Kiss ಮಾಡುವಾಗ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ!

Kiss Side Effects: ಪುರುಷರ ಗಡ್ಡದಲ್ಲಿ ನಾಯಿಯ ಕೂದಲುಗಳಲ್ಲಿ ಕಂಡುಬರುವ  ಬ್ಯಾಕ್ಟೀರಿಯಾಗಳಿಗಿಂತ ಅಪಾಯಕಾರಿ ಮತ್ತು ಪವರ್ಫುಲ್ ಬ್ಯಾಕ್ಟೀರಿಯಾಗಳು ಇರುತ್ತವೆ. ಹೀಗಿರುವಾಗ ಒಂದು ವೇಳೆ ಮಹಿಳೆಯರು ಗಡ್ಡ ಹೊಂದಿರುವ ಪುರುಷರಿಗೆ ಮುತ್ತು ಕೊಟ್ಟರೆ, ಅದು ಅವರಿಗೆ ಹಲವು ರೀತಿಯಲ್ಲಿ ಹಾನಿಯನ್ನುಂಟು ಮಾಡಬಹುದು.  

Written by - Nitin Tabib | Last Updated : Jul 21, 2023, 07:49 PM IST
  • ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಗಡ್ಡ ಬಿಡುವುದು ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ.
  • ಅಷ್ಟೇ ಯಾಕೆ ಬಹುತೇಕ ಮಹಿಳೆಯರಿಗೆ ಗಡ್ಡ ಇರುವ ಪುರುಷರೇ ಇಷ್ಟವಾಗುತ್ತಾರೆ.
  • ಆದರೆ, ಗಡ್ಡ ಇರುವ ಪುರುಷರಿಗೆ ಮುತ್ತು ಕೊಡುವುದು ಮಹಿಳೆಯರ ಪಾಲಿಗೆ ಎಷ್ಟು ಅಪಾಯಕಾರಿಯಾಗಿದೆ ಎಂಬುದು ನಿಮಗೆ ತಿಳಿದಿದೆಯೇ?
Kiss ಮಾಡುವಾಗ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ! title=

ನವದೆಹಲಿ: ಮುತ್ತು ಕೊಡುವುದು ಯಾವಾಗಲೂ ಪ್ರೇಮ ಅಭಿವ್ಯಕ್ತಿಯ ಒಂದು ಸಂಕೇತವಾಗಿದೆ. ಪ್ರೇಮಿಗಳು ಯಾವಾಗಲೂ ತಮ್ಮ ಸಂಗಾತಿಗಳಿಗೆ ಮುತ್ತು ಕೊಟ್ಟು ಅವರ ಪ್ರತಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಒಂದು ವೇಳೆ ನೀವೂ ಕೂಡ ಯಾರಿಗಾಗರು ಮುತ್ತು ಕೊಟ್ಟಿದ್ದರೆ, ಅದರ ಅನುಭವ ನಿಮಗೆ ತಿಳಿದೇ ಇರುತ್ತದೆ. ಹಾಗೆ ನೋಡಿದರೆ ಕಿಸ್ ಮಾಡುವುದರ ಹಲವು ಲಾಭಗಳಿವೆ ಎಂದು ಹೇಳಲಾಗುತ್ತದೆ. ಆದರೆ, ಕಿಸ್ ಮಾಡುವುದರಿಂದ ನಾವು ತಿಳಿದು-ತಿಳಿಯದೆ ಹಲವು ಸಮಸ್ಯೆಗಳನ್ನು ನಮ್ಮ ಮೇಲೆ ಎಳೆದುಕೊಳ್ಳುತ್ತೇವೆ. ಹೀಗಿರುವಾಗ ಹಲವು ಅಧ್ಯಯನಗಳು ಕಿಸ್ ಮಾಡುವಾಗ ಯಾವ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು (Health News In Kannada) ಎಂಬುದನ್ನು ಹೇಳಲಾಗಿದೆ. ಪ್ರೀತಿಯ ಆಟದಲ್ಲಿ ಹೊಸ ಆಟಗಾರರಿಗಂತೂ ಮೊದಲು ಈ ಸಂಗತಿಗಳು ಅನ್ವಯಿಸುತ್ತವೆ, ಬನ್ನಿ ತಿಳಿದುಕೊಳ್ಳೋಣ,

ಗಡ್ಡ ನಿಮ್ಮ ಮುಖವನ್ನು ಹಾಳುಮಾಡಬಹುದು
ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ಗಡ್ಡ ಬಿಡುವುದು ಒಂದು ಟ್ರೆಂಡ್ ಆಗಿ ಮಾರ್ಪಟ್ಟಿದೆ. ಅಷ್ಟೇ ಯಾಕೆ ಬಹುತೇಕ ಮಹಿಳೆಯರಿಗೆ ಗಡ್ಡ ಇರುವ ಪುರುಷರೇ ಇಷ್ಟವಾಗುತ್ತಾರೆ. ಆದರೆ, ಗಡ್ಡ ಇರುವ ಪುರುಷರಿಗೆ ಮುತ್ತು ಕೊಡುವುದು ಮಹಿಳೆಯರ ಪಾಲಿಗೆ ಎಷ್ಟು ಅಪಾಯಕಾರಿಯಾಗಿದೆ ಎಂಬುದು ನಿಮಗೆ ತಿಳಿದಿದೆಯೇ? ಕ್ವೀನ್ ಮೇರಿ ಯೂನಿವರ್ಸಿಟೀ ಆಫ್ ಲಂಡನ್ ನ ಸಂಶೋಧಕರು 18 ರಿಂದ 76 ವಯಸ್ಸಿನ ಪುರುಷರ ಗಡ್ಡದ ಕುರಿತು ಒಂದು ಸಂಶೋಧನೆಯನ್ನು ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಬೆಚ್ಚಿ ಬೀಳಿಸುವ ಸಂಗತಿ ಬಹಿರಂಗಗೊಂಡಿದೆ. ಅಧ್ಯಯನದ ಪ್ರಕಾರ, ಪುರುಷರ ಗಡ್ಡದಲ್ಲಿ ನಾಯಿಯ ಕೂದಲುಗಳಲ್ಲಿ ಕಂಡುಬರುವ  ಬ್ಯಾಕ್ಟೀರಿಯಾಗಳಿಗಿಂತ ಅಪಾಯಕಾರಿ ಮತ್ತು ಪವರ್ಫುಲ್ ಬ್ಯಾಕ್ಟೀರಿಯಾಗಳು ಇರುತ್ತವೆ. ಹೀಗಿರುವಾಗ ಒಂದು ವೇಳೆ ಮಹಿಳೆಯರು ಗಡ್ಡ ಹೊಂದಿರುವ ಪುರುಷರಿಗೆ ಮುತ್ತು ಕೊಟ್ಟರೆ, ಅದು ಅವರಿಗೆ ಹಲವು ರೀತಿಯಲ್ಲಿ ಹಾನಿಯನ್ನುಂಟು ಮಾಡಬಹುದು. ಇದರಿಂದ ಮಹಿಳೆಯರಿಗೆ ತ್ವಚೆಯ ಸೋಂಕು ತಗುಲುವ ಸಾಧ್ಯತೆ ಇದೆ. ಹೀಗಿರುವಾಗ ಕಿಸ್ ಮಾಡುವ ಮುನ್ನ ಸಂಗಾತಿಗೆ ಗಡ್ಡ ತೆಗೆಯಿಸಿಕೊಳ್ಳುವಂತೆ ಸೂಚಿಸಲು ಮರೆಯಬೇಡಿ. 

ಕೆಮ್ಮು-ಸೀತ ಇದ್ದರೆ ತಾಳ್ಮೆವಹಿಸಿ 
ಒಂದು ವೇಳೆ ನಿಮ್ಮ ಸಂಗಾತಿಗೆ ಕೆಮ್ಮು-ಶೀತ ಇದ್ದರೆ, ಅಂತಹ ಪರಿಸ್ಥಿತಿಯಲ್ಲಿ ಕಿಸ್ ಮಾಡುವುದರಿಂದ ದೂರ ಉಳಿಯಿರಿ. ಇಂತಹ ಪರಿಸ್ಥಿತಿಯಲ್ಲಿ ಮುತ್ತು ಕೊಡುವುದರಿಂದ ಓರ್ವ ಸಂಗಾತಿಯ ಬಾಯಿಯಲ್ಲಿರುವ ಕ್ರಿಮಿಗಳು ಮತ್ತೊರ್ವ ಸಂಗಾತಿಯ ಬಾಯಿಗೆ ವರ್ಗಾವಣೆಯಾಗುತ್ತವೆ. ಕಿಸ್ ಮಾಡುವುದರಿಂದ ಜನರಲ್ಲಿ ಅತಿ ಹೆಚ್ಚು ಶೀತ-ಕೆಮ್ಮೀನ ದೂರುಗಳು ಇರುತ್ತವೆ. 

ಮೌತ್ ಅಲ್ಸರ್
ಉಭಯ ಸಂಗಾತಿಗಳಲ್ಲಿ ಒಂದು ವೇಳೆ ಯಾರಿಗಾದರೂ ಮೌತ್ ಅಲ್ಸರ್ ಇದ್ದರೆ, ಅಂತಹ ಸಂದರ್ಭದಲ್ಲಿ ಕಿಸ್ ಮಾಡದೆ ಇರುವುದು ಒಳಿತು. ಏಕೆಂದರೆ ಕಿಸ್ ಮಾಡುವುದರಿಂದ ಇಬ್ಬರ ಬಾಯಿಯಲ್ಲಿರುವ ಲಾಲಾರಸ ಪರಸ್ಪರರ ಬಾಯಿಗೆ ಹೋಗುವ ಸಾಧ್ಯತೆ ಇರುತ್ತದೆ. ಇದರಿಂದ ಬಾಯಿಯಲ್ಲಿ ಬ್ಯಾಕ್ಟೀರಿಯಾ ಸೋಂಕು ತಗುಳುವ ಸಾಧ್ಯತೆ ಇರುತ್ತದೆ. ಇದರಿಂದ ಎರಡನೇ ಸಂಗಾತಿಯೇ ಅಲ್ಸರ್ ಅಪಾಯ ಉಂಟಾಗುವುದರ ಜೊತೆಗೆ ಮೊದಲ ಸಂಗಾತಿಯ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ.

ಇದನ್ನೂ ಓದಿ-ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬೇಕೆ? ಈ ಸಂಗತಿಗಳನ್ನು ನೆನಪಿನಲ್ಲಿಡಿ!

ಹಲ್ಲುಗಳ ಮೇಲೆ ಗಮನ ಇರಲಿ
ತಜ್ಞರು ಹೇಳುವ ಪ್ರಕಾರ, ಕಿಸ್ ಮಾಡುವಾಗ ಸುಮಾರು 8 ಕೋಟಿ ಬ್ಯಾಕ್ಟೀರಿಯಾಗಳು ಪರಸ್ಪರ ವಿನಿಮಯವಾಗುತ್ತವೆ. ಹೀಗಿರುವಾಗ ಯಾವುದೇ ಓರ್ವ ವ್ಯಕ್ತಿ ದೀರ್ಘ ಕಾಲದವರೆಗೆ ವೈದ್ಯರನ್ನು ಸಂಪರ್ಕಿಸಿಲ್ಲ ಅಥವಾ ಬಾಯಿಯ ಸ್ವಚ್ಛತೆಯ ಬಗ್ಗೆ ಕಾಳಜಿವಹಿಸಿಲ್ಲ ಎಂದಾದಲ್ಲಿ ಬಾಯಿಯಲ್ಲಿ ಬ್ಯಾಕ್ಟೀರಿಯಾ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಕಿಸ್ ಮಾಡುವ ಮೊದಲು ಎದುರಿಗೆ ಇರುವ ವ್ಯಕ್ತಿ ನಿತ್ಯ ತನ್ನ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತಾನೋ ಅಥವಾ ಇಲ್ಲವೋ ಎಂಬುದನ್ನೂ ಸುನೀಶ್ಚಿತಗೊಳಿಸುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ.

ಇದನ್ನೂ ಓದಿ-ಈ ಸಂಗತಿಗಳಿಂದ ಇಂದೇ ಅಂತರ ಕಾಯ್ದುಕೊಳ್ಳಿ, ಇಲ್ದಿದ್ರೆ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆ...!

ತುಟಿಗಳ ಆರೋಗ್ಯದ ಬಗ್ಗೆ ಗಮನಹರಿಸಿ
ಸೀಳಿದ ತುಟಿಗಳಿಂದ ಒಂದು ವೇಳೆ ಕಿಸ್ ಮಾಡಿದರೆ. ಅಂತಹ ಸಂದರ್ಭದಲ್ಲಿ ಫಂಗಲ್ ಇನ್ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ. ಹೇಗಿರುವಾಗ ಅದು ನಿಮಗೆ ಮತ್ತು ನಿಮ್ಮ ಸಂಗಾತಿಗೆ ಅಪಾಯಕಾರಿ ಸಾಬೀತಾಗಬಹುದು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News