Broom Keeping Tips: ಪೊರಕೆಗೆ ಸಂಬಂಧಿಸಿದ ಈ ನಿಯಮ ಪಾಲಿಸದೆ ಹೋದರೆ, ಕಷ್ಟಪಟ್ಟು ಸಂಪಾದಿಸಿದ ಹಣ ನಿಮ್ಮ ಬಳಿ ಉಳಿಯುವುದಿಲ್ಲ

Vastu Tips For Broom: ವಾಸ್ತುಶಾಸ್ತ್ರದಲ್ಲಿ ಪೊರಕೆಯನ್ನು ತಾಯಿ ಲಕ್ಷ್ಮಿಯ ರೂಪ ಎಂದು ಹೇಳಲಾಗಿದೆ. ಹೀಗಾಗಿ ಮನೆಯಲ್ಲಿ ಪೊರಕೆ ಇಡುವುದಕ್ಕೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಹೇಳಲಾಗಿದೆ. ಈ ನಿಯಮಗಳು ಪಾಲಿಸದೆ ಹೋದರೆ ವ್ಯಕ್ತಿಯ ಮನೆಯಲ್ಲಿ ದಾರಿದ್ರ್ಯ ನೆಲೆಸಲಿದೆ ಎನ್ನಲಾಗುತ್ತದೆ.   

Written by - Nitin Tabib | Last Updated : Jun 8, 2022, 06:39 PM IST
  • ವಾಸ್ತುಶಾಸ್ತ್ರದಲ್ಲಿ ಪೊರಕೆಯನ್ನು ತಾಯಿ ಲಕ್ಷ್ಮಿಯ ರೂಪ ಎಂದು ಹೇಳಲಾಗಿದೆ.
  • ಹೀಗಾಗಿ ಮನೆಯಲ್ಲಿ ಪೊರಕೆ ಇಡುವುದಕ್ಕೆ ಸಂಬಂಧಿಸಿದಂತೆ ಕೆಲ ನಿಯಮಗಳನ್ನು ಹೇಳಲಾಗಿದೆ.
  • ಈ ನಿಯಮಗಳು ಪಾಲಿಸದೆ ಹೋದರೆ ವ್ಯಕ್ತಿಯ ಮನೆಯಲ್ಲಿ ದಾರಿದ್ರ್ಯ ನೆಲೆಸಲಿದೆ ಎನ್ನಲಾಗುತ್ತದೆ.
Broom Keeping Tips: ಪೊರಕೆಗೆ ಸಂಬಂಧಿಸಿದ ಈ ನಿಯಮ ಪಾಲಿಸದೆ ಹೋದರೆ, ಕಷ್ಟಪಟ್ಟು ಸಂಪಾದಿಸಿದ ಹಣ ನಿಮ್ಮ ಬಳಿ ಉಳಿಯುವುದಿಲ್ಲ title=
Vastu Broom Keeping Tips

Vastu Tips For Broom: ಮನೆಯಲ್ಲಿಟ್ಟ ಪ್ರತಿಯೊಂದು ವಸ್ತುಗಳು ತನ್ನದೇ ಆದ ಪ್ರಭಾವ ಬೀರುತ್ತದೆ. ಈ ಪ್ರಭಾವಗಳು ಸಕಾರಾತ್ಮಕ ಪ್ರಭಾವಗಳಾಗಿರಬಹುದು ಅಥವಾ ನಕಾರಾತ್ಮಕ. ಇನ್ನೊಂದೆಡೆ ತನ್ನ ಮನೆಯಲ್ಲಿ ತಾಯಿ ಲಕ್ಷ್ಮಿಯ ವಾಸವಿರಬೇಕು ಎಂದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಅಷ್ಟೇ ಅಲ್ಲ ಮನೆಯಲ್ಲಿ ಹಣಕಾಸಿನ ಮುಗ್ಗಟ್ಟು ಎಂದಿಗೂ ಕೂಡ ಎದುರಾಗಬಾರದು ಎಂದು ಜನ ಬಯಸುತ್ತಾರೆ. ಆದರೆ, ಹಲವು ಬಾರಿ ಎಲ್ಲಾ ಸಂಗತಿಗಳ ಕಾಳಜಿ ವಹಿಸಿದ ಬಳಿಕವೂ ಮನುಷ್ಯನಿಗೆ ಬಯಸಿತ್ತು ಸಿಗುವುದೇ ಇಲ್ಲ. ಇದಕ್ಕೆ ವಾಸ್ತುದೋಷ ಕೂಡ ಕಾರಣವಾಗಬಹುದು.

ವಾಸ್ತು ಶಾಸ್ತ್ರದಲ್ಲಿ ಪೋರಕೆಗೂ ಕೂಡ ವಿಶೇಷ ಮಹತ್ವವಿದೆ. ಮನೆಯಲ್ಲಿನ ಪೊರಕೆಗೆ ಸಂಬಂಧಿಸಿದಂತೆ ಕೆಲ ವಿಶೇಷ ನಿಯಮಗಳನ್ನು ಹೇಳಲಾಗಿದೆ. ಒಂದು ವೇಳೆ ವ್ಯಕ್ತಿ ಪೊರಕೆಗೆ ಸಂಬಂಧಿಸಿದ ಈ ನಿಯಮಗಳನ್ನು ಪಾಲಿಸದೆ ಹೋದಲ್ಲಿ, ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ. ಜೊತೆಗೆ ವ್ಯಕ್ತಿಗೆ ದಾರಿದ್ರ್ಯ ಎದುರಿಸಬೇಕಾದ ಕಾಲ ಬರುತ್ತದೆ. ಹಾಗಾದರೆ ಬನ್ನಿ ವಾಸ್ತು ಶಾಸ್ತ್ರದ ಆ ನಿಯಮಗಳು ಯಾವುವು ತಿಳಿದುಕೊಳ್ಳೋಣ. 

>> ವಾಸ್ತು ಪ್ರಕಾರ ಪೊರಕೆಯನ್ನು ಯಾವತ್ತೂ ಒರಲಾಗಿ ಇಡಬಾರದು ಎನ್ನಲಾಗಿದೆ. ಏಕೆಂದರೆ, ನಿಲ್ಲಿಸಲಾದ  ಪೊರಕೆಯು ದುರಾದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಆದ್ದರಿಂದ, ಯಾವಾಗಲೂ ಪೊರಕೆಯನ್ನು ನೆಲದ ಮೇಲೆ ಮಲಗಿಸಿರಬೇಕು.

>> ಅಡುಗೆ ಮನೆಯಲ್ಲಿ ಪೊರಕೆ ಇಡುವುದನ್ನು ತಪ್ಪಿಸಿ. ಏಕೆಂದರೆ, ಅದು ಮನೆಯಲ್ಲಿ ಆಹಾರದ ಕೊರತೆಯನ್ನುಂಟು ಮಾಡುತ್ತದೆ. ಇದಲ್ಲದೆ ಮನೆಯ ಸದಸ್ಯರ ಆರೋಗ್ಯದ ಮೇಲೂ ಅದು ಕೆಟ್ಟ ಪರಿಣಾಮ ಬೀರುತ್ತದೆ.

>> ಮನೆಯಲ್ಲಿರುವ ಪೊರಕೆಯನ್ನು ಹಣದಂತೆ ಬಚ್ಚಿಡಬೇಕು ಎನ್ನುತ್ತಾರೆ ವಾಸ್ತು ತಜ್ಞರು. ಅದನ್ನು ಬಹಿರಂಗವಾಗಿ ಇಡುವುದು ಇಡುವುದು ಅಶುಭ ತರುತ್ತದೆ, ಅದು ಜನರ ಗಮನವನ್ನೂ ಕೂಡ ತನ್ನತ್ತ ಸೆಳೆಯುತ್ತದೆ. ಹೀಗಾಗಿ ಪೊರಕೆಯನ್ನು ಯಾವಾಗಲು ಇತರರು ಗಮನಿಸದ ಸ್ಥಳದಲ್ಲಿ ಇರಿಸಿ ಎಂದು ಸಲಹೆ ನೀಡಲಾಗುತ್ತದೆ. ತೆರೆದ ಸ್ಥಳದಲ್ಲಿ ಇಡುವ ಪೊರಕೆ ಧನಾತ್ಮಕ ಶಕ್ತಿಯನ್ನು ಮನೆಯಿಂದ ಹೊರಹಾಕುತ್ತದೆ ಎಂದು ಹೇಳಲಾಗುತ್ತದೆ.

>> ಪೊರಕೆ ಹಾಳಾಗಿದ್ದರೆ ಅದನ್ನು ತಕ್ಷಣವೇ ಬದಲಾಯಿಸಬೇಕು. ಏಕೆಂದರೆ ಹಾಳಾದ ಪೊರಕೆಯಿಂದ ಮನೆ ಸ್ವಚ್ಛಗೊಳಿಸುವುದರಿಂದ ಹಲವಾರು ತೊಂದರೆಗಳು ಎದುರಾಗುತ್ತವೆ ಎಂದು ಹೇಳಲಾಗುತ್ತದೆ. ಇದರಿಂದ ವ್ಯಕ್ತಿ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ. ಹಳೆ ಪೊರಕೆ ತೆಗೆದು ಶನಿವಾರದಂದು ಹೊಸ ಪೊರಕೆಯನ್ನು ಮನೆಗೆ ತರಬೇಕು.
 
>> ವಾಸ್ತು ತಜ್ಞರ ಪ್ರಕಾರ ಪೊರಕೆಯನ್ನು ಯಾವಾಗಲೂ ಮನೆಯ ದಕ್ಷಿಣ ದಿಕ್ಕಿನಲ್ಲಿ ಎನ್ನಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಯಾವತ್ತೂ ಬಡತನ ಬರುವುದಿಲ್ಲ ಮತ್ತು ಮನೆಯಲ್ಲಿ ಸುಖ ಸಂತೋಷ ನೆಲೆಸುತ್ತವೆ ಎನ್ನಲಾಗುತ್ತದೆ.

>> ಪೊರಕೆಯನ್ನು ತಾಯಿ ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಂಜೆ ಹೊತ್ತು ಮನೆಯಲ್ಲಿ ಕಸ ಗುಡಿಸುವುದರಿಂದ ತಾಯಿ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ. ಸೂರ್ಯಾಸ್ತದ ಬಳಿಕ ಒಂದು ವೇಳೆ ನಿಮಗೆ ಕಸಗೂಡಿಸುವ ಪ್ರಸಂಗ ಎದುರಾದರೂ ಕೂಡ ನಂತರ ಎಂದಿಗೂ ಮನೆಯಿಂದ ಮಣ್ಣು ಮತ್ತು ಕಸವನ್ನು ಹೊರಹಾಕಬೇಡಿ. ಯಾರಾದರೂ ಹೀಗೆ ಮಾಡಿದರೆ ತಾಯಿ ಲಕ್ಷ್ಮಿ ದೂರವಾಗುತ್ತಾಳೆ ಎನ್ನಲಾಗುತ್ತದೆ.

ಇದನ್ನೂ ಓದಿ-Shri Ganeshaನ ಕೃಪೆಯಿಂದ ಎಲ್ಲಾ ಕೆಲಸಗಳಲ್ಲಿ ಕಾರ್ಯಸಿದ್ಧಿ ಪ್ರಾಪ್ತಿ, ಕೇವಲ ಈ ಸಣ್ಣ ವಸ್ತುವನ್ನು ಮನೆಗೆ ತನ್ನಿ

>> ಪೊರಕೆಯನ್ನು ಯಾವಾಗಲು ಈಶಾನ್ಯ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣ ಉಳಿಯುವುದಿಲ್ಲ. ಆದ್ದರಿಂದ ಪೊರಕೆಯನ್ನು ಇಡಲು ಪಶ್ಚಿಮ ಅಥವಾ ದಕ್ಷಿಣ ದಿಕ್ಕು ಉತ್ತಮ ಎನ್ನಲಾಗುತ್ತದೆ.

ಇದನ್ನೂ ಓದಿ-ಇನ್ನು ಹತ್ತು ದಿನಗಳಲ್ಲಿ ಈ ಎರಡು ರಾಶಿಯವರಿಗೆ ಭಾರೀ ಧನ ಲಾಭ ಕರುಣಿಸಲಿದ್ದಾನೆ ಶುಕ್ರ

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News