Chia Seeds for Belly Fat Loss : ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ತೂಕ ಹೆಚ್ಚಳದ  ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದೇ ಕಾರಣದಿಂದಾಗಿ  ಫಿಟ್ ಆಗುವ ಉದ್ದೇಶದಿಂದ ಜಿಮ್‌ನಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ನಾವು ಅಂದುಕೊಂಡ ಫಲಿತಾಂಶ ಸಿಗುವುದಿಲ್ಲ. ಆದರೆ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕಡಿಮೆ ಮಾಡುವ ಬೀಜವೊಂದಿದೆ. ಇದನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕಡಿಮೆ ಮಾಡಲು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ತೂಕ ನಷ್ಟಕ್ಕಾಗಿ ಬಳಸಿ ಚಿಯಾ ಬೀಜ :
ಈ ಕಪ್ಪು ಬೀಜಗಳು ಕರಗುವ ಫೈಬರ್ ಮತ್ತು ಪ್ರೊಟೀನ್‌ನಿಂದ ಸಮೃದ್ದವಾಗಿವೆ. ಇದನ್ನು ಸೇವಿಸಿದರೆ ಬಹಳ ಹೊತ್ತಿನವರೆಗೆ ಹಸಿವಾಗುವುದಿಲ್ಲ. ಚಿಯಾ ಬೀಜಗಳು ಪ್ರೋಟೀನ್‌ನಲ್ಲಿ ಸಮೃದ್ಧವಾಗಿವೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಚಿಯಾ ಬೀಜಗಳು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳಲ್ಲಿ ಒಂದಾಗಿದೆ. ಇದರಲ್ಲಿ ನಾರಿನಂಶವೂ ಅಧಿಕವಾಗಿದೆ. ಇದು ದೇಹದ ಕೊಬ್ಬನ್ನು ಅತಿ ವೇಗದಲ್ಲಿ ಕರಗಿಸಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ : ಪ್ರತಿದಿನ ಕಡಲೆಕಾಯಿ ಬೀಜವನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?


ತೂಕ ನಷ್ಟಕ್ಕೆ ಚಿಯಾ ಬೀಜಗಳನ್ನು ಹೇಗೆ ಸೇವಿಸುವುದು? 
ಚಿಯಾ ಸೀಡ್ ಟೀ :
ಪ್ರತಿದಿನ ಹಾಲು ಮತ್ತು ಸಕ್ಕರೆಯ ಟೀ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಬದಲಿಗೆ ಚಿಯಾ ಬೀಜಗಳಿಂದ ಮಾಡಿದ ಚಹಾವನ್ನು ಕುಡಿಯಿರಿ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯಾ ಮಾಡುತ್ತದೆ. ಇದಕ್ಕಾಗಿ ಚಿಯಾ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ಕುದಿಸಿ, ನೀರು ಅರ್ಧದಷ್ಟಾಗುವಾಗ ಅದನ್ನು ಒಂದು ಕಪ್‌ನಲ್ಲಿ ತೆಗೆದುಕೊಂಡು ನಿಧಾನವಾಗಿ ಕುಡಿಯಿರಿ.


ಮೊಸರಿನೊಂದಿಗೆ ಚಿಯಾ ಬೀಜ:
ಮೊಸರಿನೊಂದಿಗೆ ಚಿಯಾ ಬೀಜಗಳನ್ನು  ಸೇವಿಸುವುದರಿಂದ
ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ. ಮೊಸರಿಗೆ ಚಿಯಾ ಬೀಜಗಳನ್ನು ಸೇರಿಸಿ ತಿನ್ನುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಇದಕ್ಕಾಗಿ ಚಿಯಾ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ನೀರನ್ನು ಸೋಸಿ ಕೇವಲ ಬೀಜಗಳನ್ನು ಮೊಸರಿನೊಂದಿಗೆ ಬೆರೆಸಿ ತಿನ್ನಿರಿ.


ಇದನ್ನೂ ಓದಿ : ಹೆಚ್ಚು ಕಾಲ ಕುಳಿತು ಕೆಲಸ ಮಾಡಿ ಬೆನ್ನು, ಕುತ್ತಿಗೆ ನೋವು ಕಾಡುತ್ತಿದೆಯೇ? ಈ ಸಿಂಪಲ್‌ ವ್ಯಾಯಾಮ ಮಾಡಿ ಸಾಕು!


ಚಿಯಾ ಬೀಜದ ನೀರು :
ಚಿಯಾ ಬೀಜದ ನೀರು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.  ಒಂದು ಟೀ ಚಮಚ ಚಿಯಾ ಬೀಜಗಳನ್ನು ರಾತ್ರಿಯಿಡೀ ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ. ಇದನ್ನು ನಿಯಮಿತವಾಗಿ ಮಾಡಿದರೆ ಹೊಟ್ಟೆ ಮತ್ತು ಸೊಂಟದ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ.


ಚಿಯಾ ಸೀಡ್ ಸಲಾಡ್ :
 ಬೇಗನೆ ತೂಕ ಇಳಿಸಿಕೊಳ್ಳಲು ಬಯಸಿದರೆ, ಖಂಡಿತವಾಗಿಯೂ ಚಿಯಾ ಸೀಡ್ ಸಲಾಡ್ ಅನ್ನು ದೈನಂದಿನ ಆಹಾರದಲ್ಲಿ ಸೇರಿಸಿ. ಇದಕ್ಕಾಗಿ ಚಿಯಾ ಬೀಜಗಳನ್ನು ಹಣ್ಣು ಮತ್ತು ತರಕಾರಿ ಸಲಾಡ್‌ಗಳೊಂದಿಗೆ ಬೆರೆಸಬಹುದು. ಇದು ದೈಹಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.