ನವದೆಹಲಿ: ಹಣ್ಣುಗಳ ಸಿಪ್ಪೆಯಿಂದಾಗುವ ಲಾಭಗಳ ಕುರಿತು ಬಹುತೇಕರಿಗೆ ತಿಳಿದಿದೆ, ಆದರೆ ಮನೆಗಳಲ್ಲಿ ದಿನನಿತ್ಯ ಬಳಕೆಯಾಗುವ ಕೆಲ ತರಕಾರಿಗಳ ಸಿಪ್ಪೆಗಳು ಸಹ ಹೆಚ್ಚಿನ ಪ್ರಯೋಜನಗಳನ್ನು ಹೊಂದಿವೆ ಎಂಬುದು ಹಲವರಿಗೆ ಇನ್ನೂ ತಿಳಿದಿಲ್ಲ. ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬಗ್ಗೆ ಹೇಳುವುದಾದರೆ, ಜನರು ಅವುಗಳನ್ನು ಅಡುಗೆಮನೆಯಲ್ಲಿ ಪ್ರತಿದಿನ ಬಳಸುತ್ತಾರೆ. ವಿವಿಧ ರೀತಿಯ ಅಡುಗೆ ಪದಾರ್ಥಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಅವುಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಹಲವರು ಈರುಳ್ಳಿಯನ್ನು ಸಲಾಡ್ ರೂಪದಲ್ಲಿ ಸೇವಿಸುತ್ತಾರೆ. ಬೇಸಿಗೆಯ ಶಾಖದಿಂದ ರಕ್ಷಿಸುವಲ್ಲಿ ಈರುಳ್ಳಿ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಜನರು ಸಾಮಾನ್ಯವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬಳಸಿ ಅವುಗಳ ಸಿಪ್ಪೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತಾರೆ, ಹೀಗಾಗಿ ಅವುಗಳಿಂದಾಗುವ ಪ್ರಯೋಜನಗಳೇನು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಗೊಬ್ಬರದ ರೂಪದಲ್ಲಿ ಬಳಸಲಾಗುತ್ತದೆ
ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳನ್ನು ಎಸೆಯುವುದಕ್ಕಿಂತ ಅವುಗಳನ್ನು ಗೊಬ್ಬರದ ರೂಪದಲ್ಲಿ ಬಳಸಬಹುದು. ಅವುಗಳಿಂದ ತಯಾರಾದ ಗೊಬ್ಬರ ಸಸ್ಯಗಳಿಗೆ ತುಂಬಾ ಒಳ್ಳೆಯದು ಎಂದು ಪರಿನಗಿಸಲಾಗುತ್ತದೆ. ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳು ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ತಾಮ್ರದಿಂದ ಸಮೃದ್ಧವಾಗಿವೆ.


ಕೂದಲಿಗೆ ಪ್ರಯೋಜನಕಾರಿ
ಈರುಳ್ಳಿ ಸಿಪ್ಪೆಗಳು ಕೂದಲನ್ನು ತುಂಬಾ ಹೊಳೆಯುವಂತೆ ಮಾಡುತ್ತದೆ. ಈರುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ, ಈ ನೀರಿನಿಂದ ತಲೆ ತೊಳೆದುಕೊಂದರೆ ಕೂದಲಿಗೆ ಸಾಕಷ್ಟು ಹೊಳಪು ಬರುತ್ತದೆ. ಇದೇ ವೇಳೆ, ಅವುಗಳನ್ನು ತಲೆಯ ಕೂದಲಿಗೆ ಬಣ್ಣ ಮಾಡಲು ಸಹ ಬಳಸಲಾಗುತ್ತದೆ. ಈರುಳ್ಳಿ ಸಿಪ್ಪೆಯನ್ನು ಒಂದರಿಂದ ಅರ್ಧ ಘಂಟೆಯವರೆಗೆ ನೀರಿನಲ್ಲಿ ಕುದಿಸಿ. ಬಳಿಕ ಆ ನೀರಿನಿಂದ ತಲೆಗೆ ಮಸಾಜ್ ಮಾಡಿ, ಅರ್ಧ ಗಂಟೆಯ ನಂತರ ಕೂದಲನ್ನು ತೊಳೆಯಿರಿ. ಇದು ಕೂದಲಿಗೆ ನೈಸರ್ಗಿಕ ಬಣ್ಣವಾಗಿ ಕಾರ್ಯನಿರ್ವಹಿಸುತ್ತದೆ.


ಸೆಳೆತವನ್ನು ತೆಗೆದುಹಾಕುತ್ತದೆ
ಕೆಲವೊಮ್ಮೆ ದೇಹದ ಸ್ನಾಯುಗಳಲ್ಲಿ ಸಾಕಷ್ಟು ಸೆಳೆತವಿರುತ್ತದೆ. ಇದರಿಂದ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈರುಳ್ಳಿ ಸಿಪ್ಪೆಯನ್ನು 10-15 ನಿಮಿಷಗಳ ಕಾಲ ನೀರಿನಲ್ಲಿ ನೆನೆಹಾಕಿ. ರಾತ್ರಿ ಮಲಗುವ ಮುನ್ನ ಈ ನೀರನ್ನು ಕುಡಿಯಿರಿ. ಇದರಿಂದ ಸ್ನಾಯು ಸೆಳೆತದ ಸಂದರ್ಭದಲ್ಲಿ ಸಾಕಷ್ಟು ಪರಿಹಾರ ಸಿಗುತ್ತದೆ.


ಇದನ್ನೂ ಓದಿ-Kiss ಮಾಡುವಾಗ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ!


ಚರ್ಮದ ತುರಿಕೆ ನಿವಾರಣೆಗೆ ಪರಿಣಾಮಕಾರಿ
ಸಾಮಾನ್ಯವಾಗಿ ಚರ್ಮದ ತುರಿಕೆಯ ಸಮಸ್ಯೆ ಇರುವ ಜನರು ಹಲವು ಬಗೆಯ ಔಷಧಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿರುವ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಯಿಂದ ಈ ಸಮಸ್ಯೆಗೆ ನಾವು ಸಾಕಷ್ಟು ಪರಿಹಾರ ಕಂಡುಕೊಳ್ಳಬಹುದು. ನೀರಿನಲ್ಲಿ ನೆನೆಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸಿಪ್ಪೆಯನ್ನು ದೇಹದ ತ್ವಚೆಯ ಮೇಲೆ ಹಚ್ಚಿದರೆ ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ.


ಇದನ್ನೂ ಓದಿ-ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬೇಕೆ? ಈ ಸಂಗತಿಗಳನ್ನು ನೆನಪಿನಲ್ಲಿಡಿ!


(ಹಕ್ಕು ತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.