ಯಾವ ಮಹಿಳೆಯ ದೇಹದಲ್ಲಿ ಈ ಗುರುತು ಇರುತ್ತದೆಯೋ ಅವರು ಅದೃಷ್ಟವನ್ನೇ ಹೊತ್ತು ತರುತ್ತಾರೆಯಂತೆ ..!
ಅದೃಷ್ಟದಿಂದ ಹುಟ್ಟುವುದು ಅದೃಷ್ಟದ ವಿಷಯ. ಎಲ್ಲರೂ ಹುಟ್ಟುತ್ತಲೇ ಅದೃಷ್ಟವನ್ನು ಹೊತ್ತು ತರುವುದಿಲ್ಲ. ಕೆಲವು ಮಹಿಳೆಯರು ಬಹಳ ಅದೃಷ್ಟವಂತರಾಗಿರುತ್ತಾರೆ. ಈ ಅದೃಷ್ಟವಂತರಾಗಿರುತ್ತಾರೆ. ಇವರು ತಮ್ಮ ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ.
ಬೆಂಗಳೂರು : ಅದೃಷ್ಟವಂತ, ವಿದ್ಯಾವಂತ, ಸುಸಂಸ್ಕೃತ ಮಹಿಳೆ ತನ್ನ ಅದೃಷ್ಟವನ್ನು ತನ್ನೊಂದಿಗೆ ಮಾತ್ರವಲ್ಲದೆ ಅವಳೊಂದಿಗೆ ಜೋಡಿಸಲಾದ ಕುಟುಂಬಗಳಿಗೂ ವರ್ಗಾಯಿಸಬಹುದು. ಇಂಥಹ ಮಹಿಳೆ ತನ್ನ ತವರು ಮನೆಯಲ್ಲಿರಲಿ ಅಥವಾ ಪತಿಯ ಮನೆಯಲ್ಲಿರಲಿ ಎಲ್ಲೆಡೆ ಪ್ರೀತಿ ಮತ್ತು ಗೌರವವನ್ನು ಪಡೆಯುತ್ತಾಳೆ. ಈ ಮಹಿಳೆಯರು ಹುಟ್ಟಿನಿಂದಲೇ ಅದೃಷ್ಟವಂತರು ಎಂದು ಹೇಳಬಹುದು. ಹಾಗಿದ್ದರೆ ಅದೃಷ್ಟವಂತ ಹುಡುಗಿಯರು ಅಥವಾ ಮಹಿಳೆಯರನ್ನು ಗುರುತಿಸುವುದು ಹೇಗೆ ? ಇಂತಹ ಅದೃಷ್ಟವಂತ ಹುಡುಗಿಯರನ್ನು ಗುರುತಿಸಲು ಸಾಮುದ್ರಿಕ ಶಾಸ್ತ್ರದಲ್ಲಿ ಸುಲಭ ಮಾರ್ಗವನ್ನು ಹೇಳಲಾಗಿದೆ.
ಅದೃಷ್ಟವಂತ ಮಹಿಳೆ ಎನ್ನುವುದನ್ನು ತೋರಿಸುತ್ತದೆ ಈ ಗುರುತು :
ಪಾದ : ಸಾಮುದ್ರಿಕ ಶಾಸ್ತ್ರದ ಪ್ರಕಾರ, ಅದೃಷ್ಟವಂತ ಹುಡುಗಿಯರು ಅಥವಾ ಮಹಿಳೆಯರನ್ನು ಅವರ ಪಾದ ಮೂಲಕ ಗುರುತಿಸಬಹುದು. ಯಾರ ಪಾದಗಳು ತುಂಬಾ ಮೃದುವಾಗಿ, ಕೆಂಪಾಗಿರುತ್ತದೆಯೋ ಅವರು ಬಹಳ ಅದೃಷ್ಟವಂತರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಅಂತಹ ಮಹಿಳೆಯರು ವಾಸಿಸುವ ಮನೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆಯಂತೆ. ಅಲ್ಲದೆ ಯಾವ ಮಹಿಳೆಯ ಪಾದದ ಅಡಿಯಲ್ಲಿ ಶಂಖ, ಕಮಲ ಅಥವಾ ಚಕ್ರದ ಆಕಾರ ಇರುತ್ತದೆಯೋ ಅವರು ಉನ್ನತ ಸ್ಥಾನವನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ. ಈಕೆ ಪತಿಯ ಪಾಲಿಗೂ ಅದೃಷ್ಟದಾತೆ ಎನ್ನುತ್ತಾರೆ.
ಇದನ್ನೂ ಓದಿ : ಯಾವುದೇ ಕೆಲಸಕ್ಕೆ ಹೊರಟಾಗ ಇವುಗಳು ಕಣ್ಣಿಗೆ ಬಿದ್ದಲ್ಲಿ ಕೆಲಸ ಕೈಗೂಡುತ್ತದೆಯಂತೆ
ಮೂಗಿನ ಮೇಲೆ ಮಚ್ಚೆ : ಮಹಿಳೆಯ ಮೂಗಿನ ಸುತ್ತ ಮಚ್ಚೆ ಇದ್ದರೆ, ಅದು ಅದೃಷ್ಟದ ಸಂಕೇತವಾಗಿರುತ್ತದೆ. ಅಂತಹ ಮಹಿಳೆ ತುಂಬಾ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾಳೆ.
ಹೊಕ್ಕುಳ ಬಳಿಯ ಮಚ್ಚೆ: ಹೊಕ್ಕುಳದ ಸುತ್ತ ಮಚ್ಚೆ ಇರುವ ಮಹಿಳೆ ತನ್ನ ಕುಟುಂಬದ ಅದೃಷ್ಟವನ್ನು ಬೆಳಗುತ್ತಾಳೆ. ಅಂತಹ ಮಹಿಳೆಯರ ಕುಟುಂಬಗಳು ಗೌರವಾನ್ವಿತ ಜೀವನವನ್ನು ನಡೆಸುತ್ತವೆ.
ಜಿಂಕೆಗಳಂತಹ ಕಣ್ಣುಗಳು : ಜಿಂಕೆಗಳಂತೆ ಸುಂದರವಾದ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಕುಟುಂಬಕ್ಕೆ ಬಹಳ ಅದೃಷ್ಟವನ್ನು ಹೊತ್ತು ತರುತ್ತಾರೆಯಂತೆ. ಈ ಕುಟುಂಬದ ಜನರು ಯಾವಾಗಲೂ ಪ್ರೀತಿ ಮತ್ತು ಸಂತೋಷದಿಂದ ಬದುಕುತ್ತಾರೆ. ಜಿಂಕೆಗಳಂತಹ ಕಣ್ಣುಗಳ ಜೊತೆಗೆ ಕಣ್ಣಿನ ಮೂಲೆಯು ಕೆಂಪಾಗಿದ್ದರೆ, ಕುಟುಂಬವು ಸಾಕಷ್ಟು ಸಂಪತ್ತು ಮತ್ತು ಆಸ್ತಿಯನ್ನು ಹೊಂದಿರುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: ಇನ್ನು ಒಂಭತ್ತು ದಿನಗಳಲ್ಲಿ ಈ ರಾಶಿಯವರ ಎಲ್ಲಾ ಸಮಸ್ಯೆಗಳಿಗೂ ಸಿಗಲಿದೆ ಮುಕ್ತಿ, ಜೀವನದಲ್ಲಿ ಎಲ್ಲವೂ ಸುಖಮಯ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ