Lord Shiva: ಭಗವಾನ್ ಶಂಕರನ ಈ ಅದ್ಭುತ ಮಂತ್ರ ಪಠಿಸಿದ್ರೆ ಎಲ್ಲಾ ಸಮಸ್ಯೆಗಳಿಗೂ ಮುಕ್ತಿ ಸಿಗಲಿದೆ!
ಭಗವಾನ್ ಭೋಲೆನಾಥನು ಯಾರ ಮೇಲೆ ಪ್ರಸನ್ನನಾಗುತ್ತಾನೋ ಅವರ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಶಿವನನ್ನು ಮೆಚ್ಚಿಸಲು ಈ ಅದ್ಭುತ ಮಂತ್ರವನ್ನು ಜಪಿಸಬೇಕು. ಇದರಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಸಿಗಲಿದೆ.
ನವದೆಹಲಿ: ರುದ್ರಾಕ್ಷಿಯ ಜಪಮಾಲೆಯೊಂದಿಗೆ ‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಭಗವಾನ್ ಭೋಲೆನಾಥನ ವಿಶೇಷ ಅನುಗ್ರಹ ಪಡೆಯಬಹುದು. ಈ ಮಂತ್ರವನ್ನು ಅತ್ಯಂತ ಶಕ್ತಿಶಾಲಿ ಮತ್ತು ಅದ್ಭುತವೆಂದು ನಂಬಲಾಗಿದೆ.'ಓಂ ನಮಃ ಶಿವಾಯ' ಎಂಬ ಮಂತ್ರವನ್ನು ಪಠಿಸುವುದರಿಂದ ಸಂಪೂರ್ಣ ಗ್ರಂಥ ಜ್ಞಾನ ಪ್ರಾಪ್ತಿಯಾಗುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.
ಶಿವನ ಮಂತ್ರ
ಪುರಾಣಗಳ ಪ್ರಕಾರ, ಒಮ್ಮೆ ತಾಯಿ ಪಾರ್ವತಿಯು ಭೋಲೆನಾಥನನ್ನು ಈ ರೀತಿ ಕೇಳಿದಳು, ‘ಕಲಿಯುಗದಲ್ಲಿ ಎಲ್ಲಾ ಪಾಪಗಳನ್ನು ತೊಡೆದುಹಾಕಲು ಯಾವ ಮಂತ್ರವನ್ನು ಪಠಿಸಬೇಕು?’ ಇದಕ್ಕೆ ಉತ್ತರಿಸಿದ ಶಿವನು ತನ್ನ 5 ಮುಖಗಳಿರುವ ಬ್ರಹ್ಮನಿಗೆ ಈ ಮಂತ್ರವನ್ನು ನೀಡಿದ ಮೊದಲಿಗನೆಂದು ಹೇಳಿದನು.
ಇದನ್ನೂ ಓದಿ: ಮೀನ ರಾಶಿಗೆ ಗುರುವಿನ ಪ್ರವೇಶ: ಈ 4 ರಾಶಿಯವರ ಅದೃಷ್ಟವೇ ಬದಲಾಗಲಿದೆ, ಹಣದ ಮಳೆಯಾಗಲಿದೆ!
ಈ ಮಂತ್ರದ ಅಧಿದೇವತೆ ಶಿವ
‘ಓಂ ನಮಃ ಶಿವಾಯ’ ಸನಾತನ ಧರ್ಮದಲ್ಲಿ ಪಂಚಾಕ್ಷರ ಎನ್ನುತ್ತಾರೆ. ಶಿವ ಪುರಾಣದ ಪ್ರಕಾರ, ಈ ಮಂತ್ರದ ಋಷಿ ವಾಮದೇವ ಮತ್ತು ಶಿವನೇ ಅದರ ಅಧಿದೇವತೆ. ಈ ಮಂತ್ರವನ್ನು ಶರಣಾಕ್ಷರ ಮಂತ್ರ ಎಂದೂ ಕರೆಯುತ್ತಾರೆ. ‘ಓಂ ನಮಃ ಶಿವಾಯ’ ಎಂದರೆ ಜನರು ದ್ವೇಷ, ಮೋಹ, ಸ್ವಾರ್ಥ, ಲೋಭ, ಅಸೂಯೆ, ಕಾಮ, ಕ್ರೋಧ, ಮೋಹ, ಭ್ರಮೆ ಮತ್ತು ಹುಚ್ಚುತನದಿಂದ ದೂರವಿದ್ದು, ಪ್ರೀತಿ ಮತ್ತು ಆನಂದದಿಂದ ದೇವರ ಅನುಗ್ರಹ ಪಡೆಯುತ್ತಾರೆ ಎಂದರ್ಥ.
ಪಠಣ ವಿಧಾನ
ಈ ಮಂತ್ರವನ್ನು ಶಿವನ ದೇವಸ್ಥಾನ, ದೇಗುಲ ಅಥವಾ ಮನೆಯಲ್ಲಿ ಸ್ವಚ್ಛ, ಶಾಂತ ಮತ್ತು ಏಕಾಂತ ಸ್ಥಳದಲ್ಲಿ ಕುಳಿತು ಜಪಿಸಬೇಕು. ರುದ್ರಾಕ್ಷಿಯ ಜಪಮಾಲೆಯೊಂದಿಗೆ ಈ ಮಂತ್ರವನ್ನು 108 ಬಾರಿ ಜಪಿಸಬೇಕು. ಮಂತ್ರವನ್ನು ಪಠಿಸುವಾಗ ಯಾವಾಗಲೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಿ. ಯೋಗಾಸನದಲ್ಲಿ ಕುಳಿತು ಈ ಮಂತ್ರವನ್ನು ಜಪಿಸಬೇಕು. ಶುಕ್ಲ ಪಕ್ಷದ ಪ್ರತಿಪದ ತಿಥಿಯಿಂದ ಕೃಷ್ಣ ಪಕ್ಷದ ಚತುರ್ದಶಿಯವರೆಗೆ ಈ ಮಂತ್ರವನ್ನು ಪಠಿಸಬೇಕು. ಈ ಸಮಯದಲ್ಲಿ ಆಹಾರ, ಮಾತು ಮತ್ತು ಇಂದ್ರಿಯಗಳಲ್ಲಿ ಸಂಯಮ ವ್ಯಾಯಾಮ ಮಾಡಿ.
ಇದನ್ನೂ ಓದಿ: Chanakya Niti : ಈ ಗುಣಗಳನ್ನು ಹೊಂದಿರುವ ಪುರುಷರು, ಮಹಿಳೆಯರನ್ನು ತುಂಬಾ ಲವ್ ಮಾಡ್ತಾರೆ!
ಮಂತ್ರದ ಪ್ರಯೋಜನಗಳು
ಈ ಮಂತ್ರವನ್ನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪಠಿಸಬಹುದು. ಈ ಮಂತ್ರವನ್ನು ಪಠಿಸಿದ್ರೆ ಭಗವಾನ್ ಭೋಲೆನಾಥನು ಸಂತುಷ್ಟನಾಗಿ ಆಶೀರ್ವಾದ ನೀಡುತ್ತಾನೆಂದು ನಂಬಲಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಶತ್ರುಗಳಿಂದ ನಿಮಗೆ ವಿಜಯ ಸಿಗುತ್ತದೆ. ನಿಮ್ಮ ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.