Ideal Woman: ಓರ್ವ ಆದರ್ಶ ಮಹಿಳೆಯಲ್ಲಿ ಯಾವ ಗುಣಗಳಿರಬೇಕು? ನಿಮಗೆ ಗೊತ್ತಿದೆಯಾ?

Ideal Woman: ಮಹಿಳೆ ಇಲ್ಲದೆ ನೀವು ಬ್ರಹ್ಮಾಂಡದ ಸೃಷ್ಟಿಯನ್ನು ಕಲ್ಪಿಸಿಕೊಳ್ಳುವುದು ಅಸಾದ್ಯ. ಶ್ರೇಷ್ಠ ಮಹಿಳೆಯ ಗುಣಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ.  

Written by - Nitin Tabib | Last Updated : Aug 27, 2022, 09:07 PM IST
  • ಮಹಿಳೆ ಇಲ್ಲದೆ ಬ್ರಹ್ಮಾಂಡದ ಸೃಷ್ಟಿಯನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ.
  • ಹಿಂದೂ ಧರ್ಮದಲ್ಲಿ ಮಹಿಳೆಗೆ ದೇವತೆಯ ಸ್ಥಾನಮಾನ ನೀಡಲಾಗಿದೆ.
  • ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ಮಹಿಳೆಯರಿಗೆ ಮಹತ್ವದ ಪಾತ್ರವಿದೆ.
Ideal Woman: ಓರ್ವ ಆದರ್ಶ ಮಹಿಳೆಯಲ್ಲಿ ಯಾವ ಗುಣಗಳಿರಬೇಕು? ನಿಮಗೆ ಗೊತ್ತಿದೆಯಾ? title=
Ideal Woman

Ideal Woman: ಮಹಿಳೆ ಇಲ್ಲದೆ ಬ್ರಹ್ಮಾಂಡದ ಸೃಷ್ಟಿಯನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. ಹಿಂದೂ ಧರ್ಮದಲ್ಲಿ ಮಹಿಳೆಗೆ ದೇವತೆಯ ಸ್ಥಾನಮಾನ ನೀಡಲಾಗಿದೆ. ಸಮಾಜದ ಶ್ರೇಯೋಭಿವೃದ್ಧಿಯಲ್ಲಿ ಮಹಿಳೆಯರಿಗೆ ಮಹತ್ವದ ಪಾತ್ರವಿದೆ. ಶ್ರೇಷ್ಠ ಮಹಿಳೆಯ ಗುಣಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ನಾಲ್ಕು ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಆದರ್ಶ ಮಹಿಳೆಯರು ಮತ್ತು ತಾಯಿ ಲಕ್ಷ್ಮಿಯ ಸ್ವರೂಪ ಎಂದು ಕರೆಯಲಾಗುತ್ತದೆ ಎನ್ನಲಾಗಿದೆ. ಶಾಸ್ತ್ರದ ಪ್ರಕಾರ ಮಹಿಳೆಯ ಯಾವ ಗುಣಗಳು ಅವಳನ್ನು ಅದೃಷ್ಟವಂತರನ್ನಾಗಿ ಮಾಡುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

ಧಾರ್ಮಿಕ ಸ್ವಭಾವದ ಮಹಿಳೆ
ಧರ್ಮಗ್ರಂಥಗಳ ಪ್ರಕಾರ, ಧಾರ್ಮಿಕ ಮಹಿಳೆ ಮನೆಯಲ್ಲಿ ಸಮೃದ್ಧಿಯ ಅಂಶವಾಗುತ್ತಾಳೆ. ಧರ್ಮವನ್ನು ಅನುಸರಿಸುವ ಮಹಿಳೆಯರಿಗೆ ಒಳ್ಳೆಯದು ಮತ್ತು ಕೆಟ್ಟದ್ದನ್ನು ಹೇಗೆ ಪ್ರತ್ಯೇಕಿಸುವುದು ಎಂಬುದು ತಿಳಿದಿರುತ್ತದೆ. ಕುಟುಂಬಕ್ಕೆ ಮಾತ್ರವಲ್ಲ ಸಮಾಜಕ್ಕೂ ಸರಿಯಾದ ದಾರಿಯನ್ನು ಅವಳು ತೋರಿಸುತ್ತಾಳೆ. ಧರ್ಮದ ಮಾರ್ಗದಲ್ಲಿ ನಡೆಯುವ ಮಹಿಳೆ ತನ್ನ ಕುಟುಂಬವನ್ನು ತಪ್ಪು ಕೆಲಸ ಮಾಡುವುದರಿಂದ ತಡೆಯುತ್ತಾಳೆ ಎನ್ನಲಾಗಿದೆ.

ಸಂಪತ್ತು ಕ್ರೋಢೀಕರಣ
ಸಂಪತ್ತು ಕ್ರೋಢೀಕರಣದ ಗುಣವನ್ನು ಹೊಂದಿರುವ ಮಹಿಳೆಯರು, ತನ್ನ ಕುಟುಂಬವನ್ನು ಎಂದಿಗೂ ಬಿಕ್ಕಟ್ಟು ಎದುರಿಸುವಂತೆ ಮಾಡುವುದಿಲ್ಲ. ಧರ್ಮಗ್ರಂಥಗಳ ಪ್ರಕಾರ, ಹಣವನ್ನು ಹೇಗೆ ಉಳಿಸಬೇಕೆಂದು ಮಹಿಳೆ ತಿಳಿದಿರಬೇಕು. ಪ್ರತಿಕೂಲ ಸಂದರ್ಭಗಳಲ್ಲಿ, ಕಷ್ಟದ ಸಮಯದಿಂದ ವ್ಯಕ್ತಿಯನ್ನು ಹೊರತರುವಲ್ಲಿ ಈ ಹಣವು ಪ್ರಮುಖ ಪಾತ್ರ ವಹಿಸುತ್ತದೆ. ಒಳ್ಳೆಯ ಮಹಿಳೆಗೆ ಹಣವನ್ನು ಹೇಗೆ ಚೆನ್ನಾಗಿ ನಿರ್ವಹಿಸಬೇಕೆಂದು ತಿಳಿದಿರುತ್ತದೆ ಎಂದು ನಂಬಲಾಗಿದೆ. ಅವರು ದುಂದುವೆಚ್ಚ ಮಾಡುವುದಿಲ್ಲ. ಇಂತಹ ಮಹಿಳೆಯರು ಪ್ರಸ್ತುತ ಹಾಗೂ ಭವಿಷ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ಬಳಸುತ್ತಾರೆ.

ಮಧುರ ಧ್ವನಿಯಲ್ಲಿ ಮಾತನಾಡುವವರು
ಮಾತು ಸಂಬಂಧಗಳನ್ನು ಸೃಷ್ಟಿಸುತ್ತದೆ ಮತ್ತು ನಾಶಪಡಿಸುತ್ತದೆ ಎಂದು ಹೇಳಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಮಧುರವಾದ ಧ್ವನಿಯಲ್ಲಿ ಮಾತನಾಡುವ ಮಹಿಳೆಯನ್ನು ಕುಟುಂಬಕ್ಕೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಮೃದುವಾಗಿ ಮಾತನಾಡುವ ಮಹಿಳೆ ಯಾವಾಗಲೂ ಎಲ್ಲರನ್ನೂ ಒಟ್ಟಿಗೆ ಜೋಡಿಸುತ್ತಾಳೆ. ಇಂತಹ ಮಹಿಳೆಯರು ಗೌರವಕ್ಕೆ ಅರ್ಹರಾಗುತ್ತಾರೆ ಮತ್ತು ಯಾವಾಗಲೂ ತಾಯಿಯ ಮತ್ತು ಅತ್ತೆಯ ಪ್ರತಿಷ್ಠೆಯನ್ನು ಹೆಚ್ಚಿಸುತ್ತಾರೆ.

ಇದನ್ನೂ ಓದಿ-Chanakya Niti: ಜೀವನದಲ್ಲಿ ಯಶಸ್ಸಿಗಾಗಿ ನಿತ್ಯ ಬೆಳಗ್ಗೆ 4 ಕೆಲಸಗಳನ್ನು ತಪ್ಪದೆ ಮಾಡಿ

ವಿದ್ಯಾವಂತ ಮತ್ತು ಧೈರ್ಯಶಾಲಿ ಮಹಿಳೆ
ವಿದ್ಯಾವಂತ ಮಹಿಳೆ ತನ್ನನ್ನು ಮಾತ್ರವಲ್ಲದೆ ಇಡೀ ಸಮಾಜವನ್ನು ಸುಧಾರಿಸುತ್ತಾಳೆ. ಇಂತಹ ಮಹಿಳೆಯರು ಇಡೀ ಕುಟುಂಬಕ್ಕೆ ಸ್ಫೂರ್ತಿಯಾಗುತ್ತಾರೆ. ಶಿಕ್ಷಣದಿಂದ ಧೈರ್ಯ ಹುಟ್ಟುತ್ತದೆ. ಧೈರ್ಯಶಾಲಿ ಮಹಿಳೆ ತೊಂದರೆಯ ಸಮಯದಲ್ಲಿ ಭಯಪಡುವುದಿಲ್ಲ. ಪ್ರತಿಕೂಲತೆಯನ್ನು ಎದುರಿಸಲು ಹೋರಾಡುತ್ತಾರೆ. ಆದರ್ಶ ಮಹಿಳೆ ಗುಣಮಟ್ಟದ ಶಿಕ್ಷಣದ ಮತ್ತು ಧೈರ್ಯವನ್ನು ಹೊಂದಿರಬೇಕು.

ಇದನ್ನೂ ಓದಿ-Eye Palmistry: ಕೇವಲ ಕಣ್ಣುಗಳನ್ನು ನೋಡಿ ಸಂಗಾತಿಯ ಸ್ವಭಾವ-ವ್ಯಕ್ತಿತ್ವ ಗುರುತಿಸುವುದು ಹೇಗೆ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News