Lucky Name: ಇಂತಹ ಹುಡುಗರಿಗೆ ಬೇಗ ಇಂಪ್ರೆಸ್ ಆಗ್ತಾರೆ ಹುಡಗಿಯರು
Name Numerology: ನಾಮ ಅಂಕ ಜೋತಿಶ್ಯರು ಹೇಳುವ ಪ್ರಕಾರ, ವ್ಯಕ್ತಿಯ ಹೆಸರಿನ ಮೊದಲ ಅಕ್ಷರವು ಆತನ ಸ್ವಭಾವದ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿಯನ್ನು ನೀಡುತ್ತದೆ ಎನ್ನಲಾಗಿದೆ. ಒಂದು ವೇಳೆ ನಿಮ್ಮ ಸಂಗಾತಿಯ ಹೆಸರು ಕೂಡ ಇಂತಹುದೇ ಅಕ್ಷರದಿಂದ ಆರಂಭವಾಗುತ್ತಿದ್ದರೆ ಆತನ ಸ್ವಭಾವ ಹೇಗೆ ಇರುತ್ತದೆ ಗೊತ್ತಾ?
Lucky Name Numerology Alphabets: ವ್ಯಕ್ತಿಯ ಹೆಸರು ಆತನ ಸ್ವಭಾವವನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಧರಿಸುತ್ತದೆ ಎಂದು ಅಂಕ ಜೋತಿಶ್ಯರು ಹೇಳುತ್ತಾರೆ. ಹೀಗಾಗಿ ಮನೆಯಲ್ಲಿ ಮಗುವಿಗೆ ಹೆಸರು ಇಡುವಾಗ ನಮ್ಮ ಹಿರಿಯರು ನೂರು ಬಾರಿ ಯೋಚಿಸಬೇಕು ಎಂದು ಹೇಳುತ್ತಾರೆ. ಪ್ರತಿಯೊಬ್ಬರೂ ಕೂಡ ತಮ್ಮ ಭಾವಿ ಸಂಗಾತಿಯನ್ನು ತುಂಬಾ ಪ್ರೀತಿಸಬೇಕು ಮತ್ತು ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಯಸುತ್ತಾರೆ. ಆದರೆ, ಇದಕ್ಕಾಗಿ ನೀವು ಇಷ್ಟಪಡುವ ಸಂಗಾತಿಯ ಸ್ವಭಾವವು ಉತ್ತಮ ಮತ್ತು ಸೌಮ್ಯವಾಗಿರಬೇಕು. ಒಬ್ಬ ವ್ಯಕ್ತಿಯ ಹೆಸರಿನ ಮೊದಲಕ್ಷರ ಆ ವ್ಯಕ್ತಿಯ ಸ್ವಭಾವದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಬಹಿರಂಗಪಡಿಸುತ್ತದೆ ಎಂದು ಅಂಕ ಜೋತಿಷ್ಯ ಹೇಳುತ್ತದೆ. ಏಕೆಂದರೆ ವ್ಯಕ್ತಿಯ ಹೆಸರು ಆತನ ಸ್ವಭಾವದೊಂದಿಗೆ ಆಳವಾದ ಸಂಬಂಧವನ್ನು ಹೊಂದಿರುತ್ತದೆ. ಹಾಗಾದರೆ ಬನ್ನಿ ಯಾವ ಅಕ್ಷರದಿಂದ ಆರಂಭವಾಗುವ ವ್ಯಕ್ತಿಯ ಹೆಸರು ಆತನ ಸ್ವಭಾವದ ಕುರಿತು ಏನನ್ನು ಹೇಳುತ್ತದೆ ತಿಳಿದುಕೊಳ್ಳೋಣ
A ಅಕ್ಷರ ಹೊಂದಿರುವ ವ್ಯಕ್ತಿ
ಅಂಕ ಜೋತಿಷ್ಯ ತಜ್ಞರು ಹೇಳುವ ಪ್ರಕಾರ, ಯಾರ ಹೆಸರು ಇಂಗ್ಲಿಷ್‌ನ ಎ ಅಕ್ಷರದಿಂದ ಪ್ರಾರಂಭವಾಗುತ್ತದೆ. ಅಂತಹ ಜನರು ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ ಮತ್ತು ಅವರು ತಮ್ಮ ಸಂಗಾತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎನ್ನಲಾಗಿದೆ. ಎ ಅಕ್ಷರವನ್ನು ಹೊಂದಿರುವ ವ್ಯಕ್ತಿಯು ತನ್ನ ಹೆಂಡತಿಯ ಮೇಲೆ ಬಹಳಷ್ಟು ಪ್ರೀತಿಯನ್ನು ತೋರಿಸುತ್ತಾನೆ. ತಾಯಿ ಲಕ್ಷ್ಮಿಯ ಕೃಪೆ ಈ ವ್ಯಕ್ತಿಗಳ ಮೇಲೆ ಇರುವ ಕಾರಣ, ಇವರಿಗೆ ಜೀವನದಲ್ಲಿ ಹಣಕಾಸಿನ ಮುಗ್ಗಟ್ಟು ಎಂದಿಗೂ ಕೂಡ ಎದುರಾಗುವುದಿಲ್ಲ.
ಡಿ ಅಕ್ಷರ ಹೊಂದಿರುವ ವ್ಯಕ್ತಿ
ಅಂಕ ಜೋತಿಷ್ಯದ ಪ್ರಕಾರ, ಡಿ ಅಕ್ಷರ ಹೊಂದಿರುವ ವ್ಯಕ್ತಿಯ ಮನಸ್ಸು ತುಂಬಾ ಸ್ಪಷ್ಟವಾಗಿರುತ್ತದೆ. ಈ ಸೌಮ್ಯ ಸ್ವಭಾವದ ಜನರು ತಮ್ಮ ಸಂಗಾತಿಯನ್ನು ತುಂಬಾ ಗೌರವಿಸುತ್ತಾರೆ ಮತ್ತು ಅವರ ಭಾವನೆಗಳನ್ನು ಗೌರವಿಸುತ್ತಾರೆ. ಇವರು ತನ್ನ ಪತ್ನಿಯನ್ನು ಸಂತೋಷವಾಗಿರಿಸಲು ಎಲ್ಲವನ್ನೂ ಮಾಡುತ್ತಾರೆ.
ವಿ ಅಕ್ಷರದ ವ್ಯಕ್ತಿ
ಅಂಕ ಜೋತಿಷ್ಯ ತಜ್ಞರು V ಅಕ್ಷರದ ಜನರ ಬಗ್ಗೆ ಈ ಜನರು ಗಂಭೀರ ಸ್ವಭಾವದವರು ಮತ್ತು ಅವರು ತಮ್ಮ ಸಂಬಂಧದ ಬಗ್ಗೆಯೂ ಕೂಡ ತುಂಬಾ ಗಂಭೀರವಾಗಿರುತ್ತಾರೆ ಎಂದು ಹೇಳುತ್ತಾರೆ. ಇವರು ತನ್ನ ಮಡದಿಯ ಸಂತೋಷಕ್ಕಾಗಿ ಆಕೆಯ ಪ್ರತಿಯೊಂದು ಆಸೆಯನ್ನು ಪೂರೈಸಲು ಪ್ರಯತ್ನಿಸುತ್ತಾನೆ.
ಇದನ್ನೂ ಓದಿ-Ideal Woman: ಓರ್ವ ಆದರ್ಶ ಮಹಿಳೆಯಲ್ಲಿ ಯಾವ ಗುಣಗಳಿರಬೇಕು? ನಿಮಗೆ ಗೊತ್ತಿದೆಯಾ?
ಪಿ ಅಕ್ಷರವನ್ನು ಹೊಂದಿರುವ ವ್ಯಕ್ತಿ
ಪಿ ಅಕ್ಷರದಿಂದ ಹೆಸರನ್ನು ಹೊಂದಿದವರು ಕೈತುಂಬಾ ಹಣ ಗಳಿಸುತ್ತಾರೆ ಎಂದು ಹೇಳಲಾಗುತ್ತದೆ. ಇಂತವರಿಗೆ ಸಮಾಜದಲ್ಲಿ ಘನತೆ ಗೌರವವೂ ಪ್ರಾಪ್ತಿಯಾಗುತ್ತದೆ. ಕಷ್ಟಪಟ್ಟು ದುಡಿಯುವ ಸ್ವಭಾವದ ಈ ಜನರು ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. ಅವನು ತನ್ನ ಪತ್ನಿಯನ್ನು ಸಂತೋಷವಾಗಿರಿಸಲು ಎಲ್ಲವನ್ನು ಪ್ರಯತ್ನಿಸುತ್ತಾರೆ.
ಇದನ್ನೂ ಓದಿ-Eye Palmistry: ಕೇವಲ ಕಣ್ಣುಗಳನ್ನು ನೋಡಿ ಸಂಗಾತಿಯ ಸ್ವಭಾವ-ವ್ಯಕ್ತಿತ್ವ ಗುರುತಿಸುವುದು ಹೇಗೆ?
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.