ವರ್ಷದ ಮೊದಲ ಚಂದ್ರಗ್ರಹಣ ಯಾವಾಗ-ಎಲ್ಲಿ ಸಂಭವಿಸಲಿದೆ:  ಈ ವರ್ಷ 2022ರಲ್ಲಿ ಒಟ್ಟು ನಾಲ್ಕು ಗ್ರಹಣಗಳು ಸಂಭವಿಸಲಿವೆ. ಅವುಗಳಲ್ಲಿ ಎರಡು ಸೂರ್ಯಗ್ರಹಣ ಮತ್ತು ಎರಡು ಚಂದ್ರಗ್ರಹಣಗಳು. ಈ ವರ್ಷದ ಮೊದಲ ಸೂರ್ಯಗ್ರಹಣ ಎಪ್ರಿಲ್ 30ರಂದು ಶನಿಚಾರಿ ಅಮಾವಾಸ್ಯೆಯ ದಿನ ಸಂಭವಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿದೆ. ಇದಾದ ಹದಿನೈದು ದಿನಗಳಲ್ಲಿ ವರ್ಷದ ಮೊದಲ ಚಂದ್ರಗ್ರಹಣವು ಮೇ 16ರಂದು ಸಂಭವಿಸಲಿದೆ. ಈ ಗ್ರಹಣವು ಯಾವಾಗ ಸಂಭವಿಸಲಿದೆ ಹಾಗೂ ಎಲ್ಲಿ ಗೋಚರಿಸಲಿದೆ ಎಂದು ತಿಳಿಯೋಣ.


COMMERCIAL BREAK
SCROLL TO CONTINUE READING

ಇದೇ 16 ಮೇ 2022 ರಂದು ಸಂಭವಿಸಲಿರುವ ವರ್ಷದ ಮೊದಲ ಚಂದ್ರಗಹಣವು ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ. ಇದು ಬೆಳಿಗ್ಗೆ  07:58 ಕ್ಕೆ ಆರಂಭವಾಗಲಿದ್ದು ಸುಮಾರು 12 ಗಂಟೆಯವರೆಗೆ ಇರಲಿದೆ. ಆದರೆ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಎನ್ನಲಾಗಿದೆ. ಹಾಗಾಗಿಯೇ ಇದರ ಸೂತಕ ಅವಧಿಯು ಮಾನ್ಯವಾಗಿರುವುದಿಲ್ಲ. 


ಇದನ್ನೂ ಓದಿ- Surya Grahan 2022 : ಈ 3 ರಾಶಿಯವರು ಎಚ್ಚರದಿಂದಿರಿ! ಇವರ ಜೀವನಕ್ಕೆ 'ಸೂರ್ಯ ಗ್ರಹಣ' ಪ್ರವೇಶ


ವರ್ಷದ ಮೊದಲ ಚಂದ್ರ ಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?
16 ಮೇ 2022 ರಂದು ಸಂಭವಿಸಲಿರುವ ವರ್ಷದ ಮೊದಲ ಚಂದ್ರಗಹಣವು ವೈಶಾಖ ಮಾಸದ ಹುಣ್ಣಿಮೆಯಂದು ಸಂಭವಿಸುತ್ತಿದೆ.  ಇದು ದಕ್ಷಿಣ/ಪಶ್ಚಿಮ ಯುರೋಪ್, ದಕ್ಷಿಣ/ಪಶ್ಚಿಮ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾ, ಹಿಂದೂ ಮಹಾಸಾಗರದಲ್ಲಿ ಗೋಚರಿಸಲಿದೆ.  ಅದೇ ಸಮಯದಲ್ಲಿ, ಮುಂದಿನ ಚಂದ್ರಗ್ರಹಣವು 8 ನವೆಂಬರ್ 2022 ರಂದು ಸಂಭವಿಸುತ್ತದೆ. ಈ ಗ್ರಹಣ ಭಾರತದಲ್ಲಿ ಗೋಚರಿಸಲಿದೆ. 


ಗ್ರಹಣದ ವೇಳೆ ನೆನಪಿನಲ್ಲಿಡಬೇಕಾದ ವಿಷಯಗಳು:
ಹಿಂದೂ ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ ಗ್ರಹಣ ಯಾವುದೇ ಆಗಿರಲಿ ಸೂರ್ಯಗ್ರಹಣವಾಗಲಿ ಅಥವಾ ಚಂದ್ರಗ್ರಹಣವಾಗಲಿ ಅದನ್ನು ಮಂಗಳಕರ ಎಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿಯೇ ಈ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷಿದ್ಧ. ಈ ಸಮಯದಲ್ಲಿ ಕೆಲವು ನಿಯಮಗಳನ್ನು ಅನುಸರಿಸಲು ಸಲಹೆ ನೀಡಲಾಗುತ್ತದೆ. ಈ ನಿಯಮಗಳನ್ನು ಅನುಸರಿಸುವುದರಿಂದ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಬಹುದು ಎನ್ನಲಾಗುತ್ತದೆ.


ಇದನ್ನೂ ಓದಿ- Shani Gochar: ಇನ್ನೊಂದು ವಾರದಲ್ಲಿ ಈ ಮೂರು ರಾಶಿಯವರ ಅದೃಷ್ಟ ಬೆಳಗಿಸಲಿದ್ದಾನೆ ಶನಿ


ಗ್ರಹಣದ ಸಮಯದಲ್ಲಿ ಅನುಸರಿಸಬೇಕಾದ ನಿಯಮಗಳಿವು:
>> ಗ್ರಹಣದ ಸಮಯದಲ್ಲಿ ಏನನ್ನೂ ತಿನ್ನಬಾರದು ಮತ್ತು ಕುಡಿಯಬಾರದು. ಆದಾಗ್ಯೂ, ಆರೋಗ್ಯ ಸಮಸ್ಯೆ ಇರುವವರಿಗೆ ಇದರಿಂದ ವಿನಾಯಿತಿ ಇದೆ.
>> ಹಾಗೆಯೇ ಆಹಾರ ಪದಾರ್ಥಗಳಲ್ಲಿ ತುಳಸಿ ಎಲೆಗಳನ್ನು ಹಾಕಬೇಕು. ಈ ರೀತಿ ಮಾಡುವುದರಿಂದ ಗ್ರಹಣವು ಅವುಗಳ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ. 
>> ಗ್ರಹಣದ ಸಮಯದಲ್ಲಿ, ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ, ಇದು ವ್ಯಕ್ತಿಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಅವಧಿಯಲ್ಲಿ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಡಿ. ವಾದಗಳನ್ನು ತಪ್ಪಿಸಿ. ಸಾಧ್ಯವಾದರೆ, ಪ್ರಯಾಣಿಸಬಾರದು.
>> ಗ್ರಹಣ ಕಾಲದಲ್ಲಿ ಆದಷ್ಟು ದೇವರ ಪೂಜೆ ಮಾಡುವುದು ಒಳ್ಳೆಯದು.
>> ಗ್ರಹಣದ ಸಮಯದಲ್ಲಿ ದೇವಸ್ಥಾನದ ಬಾಗಿಲು ತೆರೆಯಬಾರದು.
>> ಗ್ರಹಣದ ನಂತರ ಸ್ನಾನ ಮಾಡಿ ದಾನ ಧರ್ಮ ಮಾಡಬೇಕು. 
>> ಅಗತ್ಯವಿರುವವರಿಗೆ ದಾನ ಮಾಡುವುದರಿಂದ ಗ್ರಹಣದ ಅಶುಭ ಫಲಗಳು ಕಡಿಮೆಯಾಗುತ್ತವೆ. 
>> ಗ್ರಹಣದ ಸಮಯದಲ್ಲಿ ಗರ್ಭಿಣಿಯರು ಬಹಳ ಜಾಗರೂಕರಾಗಿರಬೇಕು. ಅವರು ಮನೆಯಿಂದ ಹೊರಗಡೆ ಬರದಿರುವುದು ಸೂಕ್ತ ಎಂದು ಹೇಳಲಾಗುತ್ತದೆ.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.