Lemon Remedies: ನಿಂಬೆ ಹಣ್ಣಿನ ಈ ಉಪಾಯಗಳನ್ನು ಅನುಸರಿಸಿದರೆ ಅಪಾರ ಧನವೃದ್ಧಿಯಾಗುತ್ತದೆ, ನಂಬಿಕೆ ಇಲ್ಲ ಅಂದರೆ ಒಮ್ಮೆ ಅನುಸರಿಸಿ ನೋಡಿ
Lemon Remedies: ಜೋತಿಷ್ಯ ಶಾಸ್ತ್ರದಲ್ಲಿ ನಿಂಬೆ ಹಣ್ಣಿನ ಹಲವು ಉಪಾಯಗಳನ್ನು ಹೇಳಲಾಗಿದೆ. ಈ ಉಪಾಯಗಳನ್ನು ಅನುಸರಿಸುವ ಮೂಲಕ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಬಹುದು ಮತ್ತು ಜೀವನದಲ್ಲಿನ ಎಲ್ಲಾ ಸಂಕಷ್ಟಗಳಿಂದ ವ್ಯಕ್ತಿ ಮುಕ್ತಿಪಡೆದುಕೊಳ್ಳಬಹುದು.
Lemon Remedies: ಕಲವರಿಗೆ ಜೀವನದಲ್ಲಿ ಸಾಕಷ್ಟು ಕಷ್ಟಪಟ್ಟರೂ ಕೂಡ ಅವರಿಗೆ ಅವರ ಕಷ್ಟಕ್ಕೆ ತಕ್ಕಂತೆ ಫಲ ಪ್ರಾಪ್ತಿಯಾಗುವುದಿಲ್ಲ. ಇದಕ್ಕೆ ಕಾರಣ ಎಂದರೆ, ವ್ಯಕ್ತಿಗೆ ಅವರ ಭಾಗ್ಯ ಸಾಥ್ ನೀಡದೆ ಇರುವುದು. ಇಂತಹ ಪರಿಸ್ಥಿತಿಯಲ್ಲಿ, ಜ್ಯೋತಿಷ್ಯದಲ್ಲಿ ಅನೇಕ ಉಪಾಯಗಳನ್ನು ಸೂಚಿಸಲಾಗಿದೆ, ಅವುಗಳನ್ನು ಅನುಸರಿಸುವುದರಿಂದ ವ್ಯಕ್ತಿಯ ಮಲಗಿರುವ ಭಾಗ್ಯ ಎಚ್ಚೆತ್ತುಕೊಳ್ಳುತ್ತದೆ. ತಂತ್ರ ಜೋತಿಷ್ಯದಲ್ಲಿ ನಿಂಬೆಯ ಹಣ್ಣಿನ ಹಲವು ಪರಿಹಾರಗಳ ಬಗ್ಗೆ ಉಲ್ಲೇಖವಿದೆ. ಅವುಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಬಹಳ ಸುಲಭವಾಗಿ ಪರಿಹರಿಸಿಕೊಳ್ಳಬಹುದು.
ಸಮಸ್ಯೆಗಳ ನಿರ್ವಹಣೆಗೆ ನಿಂಬೆಹಣ್ಣಿನ ಈ ಪರಿಹಾರಗಳನ್ನು ಪ್ರಯತ್ನಿಸಿ
>> ವ್ಯಾಪಾರ ಹೆಚ್ಚಾಗದೇ ನಷ್ಟ ಉಂಟಾಗುತ್ತಿದ್ದರೆ, ಶನಿವಾರ ನಿಂಬೆ ಹಣ್ಣನ್ನು ನಾಲ್ಕು ತುಂಡುಗಳನ್ನಾಗಿ ಮಾಡಿ, ಅಡ್ಡರಸ್ತೆಗೆ ಹೋಗಿ ಸುತ್ತಲೂ ನಿಂಬೆ ಹಣ್ಣನ್ನು ಎಸೆಯಿರಿ. ಹೀಗೆ ಮಾಡುವುದರಿಂದ ವ್ಯಾಪಾರ ಹೆಚ್ಚಾಗುತ್ತದೆ.
>> ಯಾವುದೇ ವ್ಯಕ್ತಿಗೆ ದೃಷ್ಟಿ ತಗುಲಿದ್ದರೆ, ಅಡಿಯಿಂದ ಮುಡಿಯವರೆಗೆ 7 ಬಾರಿ ಒಂದು ನಿಂಬೆಹಣ್ಣನ್ನು ನಿವಾಳಿಸಿ, ನಂತರ ಈ ನಿಂಬೆಯನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ ನಿರ್ಜನ ಪ್ರದೇಶದಲ್ಲಿ ಎಸೆಯಿರಿ. ಇದು ಕೆಟ್ಟದೃಷ್ಟಿಯನ್ನು ತೆಗೆದುಹಾಕುತ್ತದೆ.
>> ಯಾವುದೇ ಕಾರ್ಯದಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗಲು, ನಿಂಬೆಯ ಮೇಲೆ ಒಂದು ಲವಂಗವನ್ನು ಚುಚ್ಚಿ, ಅದನ್ನು ಆಂಜನೇಯ ಸ್ವಾಮಿಯ ದೇವಷ್ಟಾನಕ್ಕೆ ತೆಗೆದುಕೊಂಡು ಹೋಗಿರಿ. ಅಲ್ಲಿ ಹನುಮಾನ ಚಾಲಿಸಾ ಪಠಿಸಿ, ನಂತರ ಹನುಮಂತನಿಗೆ ಪ್ರಾರ್ಥನೆ ಸಲ್ಲಿಸಿ. ನಂತರ ಆ ನಿಂಬೆಹಣ್ಣನ್ನು ತೆಗೆದುಕೊಂಡು ಹೋಗಿ ಕೆಲಸವನ್ನು ಪ್ರಾರಂಭಿಸಿ. ಕೆಲಸದಲ್ಲಿ ನೀವು ಹೇಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗುತ್ತದೆ ಎಂಬುದನ್ನು ನೀವೇ ಗಮನಿಸಬಹುದು.
>> ಪದೇ ಪದೇ ನಿಮ್ಮ ಕೆಲಸಗಳು ಬಿಗಡಾಯಿಸುತ್ತಿದ್ದರೆ, ನಿಮ್ಮ ಮೇಲೆ ನೀವೇ ಒಂದು ನಿಂಬೆಹಣ್ಣನ್ನು ನಿವಾಳಿಸಿ ಅದನ್ನು ಎರಡು ಭಾಗಗಳಲ್ಲಿ ಕತ್ತರಿಸಿ ಒಂದು ಎಡಭಾಗಕ್ಕೆ ಮತ್ತು ಮತ್ತೊಂದನ್ನು ಬಲಭಾಗಕ್ಕೆ ಎಸೆಯಿರಿ. ಈ ರೀತಿ ಮಾಡುವುದರಿಂದ ನಿಮ್ಮ ಬಿಗಡಾಯಿಸುತ್ತಿರುವ ಕೆಲಸಗಳು ಪೂರ್ಣಗೊಳ್ಳಲು ಶುರುವಾಗುತ್ತದೆ.
>> ಕೆಲಸ ಸಿಗಲು ಸತತ ಪರಿಶ್ರಮ ಪಡುತ್ತಿದ್ದರೂ ಯಶಸ್ಸು ಸಿಗದೇ ಇದ್ದರೆ ರಾತ್ರಿ 12 ಗಂಟೆಗೆ ಅಡ್ಡರಸ್ತೆಗೆ ಹೋಗಿ ನಿಂಬೆ ಹಣ್ಣನ್ನು ನಾಲ್ಕು ತುಂಡು ಮಾಡಿ, ನಾಲ್ಕು ತುಂಡುಗಳನ್ನು .ನಾಲ್ಕೂ ದಿಕ್ಕುಗಳಲ್ಲಿ ದೂರ ದೂರಕ್ಕೆ ಎಸೆಯಿರಿ.
ಈ ವಸ್ತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ
>> ನಿಂಬೆ ಹಣ್ಣಿನ ಯಾವುದೇ ಪರಿಹಾರವನ್ನು ಅನುಸರಿಸಿದ ಬಳಿಕ ಹಿಂತಿರುಗಿ ನೋಡಬೇಡಿ. ಮತ್ತು ಬೇರೆಲ್ಲಿಯೂ ಹೋಗಬೇಡಿ. ನಿಂಬೆಯ ಪರಿಹಾರವನ್ನು ತೆಗೆದುಕೊಂಡ ನಂತರ, ನೇರವಾಗಿ ನಿಮ್ಮ ಮನೆಗೆ ವಾಪಸ್ಸಾಗಿ.
ಇದನ್ನೂ ಓದಿ-Vastu Tips: ಮನೆಯಲ್ಲಿ ಈ ಚಮತ್ಕಾರಿ ವಿಗ್ರಹವನ್ನಿರಿಸಿ, ಸರಿಯಾದ ದಿಕ್ಕಿನಲ್ಲಿಟ್ಟರೆ ಅಪಾರ ಧನವೃದ್ಧಿಗೆ ಕಾರಣ
>> ರಸ್ತೆಯಲ್ಲಿ ಬಿದ್ದಿರುವ ನಿಂಬೆ ಮೆಣಸಿನ ಮೇಲೆ ಎಂದಿಗೂ ಕಾಲಿಡಬಾರದು. ಈ ವಿಷಯವನ್ನು ಯಾವಾಗಲೂ ನನಪಿನಲ್ಲಿಡಿ.
ಇದನ್ನೂ ಓದಿ-Food Astrology: ಊಟದ ವೇಳೆ ಮನಸ್ಸಿನಲ್ಲಿ ಬರುವ ಈ ಆಲೋಚನೆಗಳು ಅನಾರೋಗ್ಯ ಮತ್ತು ದಾರಿದ್ರ್ಯಕ್ಕೆ ಕಾರಣವಾಗುತ್ತವೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.