Solar eclipse 2022: ಸೂರ್ಯಗ್ರಹಣ ವೇಳೆ ಈ 5 ಕೆಲಸ ಮಾಡಿದ್ರೆ ಸಿಗುತ್ತೆ ಸಾವಿರಾರು ಪಟ್ಟು ಲಾಭ!

ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು? ಈ ಬಗ್ಗೆ ಕೆಲವು ನಿಯಮಗಳನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

Written by - Puttaraj K Alur | Last Updated : Oct 25, 2022, 05:19 PM IST
  • ಸೂರ್ಯಗ್ರಹಣದ ಸಮಯದಲ್ಲಿ ಮಂತ್ರಗಳ ಪಠಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ
  • ಗ್ರಹಣದ ವೇಳೆ ರುದ್ರಾಕ್ಷಿಯ ಜಪಮಾಲೆ ಧರಿಸುವುದರಿಂದ ಪಾಪಗಳು ನಾಶವಾಗುತ್ತವೆ
  • ಸೂರ್ಯಗ್ರಹಣದ ವೇಳೆ ಮಹಾಭಾರತ, ರಾಮಾಯಣ ಧಾರ್ಮಿಕ ಗ್ರಂಥ ಓದುವುದು ಲಾಭದಾಯಕ
Solar eclipse 2022: ಸೂರ್ಯಗ್ರಹಣ ವೇಳೆ ಈ 5 ಕೆಲಸ ಮಾಡಿದ್ರೆ ಸಿಗುತ್ತೆ ಸಾವಿರಾರು ಪಟ್ಟು ಲಾಭ! title=
Surya Grahan 2022

ನವದೆಹಲಿ: ವೈಜ್ಞಾನಿಕ ದೃಷ್ಟಿಕೋನದಿಂದ ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ. ಅದೇ ರೀತಿ ಸೂರ್ಯಗ್ರಹಣವನ್ನು ಧಾರ್ಮಿಕ ಗ್ರಂಥಗಳಲ್ಲಿ ವಿಶೇಷವೆಂದು ಪರಿಗಣಿಸಲಾಗಿದೆ. ಸೂರ್ಯಗ್ರಹಣದ ಬಗ್ಗೆ ಹಲವು ನಂಬಿಕೆಗಳಿವೆ. ಗ್ರಹಣದ ಸಮಯದಲ್ಲಿ ಯಾವುದೇ ರೀತಿಯ ಪೂಜೆ ಅಥವಾ ಆಚರಣೆಗಳನ್ನು ಮಾಡಲಾಗುವುದಿಲ್ಲವೆಂದು ಹೇಳಲಾಗುತ್ತದೆ. ಅದೇ ರೀತಿ ಈ ಅವಧಿಯಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳಿಗೆ ನಿಷೇಧವಿರುತ್ತದೆ.

ಸೂರ್ಯಗ್ರಹಣದ ಸಮಯದಲ್ಲಿ ಒಂದೇ ಸ್ಥಳದಲ್ಲಿ ಕುಳಿತು, ದೇವರ ವಿಗ್ರಹಗಳನ್ನು ಮುಟ್ಟದೆ ಅಥವಾ ಪೂಜಾ ಸ್ಥಳವನ್ನು ಮುಟ್ಟದೆ ಮಂತ್ರಗಳನ್ನು ಪಠಿಸುವುದು ಮತ್ತು ದೇವರ ಧ್ಯಾನ ಮಾಡುವುದು ವಿಶೇಷ ಫಲ ನೀಡುತ್ತದಂತೆ. ಇಂತಹ ಅನೇಕ ವಿಷಯಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಸೂರ್ಯಗ್ರಹಣದ ವೇಳೆ ನೀವು ಕೆಲವು ಕೆಲಸಗಳನ್ನು ಮಾಡಿದ್ರೆ ವಿಶೇಷ ಪ್ರಯೋಜನಗಳು ಸಿಗುತ್ತವೆ.

ಇದನ್ನೂ ಓದಿ: ಈ ರಾಶಿಯವರ ವೃತ್ತಿ-ವ್ಯವಹಾರದಲ್ಲಿ ಅದ್ಭುತ ಯಶಸ್ಸು ನೀಡಲಿದ್ದಾನೆ ಸೂರ್ಯ ದೇವ

ರುದ್ರಾಕ್ಷ ಮಣಿಗಳ ಪಠಣ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯಗ್ರಹಣದ ಸಮಯದಲ್ಲಿ ಮಂತ್ರಗಳ ಪಠಣಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಈ ಸಮಯದಲ್ಲಿ ಸೂಕ್ಷ್ಮವಾದ ಪಠಣವನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ವೇಳೆ ರುದ್ರಾಕ್ಷಿಯ ಜಪಮಾಲೆಯನ್ನು ಧರಿಸುವುದರಿಂದ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗಿದೆ. ಆದರೆ ಈ ರುದ್ರಾಕ್ಷವು ಅಸಲಿಯೇ ಆಗಿರಬೇಕು.

ಗುರುವಿನ ದೀಕ್ಷೆ

ಸೂರ್ಯಗ್ರಹಣದ ಸಮಯದಲ್ಲಿ ಗುರುವಿನಿಂದ ದೀಕ್ಷೆಯನ್ನು ತೆಗೆದುಕೊಳ್ಳುವುದು ಪ್ರಯೋಜನಕಾರಿ ಎಂದು ನಂಬಲಾಗಿದೆ. ನೀವು ಸೂರ್ಯಗ್ರಹಣದ ವೇಳೆ ಗುರುವಿನಿಂದ ದೀಕ್ಷೆ ತೆಗೆದುಕೊಂಡರೆ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ. ಸೂರ್ಯಗ್ರಹಣಕ್ಕೆ ಸಂಬಂಧಿಸಿದಂತೆ ಈ ಅವಧಿಯಲ್ಲಿ ಪಠಿಸುವುದರಿಂದ ಲಕ್ಷ ಪಟ್ಟು ಫಲಿತಾಂಶ ನೀಡುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: Surya ಮತ್ತು ಚಂದ್ರರು ಪ್ರೇಮಿಗಳಿದ್ದಂತೆ, ಗ್ರಹಣದ ವೇಳೆ ಪ್ರಪಂಚದಿಂದ ಮರೆಮಾಚಿ ಪ್ರೇಮಲೀಲೆ ನಡೆಸುತ್ತಾರಂತೆ!

ಧಾರ್ಮಿಕ ಗ್ರಂಥ ಓದುವುದು

ಸೂರ್ಯಗ್ರಹಣದ ಸಂದರ್ಭದಲ್ಲಿ ಮಹಾಭಾರತ, ರಾಮಾಯಣ ಮೊದಲಾದ ಧಾರ್ಮಿಕ ಗ್ರಂಥಗಳನ್ನು ಓದುವುದು ಲಾಭದಾಯಕವೆಂದು ಜ್ಯೋತಿಷಿಗಳು ಹೇಳಿದ್ದಾರೆ. ವಿಶೇಷವಾಗಿ ಗರ್ಭಿಣಿಯರು ಈ ಸಮಯದಲ್ಲಿ ಅವುಗಳನ್ನು ಓದಿಸರೆ ಅವರ ಮಗು ಉತ್ತಮವಾಗಿ ಬೆಳೆಯುತ್ತದೆ ಎಂದು ನಂಬಲಾಗಿದೆ. ಅದೇ ರೀತಿ ಮಗು ಸುಸಂಸ್ಕೃತವಾಗುತ್ತದೆ ಅಂತಾ ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News