Chandra Grahana 2022: ನವೆಂಬರ್ ತಿಂಗಳ ಈ ದಿನ ಸಂಭವಿಸಲಿದೆ ಚಂದ್ರ ಗ್ರಹಣ, 4 ರಾಶಿಗಳ ಜನರಿಗೆ ಎಚ್ಚರಿಕೆಯ ಕರಗಂಟೆ
Chandra Grahan on Dev Deepawali: ಈ ವರ್ಷದ ದೀಪಾವಳಿ ಸೂರ್ಯಗ್ರಹಣದ ಕರಿ ನೆರಳಿನಲ್ಲಿ ಕಳೆದುಹೋಗಿದೆ. ಆದರೆ, ಈ ವರ್ಷದ ದೇವ ದೀಪಾವಳಿಯೂ ಕೂಡ ಸೂರ್ಯಗ್ರಹಣದ ಕರಿ ನೆರಳಲ್ಲಿ ಕಳೆದುಹೋಗಲಿದೆ. ಕೆಲವೇ ದಿನಗಳ ಅಂತರದಲ್ಲಿ ಎರಡು ಗ್ರಹಣಗಳು 4 ರಾಶಿಗಳ ಜಾತಕದವರ ಮೇಲೆ ಭಾರಿ ಪ್ರಭಾವ ಬೀರಲಿವೆ.
Lunar Eclipse 2022 Effect on Zodiac Signs: ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸವನ್ನು ಹಬ್ಬಗಳ ತಿಂಗಳು ಎಂದು ಕರೆಯಲಾಗುತ್ತದೆ. ಈ ವರ್ಷ ಕಾರ್ತಿಕ ಮಾಸವು ಕೆಲವು ಕಾರಣಗಳಿಂದ ವಿಶೇಷವಾಗಿದೆ. ಈ ವರ್ಷ, ದೀಪಾವಳಿಯ ಸಮಯದಲ್ಲಿ ಸೂರ್ಯಗ್ರಹಣ ಸಂಭವಿಸುವುದು ಮತ್ತು ನಂತರ ದೇವ ದೀಪಾವಳಿಯಂದು ಚಂದ್ರಗ್ರಹಣ ಸಂಭವಿಸುವುದು ಒಂದು ಅನನ್ಯ ಕಾಕತಾಳೀಯವಾಗಿದೆ. ಕೇವಲ 15 ದಿನಗಳ ಅಂತರದಲ್ಲಿ ಸಂಭವಿಸುವ ಎರಡು ಗ್ರಹಣಗಳು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಭಾರಿ ಪ್ರಭಾವ ಬೀರಲಿವೆ. ಆದರೆ ಮುಂಬರುವ ಚಂದ್ರ ಗ್ರಹಣ ನಾಲ್ಕು ರಾಶಿಗಳ ಜಾತಕದವರ ಮೇಲೆ ಸ್ವಲ್ಪ ಜಾಸ್ತಿಯೇ ಪರಿಣಾಮ ಬೀರಲಿವೆ. ನವೆಂಬರ್ 8 ರಂದು ಚಂದ್ರಗ್ರಹಣ ಇರುವುದರಿಂದ ಈ ಬಾರಿ ದೇವ್ ದೀಪಾವಳಿಯನ್ನು ಒಂದು ದಿನ ಮುಂಚಿತವಾಗಿ ನವೆಂಬರ್ 7 ರಂದು ಆಚರಿಸಲಾಗುವುದು ಎನ್ನಲಾಗಿದೆ. ದೇವ ದೀಪಾವಳಿಯ ದಿನ ಚಂದ್ರ ಗ್ರಹಣವು ನವೆಂಬರ್ 8, 2022 ರಂದು ಮಧ್ಯಾಹ್ನ 01:32 ರಿಂದ 07:27 ನಿಮಿಷಗಳವರೆಗೆ ಇರಲಿದೆ, ಆದರೆ ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಹೀಗಾಗಿ ಜೋತಿಷ್ಯಶಾಸ್ತ್ರದ ಪ್ರಕಾರ ಅದರ ಸೂತಕ ಕಾಲ ಮಾನ್ಯವಿರುವುದಿಲ್ಲ.
ಯಾವ ರಾಶಿಗಳ ಜಾತಕದವರ ಮೇಲೆ ಗಂಭೀರ ಪರಿಣಾಮ
ದೇವ ದೀಪಾವಳಿಯಂದು ಸಂಭವಿಸುವ ಚಂದ್ರ ಗ್ರಹಣವು ನಾಲ್ಕು ರಾಶಿಗಳಾಗಿರುವದ ವೃಶ್ಚಿಕ, ವೃಷಭ, ಕನ್ಯಾ ಮತ್ತು ಮಿಥುನ ರಾಶಿಯ ಜನರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. ಈ ರಾಶಿಯ ಜನರು ಈ ದಿನ ಜಾಗರೂಕರಾಗಿರಬೇಕು.
ವೃಶ್ಚಿಕ ರಾಶಿ- ಈ ರಾಶಿಯ ಜನರು ಗ್ರಹಣದ ಸಮಯದಲ್ಲಿ ಜಾಗರೂಕರಾಗಿರಬೇಕು. ಈ ಸಮಯದಲ್ಲಿ, ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವ ಮೊದಲು ನೀವು ಸಾಕಷ್ಟು ಯೋಚಿಸಬೇಕು. ಇಲ್ಲದಿದ್ದರೆ ನೀವು ದೊಡ್ಡ ಆರ್ಥಿಕ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ.
ವೃಷಭ ರಾಶಿ- ಈ ರಾಶಿಯವರಿಗೆ ಈ ಚಂದ್ರಗ್ರಹಣವೂ ಶುಭವಲ್ಲ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಗ್ರಹಣದ ಸಮಯದಲ್ಲಿ, ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದರಿಂದ ದೂರವಿರಲು ಯತ್ನಿಸಿ.
ಕನ್ಯಾರಾಶಿ- ಕನ್ಯಾ ರಾಶಿಯ ಜಾತಕದವರು ಇಡೀ 15 ದಿನಗಳವರೆಗೆ ಜಾಗರೂಕರಾಗಿರಬೇಕು. ಯಾವುದೇ ರೀತಿಯ ಅನಗತ್ಯ ಖರ್ಚುಗಳಿಂದ ದೂರವಿರಿ, ಅದು ನಿಮಗೆ ಒಳ್ಳೆಯದು.
ಇದನ್ನೂ ಓದಿ-Solar eclipse 2022: ಸೂರ್ಯಗ್ರಹಣ ವೇಳೆ ಈ 5 ಕೆಲಸ ಮಾಡಿದ್ರೆ ಸಿಗುತ್ತೆ ಸಾವಿರಾರು ಪಟ್ಟು ಲಾಭ!
ಮಿಥುನ ರಾಶಿ- ಈ ಗ್ರಹಣವು ಈ ರಾಶಿಯವರಿಗೆ ಆರ್ಥಿಕ ದೃಷ್ಟಿಯಿಂದ ಕೆಟ್ಟ ಪರಿಣಾಮ ಬೀರಲಿದೆ. ಈ ಸಮಯದಲ್ಲಿ ನಿಮ್ಮ ಖರ್ಚುಗಳು ಗಣನೀಯವಾಗಿ ಹೆಚ್ಚಾಗಬಹುದು ಮತ್ತು ಮಾನಸಿಕ ಒತ್ತಡದ ಸ್ಥಿತಿಯೂ ಎದುರಾಗಬಹುದು.
ಇದನ್ನೂ ಓದಿ-Surya Grahana 2022: ಗ್ರಹಣ ಮುಗಿದ ತಕ್ಷಣ ಈ ಕೆಲಸ ಮಾಡಿ... ಇಲ್ದಿದ್ರೆ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.