Nag Panchami 2022: ಶ್ರಾವಣ ಮಾಸದಲ್ಲಿ ನಾಗರ ಪಂಚಮಿಯ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಈ ದಿನ ಶಿವನ ಜೊತೆಗೆ ನಾಗದೇವತೆಗೂ ಕೂಡ ವಿಧಿ ವಿಧಾನದಿಂದ ಪೂಜಿಸಲಾಗುತ್ತದೆ. ಧರ್ಮಶಾಸ್ತ್ರಗಳ ಪ್ರಕಾರ ಜೀವಂತ ಹಾವನ್ನು ಹೊರತುಪಡಿಸಿ, ಹಾವಿನ ಪ್ರತಿಮೆಗೆ ಪೂಜೆ ಸಲ್ಲಿಸಬೇಕು ಎಂದು ಹೇಳಲಾಗುತ್ತದೆ. ಈ ದಿನ ದೇವಾಧಿದೇವ ಮಹಾದೇವನಿಗೆ ವಿಧಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿ, ರುದ್ರಾಭಿಷೇಕ ಮಾಡುವ ಎಲ್ಲಾ ಭಕ್ತಾದಿಗಳ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತವೆ. ಜೀವನದಲ್ಲಿ ಖುಷಿ ಮತ್ತು ಸುಖ-ಸಂರುದ್ಧಿಗಳ ಆಗಮನವಾಗುತ್ತದೆ. ಈ ಬಾರಿಯ ನಾಗ ಪಂಚಮಿ ಉತ್ಸವವನ್ನು ನಾಳೆ ಅಂದರೆ ಆಗಸ್ಟ್ 2ರಂದು ಮಂಗಳವಾರ ಆಚರಿಸಲಾಗುತ್ತಿದೆ. ನಾಗರ ಪಂಚಮಿಯ ದಿನ ನಾಗದೆವತೆಯನ್ನು ಏಕೆ ಪೂಜಿಸಲಾಗುತ್ತದೆ ಮತ್ತು ಅದರ ಮಹತ್ವವೇನು ತಿಳಿದುಕೊಳ್ಳೋಣ ಬನ್ನಿ
ನಾಗಪಂಚಮಿಯ ದಿನ ಮೊದಲ ಮಂಗಳಾ ಗೌರಿ ವೃತ
ಈ ಬಾರಿಯ ನಾಗ ಪಂಚಮಿಯ ದಿನ ವಿಶೇಷ ಯೋಗ ನಿರ್ಮಾಣಗೊಳ್ಳುತ್ತಿದೆ. ನಾಗಪಂಚಮಿಯ ದಿನ ಮೊದಲ ಮಂಗಳಾಗೌರಿ ವ್ರತ ಆಚರಿಸಲಾಗುವುದು. ಶ್ರಾವಣ ಮಾಸದಲ್ಲಿ ಸೋಮವಾರದ ಜೊತೆಗೆ ಮಂಗಳವಾರದ ವ್ರತಕ್ಕೂ ಕೂಡ ವಿಶೇಷ ಮಹತ್ವವಿರುತ್ತದೆ. ಮಂಗಳವಾರದ ವೃತ ತಾಯಿ ಪಾರ್ವತಿಗೆ ಸಮರ್ಪಿತವಾಗಿದೆ. ಶ್ರಾವಣ ಮಾಸದಲ್ಲಿ ಪ್ರತಿ ಮಂಗಳವಾರದಂದು ಮಂಗಳಾ ಗೌರಿಯ ವ್ರತವನ್ನು ಕೈಗೊಳ್ಳುವುದಕ್ಕೆ ವಿಶೇಷ ಮಹತ್ವವಿದೆ.
ನಾಗ ಪಂಚಮಿ ಮುಹೂರ್ತ
>> ಪಂಚಮಿ ತಿಥಿಯ ಆರಂಭ - ಆಗಸ್ಟ್ 2, 2022 ರ ಬೆಳಗ್ಗೆ 5.13ಕ್ಕೆ ಆರಂಭ
>> ಪಂಚಮಿ ತಿಥಿಯ ಸಮಾಪ್ತಿ - ಆಗಸ್ಟ್ 03, 2022 ರಂದು ಬೆಳಗ್ಗೆ 5.41 ಕ್ಕೆ ಸಮಾಪ್ತಿ
>> ನಾಗ ಪಂಚಮಿ ಪೂಜೆಗೆ ಮುಹೂರ್ತ - ಆಗಸ್ಟ್ 2022 ರಂದು ಬೆಳಗ್ಗೆ 5.43 ರಿಂದ ಬೆಳಗ್ಗೆ 8.25ರವರೆಗೆ (ಮುಹೂರ್ತ ಅವಧಿ -2 ಗಂಟೆ 42 ನಿಮಿಷ)
ನಾಗಪಂಚಮಿಯಂದು ನಿರ್ಮಾಣಗೊಳ್ಳುತ್ತಿವೆ ಎರಡು ಶುಭ ಕಾಕತಾಳೀಯಗಳು
ಈ ಬಾರಿಯ ನಾಗಪಂಚಮಿಯ ದಿನ ಶಿವ ಯೋಗ ಹಾಗೂ ಸರ್ವಾರ್ಥಸಿದ್ಧಿಯೋಗಗಳು ನಿರ್ಮಾಣಗೊಳ್ಳುತ್ತಿವೆ. ಶಿವ್ ಯೋಗ ಬೆಳಗ್ಗೆ 6.38 ರವರೆಗೆ ಇರಲಿದ್ದರೆ. ನಂತರ ಸರ್ವರ್ಥ ಸಿದ್ಧಿ ಯೋಗ ಆರಂಭಗೊಳ್ಳಲಿದೆ. ಶಾಸ್ತ್ರಗಳ ಪ್ರಕಾರ ಈ ಯೋಗದಲ್ಲಿ ಮಾಡಲಾಗುವ ಕೆಲಸ ಕಾರ್ಯಗಳು ಶುಭ ಫಲಪ್ರದಾಯಿ ಸಾಬೀತಾಗುತ್ತವೆ ಎನ್ನಲಾಗುತ್ತದೆ.
ಈ ಮುಹೂರ್ತದಲ್ಲಿ ಪೂಜೆಯನ್ನು ನೆರವೆರಿಸಬೇಡಿ
ರಾಹುಕಾಲ - ಮಧ್ಯಾಹ್ನ 3.49 ರಿಂದ 5.30ರವರೆಗೆ
ಯಮಗಂಡ ಕಾಲ - ಬೆಳಗ್ಗೆ 9.45 ರಿಂದ 10.46 ರವರೆಗೆ
ಗುಳಿ ಕಾಲ - ಮಧ್ಯಾಹ್ನ 12.27 ರಿಂದ 02.08ರವರೆಗೆ
ವಿಡಾಲ ಯೋಗ - ಸಂಜೆ 5.29 ರಿಂದ ಆಗಸ್ಟ್ 03 ರ ಬೆಳಗಿನ ಜಾವ 5.43ರವರೆಗೆ
ವರ್ಜ: ಆಗಸ್ಟ್ 03 ರ ಬೆಳಗ್ಗೆ 2.12 ರಿಂದ ಬೆಳಗ್ಗೆ 3.52ರವರೆಗೆ.
ಇದನ್ನೂ ಓದಿ-Nag Panchami 2022: ಪಂಚಮಿಯ ದಿನ ಅಪ್ಪಿ-ತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ, ಜೀವನವಿಡಿ ಕಷ್ಟ ಅನುಭವಿಸಬೇಕಾಗುತ್ತದೆ
ನಾಗರಪಂಚಮಿಯ ಮಹತ್ವ
ನಾಗ ಪಂಚಮಿಯ ದಿನದಂದು 12 ದೇವತಾ ಸರ್ಪಗಳಾದ ಅನಂತ, ವಾಸುಕಿ, ಶೇಷ, ಪದ್ಮ, ಕಂಬಳ, ಅಶ್ವತರ್, ಶಂಖಪಾಲ, ಧೃತರಾಷ್ಟ್ರ, ತಕ್ಷಕ, ಕಾಳಿಯ ಮತ್ತು ಪಿಂಗಲರನ್ನು ಸ್ಮರಿಸಬೇಕು. ಹೀಗ ಮಾಡುವುದರಿಂದ ಭಯವು ತಕ್ಷಣವೇ ದೂರಾಗುತ್ತದೆ ಎಂದು ನಂಬಲಾಗಿದೆ. ಈ ದಿನ 'ಓಂ ಕುರುಕುಲ್ಯೇ ಹಮ್ ಫಟ್ಟ್ ಸ್ವಾಹಾ' ಎಂಬ ಮಂತ್ರವನ್ನು ಪಠಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನಾಮಸ್ಮರಣೆ ಮಾಡಿದರೆ ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ. ವರ್ಷದ ಹನ್ನೆರಡು ತಿಂಗಳು ಈ ಸರ್ಪಗಳನ್ನು ಪೂಜಿಸಬೇಕು. ನಿಮ್ಮ ಜಾತಕ ರಾಹು ಮತ್ತು ಕೇತುಗಳು ದುರ್ಬಲವಾದ - ವೃಶ್ಚಿಕ, ವೃಷಭ, ಧನು ಮತ್ತು ಮಿಥುನ ರಾಶಿಯಲ್ಲಿದ್ದರೆ ನೀವು ನಾಗ ಪಂಚಮಿಯ ದಿನ ಪೂಜೆ ಸಲ್ಲಿಸಬೇಕು. ದತ್ತಾತ್ರೇಯನ 24 ಗುರುಗಳಲ್ಲಿ ನಾಗದೇವರು ಕೂಡ ಒಬ್ಬರಾಗಿದ್ದರು ಎಂದು ಹೇಳಲಾಗುತ್ತದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.