Tiger Stone Benefits: ಯಾವುದೇ ವ್ಯಕ್ತಿಯ ಜಾತಕದಲ್ಲಿ ದುರ್ಬಲ ಗ್ರಹ ಅಥವಾ ಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ರತ್ನವನ್ನು ಧರಿಸಲು ಜೋತಿಷ್ಯ ಶಾಸ್ತ್ರದಲ್ಲಿ ಸಲಹೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ವ್ಯಕ್ತಿಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಲ್ಲದೆ, ಕೆಟ್ಟ ಗ್ರಹಗಳ ಪ್ರಭಾವದಿಂದಲೂ ಕೂಡ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು. ಅಂತಹುದೇ ಒಂದು ರತ್ನದ ಬಗ್ಗೆ ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ, ಈ ಹರಳು ನವರತ್ನಗಳ ಭಾಗವಲ್ಲ. ಆದರೆ ಇದನ್ನು ಧರಿಸುವುದರಿಂದ, ಒಬ್ಬ ವ್ಯಕ್ತಿಯು ಕೆಲಸ ಮತ್ತು ವ್ಯವಹಾರದಲ್ಲಿ ಯಶಸ್ಸಿನ ಶಿಖರವನ್ನೇ ಏರುತ್ತಾನೆ ಎನ್ನಲಾಗುತ್ತದೆ.


COMMERCIAL BREAK
SCROLL TO CONTINUE READING

ಉದ್ಯೋಗ ಮತ್ತು ವ್ಯಾಪಾರದಲ್ಲಿನ ಪ್ರಗತಿಗಾಗಿ  ಇದನ್ನು ಧರಿಸಿ
ಜೀವನದಲ್ಲಿ ಉದ್ಯೋಗ ಮತ್ತು ವ್ಯಾಪಾರದಲ್ಲಿ ಬರುವ ಸಮಸ್ಯೆಗಳಿಂದಾಗಿ ಹಲವು ಬಾರಿ ವ್ಯಕ್ತಿಯು ತುಂಬಾ ಕಿರಿಕಿರಿಗೊಳ್ಳುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ, ಈ ಹರಳನ್ನು ಧರಿಸುವ ಮೂಲಕ ನೀವು ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಬರುವ ಸಮಸ್ಯೆಗಳನ್ನು ನಿವಾರಿಸಲು ಹುಲಿಗಣ್ಣಿನ ರತ್ನವನ್ನು ಅಥವಾ ಟೈಗರ್ ಜೆಮ್  ಅನ್ನು ನೀವು ಧರಿಸಬಹುದು. ಇದು ತುಂಬಾ ಪ್ರಭಾವಶಾಲಿ ರತ್ನವಾಗಿದೆ. ಆದರೆ, ಈ ರತ್ನಕ್ಕೆ 9 ರತ್ನಗಳಲ್ಲಿ ಸ್ಥಾನ ಸಿಕ್ಕಿಲ್ಲ. ಆದರೆ ಇದರ ಫಲಿತಾಂಶಗಳು ಮಾತ್ರ ಅದ್ಭುತವಾಗಿವೆ.


ಯಾವಾಗ ಧರಿಸಬೇಕು
ರತ್ನ ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಗ್ರಹಗಳ ದುಷ್ಪರಿಣಾಮಗಳಿಂದ ಸಾಲದಲ್ಲಿದ್ದರೆ ಅಥವಾ ಉದ್ಯೋಗ ಅಥವಾ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುತ್ತಿದ್ದರೆ, ಅಂತಹ ವ್ಯಕ್ತಿಗೆ ಹುಲಿಗಣ್ಣಿನ ರತ್ನ ಧರಿಸಲು ಸಲಹೆ ನೀಡಲಾಗುತ್ತದೆ. ಹುಲಿ ಗಣ್ಣಿನ ರತ್ನವನ್ನು ಧರಿಸಲು, ಯಾವುದೇ ತಿಂಗಳ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ತೋರು ಅಥವಾ ಉಂಗುರ ಬೆರಳಿನಲ್ಲಿ ಧರಿಸಬಹುದು.


ಈ ರತ್ನ ಹೇಗೆ ಕಾಣಿಸುತ್ತದೆ
ರತ್ನ ಶಾಸ್ತ್ರದ ಪ್ರಕಾರ, ಪ್ರತಿಯೊಂದು ರತ್ನದ ಬಣ್ಣ ಮತ್ತು ರೂಪವು ವಿಭಿನ್ನವಾಗಿರುತ್ತದೆ. ಹುಲಿಗಣ್ಣಿನ ರತ್ನವು ಹಳದಿ ಮತ್ತು ಕಪ್ಪು ಪಟ್ಟೆಗಳನ್ನು ಹೊಂದಿರುವ ಒಂದು ಹರಳಾಗಿದೆ. ಈ ರತ್ನವನ್ನು ವ್ಯಾಪಾರ ಮತ್ತು ವೃತ್ತಿಗೆ ತುಂಬಾ ಶುಭಕರ ಎಂದು ಪರಿಗಣಿಸಲಾಗುತ್ತದೆ.


ಇದನ್ನೂ ಓದಿ-Kaal Sarp Dosh: ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಹೆದರಬೇಡಿ, ಊಹೆಗೂ ಮೀರಿ ಲಾಭ ನಿಮ್ಮದಾಗುತ್ತದೆ


ಹುಲಿಗಣ್ಣಿನ ರತ್ನದ ಪ್ರಯೋಜನಗಳು
>> ಈ ರತ್ನವನ್ನು ಧರಿಸುವುದರಿಂದ, ಒಬ್ಬ ವ್ಯಕ್ತಿಯು ಯಶಸ್ಸಿನ ಶಿಖರವನ್ನೇ ಏರುತ್ತಾನೆ. ಆತನ ವೃತ್ತಿಜೀವನದಲ್ಲಿ ಬಹುಬೇಗ ಮತ್ತು ಧನಾತ್ಮಕ ಫಲಿತಾಂಶಗಳು ಗೋಚರಿಸಲು ಆರಂಭಿಸುತ್ತವೆ.
>> ಹುಲಿ ಗಣ್ಣಿನ ರತ್ನದ ವಿಶೇಷತೆ ಎಂದರೆ, ಇದು ವ್ಯಾಪಾರಸ್ಥರಿಗೆ ವಿಶೇಷ ಫಲ ನೀಡುವುದು. ಇದನ್ನು ಧರಿಸಿದ ತಕ್ಷಣ ವ್ಯಕ್ತಿಯ ಮೇಲೆ ಅದರ ಪರಿಣಾಮ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ರತ್ನವು ಒಬ್ಬ ವ್ಯಕ್ತಿಗೆ ಸರಿಹೊಂದಿದರೆ, ಅವನ ಮಲಗಿರುವ ಅದೃಷ್ಟವೂ ಪುಟಿದೇಳುತ್ತದೆ ಎನ್ನಲಾಗುತ್ತದೆ. ಈ ರತ್ನವನ್ನು ಧರಿಸುವುದರಿಂದ, ಒಬ್ಬ ವ್ಯಕ್ತಿಯು ಸಾಕಷ್ಟು ಘನತೆ ಮತ್ತು ಗೌರವವನ್ನು ಪಡೆಯುತ್ತಾನೆ.


ಇದನ್ನೂ ಓದಿ-Nag Panchami 2022: ಹಲವು ವರ್ಷಗಳ ಬಳಿಕ ನಾಗ ಪಂಚಮಿಯಂದು ಈ ಅದ್ಭುತ ಯೋಗ ನಿರ್ಮಾಣಗೊಳ್ಳುತ್ತಿದೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.