Vastu Tips for Confidence: ಜೀವನದಲ್ಲಿನ ಸಕಾರಾತ್ಮಕತೆಯ ಸಂಚಾರಕ್ಕಾಗಿ ವಾಸ್ತುಶಾಸ್ತ್ರದಲ್ಲಿ ಹಲವು ವಸ್ತುಗಳ ಕುರಿತು ಹೇಳಲಾಗಿದೆ. ಈ ವಸ್ತುಗಳನ್ನು ನೀವು ಸರಿಯಾದ ದಿಕ್ಕಿನಲ್ಲಿ ಹಾಗೂ ಸರಿಯಾದ ಜಾಗದಲ್ಲಿರಿಸಿದರೆ, ಮನೆಯಲ್ಲಿರುವ ಎಲ್ಲಾ ಸದಸ್ಯರಿಗೆ ಅದರಲ್ಲೂ ವಿಶೇಷವಾಗಿ ಮನೆಯ ಯಜಮಾನನಿಗೆ ಭಾರಿ ಲಾಭ ಉಂಟಾಗುತ್ತದೆ. ಸಿಂಹದ ವಿಗ್ರಹದ ಕುರಿತು ಕೂಡ ವಾಸ್ತು ಶಾಸ್ತ್ರದಲ್ಲಿ ಇದೇ ರೀತಿ ಉಲ್ಲೇಖಿಸಲಾಗಿದೆ. ಹೌದು, ಮನೆಯಲ್ಲಿ ಪ್ರತಿಷ್ಠಾಪಿಸಲಾಗುವ ಸಿಂಹದ ವಿಗ್ರಹ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎನ್ನಲಾಗಿದೆ. ಜೊತೆಗೆ ಮನೆಯ ಸದಸ್ಯರು ಅಪಾರ ಅಭಿವೃದ್ಧಿ ಹೊಂದುತ್ತಾರೆ ಮತ್ತು ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ ಎನ್ನಲಾಗಿದೆ.
ವ್ಯಕ್ತಿಯಲ್ಲಿನ ಕುಗ್ಗಿದ ಆತ್ಮವಿಶ್ವಾಸ ಅವನನ್ನು ಅವನತಿಯತ್ತ ಕೊಂಡೊಯ್ಯುತ್ತದೆ. ಹೀಗಿರುವಾಗ ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಿಸುವುದು ತುಂಬಾ ಮಹತ್ವದ್ದಾಗಿದೆ. ಇದಕ್ಕಾಗಿ ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಹಿತ್ತಾಳೆ ಲೋಹದ ಸಿಂಹವನ್ನು ಪ್ರತಿಷ್ಠಾಪಿಸಬೇಕು ಎಂಬ ಸಲಹೆ ನೀಡಲಾಗಿದೆ. ಮನೆಯಲ್ಲಿ ಒಂದು ವೇಳೆ ಸರಿಯಾದ ದಿಕ್ಕಿನಲ್ಲಿ ಮತ್ತು ಸರಿಯಾದ ಜಾಗದಲ್ಲಿ ಸಿಂಹದ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ ವ್ಯಕ್ತಿಯಲ್ಲಿ ಚಮತ್ಕಾರಿಕ ಬದಲಾವಣೆಗಳು ಕಂಡು ಬರುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ವ್ಯಕ್ತಿಯ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಹಾಗೂ ಮನೆಯಲ್ಲಿ ಧನಾಗಮನವಾಗಿ ಸುಖ-ಶಾಂತಿ ನೆಲೆಸುತ್ತದೆ.
ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಅಥವಾ ಹೆಚ್ಚಿಸಲು ಮನೆಯಲ್ಲಿ ಹಿತ್ತಾಳೆ ಲೋಹದ ಸಿಂಹದ ಮೂರ್ತಿಯನ್ನು ಇರಿಸಲು ಸಲಹೆ ನೀಡಲಾಗುತ್ತದೆ. ಸಿಂಹ ಆತ್ಮವಿಶ್ವಾಸ ಹಾಗೂ ಶಕ್ತಿಯ ಪ್ರತೀಕವಾಗಿದೆ ಎನ್ನಲಾಗುತ್ತದೆ. ಹೀಗಿರುವಾಗ ಮನೆಯ ಉತ್ತರ ದಿಕ್ಕು ಅಥವಾ ಈಶಾನ್ಯ ದಿಕ್ಕಿನಲ್ಲಿ ಹಿತ್ತಾಳೆಯಿಂದ ತಯಾರಿಸಿದ ಸಿಂಹವನ್ನಿರಿಸಿ ಅದರಿಂದಾಗುವ ಚಮತ್ಕಾರವನ್ನು ನೀವೇ ನೋಡಿ. ವ್ಯಕ್ತಿಯಲ್ಲಿನ ಆತ್ಮವಿಶ್ವಾಸ ವೇಗವಾಗಿ ಹೆಚ್ಚಾಗುತ್ತವೆ. ಆದರೆ ಮನೆಯಲ್ಲಿ ಸಿಂಹದ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ಸಿಂಹವು ಮನೆಯ ಕೇಂದ್ರ ಭಾಗದತ್ತ. ನೋಡುವಂತಿರಬೇಕು ಎಂಬುದನ್ನು ನೆನಪಿನಲ್ಲಿಡಿ.
ಇದನ್ನೂ ಓದಿ-Zodiac Change in July: ಕುಬೇರ ದೇವನ ಆಶೀರ್ವಾದದಿಂದ ಈ ರಾಶಿಯವರ ಮೇಲೆ ಹಣದ ಮಳೆಯಾಗಲಿದೆ
ಸಿಂಹದ ಮೂರ್ತಿ ಇರಿಸುವ ಮಹತ್ವ
ವಾಸ್ತು ತಜ್ಞರ ಪ್ರಕಾರ ಮನೆಯಲ್ಲಿ ಸಿಂಹದ ಮೂರ್ತಿ ಇರುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸಂಚರಿಸುತ್ತದೆ. ಇದಲ್ಲದೆ ಮನೆಯಲ್ಲಿನ ಸದಸ್ಯರ ನಡುವೆ ಪ್ರಜಾಸತ್ತಾತ್ಮಕ ಮನೋಭಾವ ಹೆಚ್ಚಾಗುತ್ತದೆ. ಒಂದೆಡೆ ಸಿಂಹದ ವಿಗ್ರಹವನ್ನಿಡುವುದರಿಂದ ವ್ಯಕ್ತಿಯ ಆತ್ಮವಿಶ್ವಾಸ ದ್ವಿಗುಣಗಗೊಂಡರೆ, ಇನ್ನೊಂದೆಡೆ ವ್ಯಕ್ತಿಯಲ್ಲಿ ಜಾಗ್ರತಾ ಮನೋಭಾವ ವೃದ್ಧಿಯಾಗಿ, ಯಾರ ಬಗ್ಗೆಯೂ ಮನದಲ್ಲಿ ಹೀನಭಾವನೆ ಉಂಟಾಗುವುದಿಲ್ಲ.
ಇದನ್ನೂ ಓದಿ-Food Astrology: ಊಟದ ವೇಳೆ ಮನಸ್ಸಿನಲ್ಲಿ ಬರುವ ಈ ಆಲೋಚನೆಗಳು ಅನಾರೋಗ್ಯ ಮತ್ತು ದಾರಿದ್ರ್ಯಕ್ಕೆ ಕಾರಣವಾಗುತ್ತವೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹೀಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.