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಹೆಚ್ಚಿನ ತೇವ ಇರುವ ಕಾರಣ ಜಿಡ್ಡು ಅಡುಗೆ ಮನೆಯಲ್ಲಿ ಇರಿಸಲಾದ ಮಸಾಲೆ ಡಬ್ಬಿಗಳ ಮೇಲೆ ಶೇಖರಣೆಯಾಗುತ್ತದೆ. ಅಂತಹ ಡಬ್ಬಿಗಳನ್ನು ನೀವು ನಿಂಬೆ ಸಿಪ್ಪೆಯಿಂದ ಉಜ್ಜಿದರೆ ಅವು ಸ್ವಚ್ಛಗೊಳ್ಳುತ್ತವೆ. ಇದಕ್ಕಾಗಿ ಮೊದಲು ನೀವು ಅಡುಗೆ ಮನೆಯಲ್ಲಿ ಇರಿಸಲಾದ ಡಬ್ಬಿಗಳನ್ನು ಸ್ವಲ್ಪಸಮಯದವರೆಗೆ ಬಿಸಿ ನೀರಿನಲ್ಲಿ ನೆನೆಹಾಕಿ. ಸ್ವಲ್ಪ ಸಮಯದ ನಂತರ ಅವುಗಳನ್ನು ನಿಂಬೆ ಹಣ್ಣಿನ ಸಿಪ್ಪೆಯಿಂದ ಉಜ್ಜಿರಿ, ಡಬ್ಬಿಗಳು ಹೊಳೆಯುವುದಷ್ಟೆ ಅಲ್ಲದೆ, ಅವು ಪರಿಮಳ ಸೂಸಲು ಕೂಡ ಆರಂಭಿಸುತ್ತವೆ. 


ಇದನ್ನೂ ಓದಿ-White Hair Remedy: ಕೇವಲ 30 ನಿಮಿಷಗಳಲ್ಲಿ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುತ್ತೆ ಈ ಹೇಯರ್ ಮಾಸ್ಕ್!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ