Hanuman Janmotsav 2022:ಹನುಮ ಜನ್ಮೊತ್ಸವದ ದಿನ ನಿರ್ಮಾಣಗೊಳ್ಳುತ್ತಿದೆ ಈ ಶುಭ ಯೋಗ. ಮುಹೂರ್ತ-ಪೂಜಾ ವಿಧಿ ವಿವರ ಇಲ್ಲಿದೆ

Hanuman Janmotsav 2022 Shubh Muhurat Puja Vidhi: ಧಾರ್ಮಿಕ ನಂಬಿಕೆಗಳ ಪ್ರಕಾರ, ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಶ್ರೀ ಆಂಜನೇಯ ಜನಿಸಿದ ಎನ್ನಲಾಗುತ್ತದೆ. ಈ ವರ್ಷ ಹನುಮ ಜನ್ಮೋತ್ಸವವನ್ನು ಏಪ್ರಿಲ್ 16 ರಂದು ಆಚರಿಸಲಾಗುತ್ತದೆ.

Written by - Nitin Tabib | Last Updated : Apr 15, 2022, 07:06 PM IST
  • ಈ ಬಾರಿಯ ಹನುಮ ಜನ್ಮೊತ್ಸವದ ದಿನ ಈ ಶುಭ ಕಾಕತಾಳೀಯ ನಿರ್ಮಾಣಗೊಳ್ಳುತ್ತಿದೆ
  • ಶುಭ ಕಾಕತಾಳೀಯದ ಜೊತೆಗೆ ರವಿಯೋಗ ಕೂಡ ನಿರ್ಮಾಣ
  • ಧನ ಪ್ರಾಪ್ತಿಗೆ ಯಾವ ಉಪಾಯಗಳನ್ನು ಅನುಸರಿಸಬೇಕು?
Hanuman Janmotsav 2022:ಹನುಮ ಜನ್ಮೊತ್ಸವದ ದಿನ ನಿರ್ಮಾಣಗೊಳ್ಳುತ್ತಿದೆ ಈ ಶುಭ ಯೋಗ. ಮುಹೂರ್ತ-ಪೂಜಾ ವಿಧಿ ವಿವರ ಇಲ್ಲಿದೆ title=
Hanuman Janmotsava 2022

ನವದೆಹಲಿ: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಹನುಮಂತ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಜನಿಸಿದ ಎನ್ನಲಾಗುತ್ತದೆ. ಚಿತ್ರಾ ನಕ್ಷತ್ರ ಮತ್ತು ಮಂಗಳವಾರ ಶುಭ ಕಾಕತಾಳೀಯವೂ ಅಂದು ರೂಪಗೊಂಡಿತ್ತು ಎಂದು ಹೇಳಲಾಗುತ್ತದೆ. ಈ ವರ್ಷ, ಹನುಮ  ಜನ್ಮೋತ್ಸವದ ಶುಭ ಕಾಕತಾಳೀಯ ಏಪ್ರಿಲ್ 16 ರ ಶನಿವಾರ ಆಚರಿಸಲಾಗುತ್ತಿದೆ. ಈ ದಿನದಂದು ಶ್ರೀಆಂಜನೇಯನನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಆಂಜನೇಯನ ಜನ್ಮದಿನದಂದು ಹನುಮನನ್ನು ಹೇಗೆ ಪೂಜಿಸಬೇಕು ಮತ್ತು ಅದಕ್ಕೆ ಯಾವ ಶುಭ ಮುಹೂರ್ತ ಯಾವುದು ತಿಳಿದುಕೊಳ್ಳೋಣ ಬನ್ನಿ,

ಹನುಮಾನ್ ಜನ್ಮೋತ್ಸವ ಶುಭ ಮುಹೂರ್ತ 
ಹನುಮ ಜನ್ಮೋತ್ಸವವನ್ನು (Hanuman Janmotsava 2022) ಚೈತ್ರ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತಿದೆ. ಪಂಚಾಂಗದ ಪ್ರಕಾರ, ಈ ಬಾರಿ ಚೈತ್ರ ಮಾಸದ ಹುಣ್ಣಿಮೆಯ ದಿನಾಂಕವು ಏಪ್ರಿಲ್ 16 ತಡರಾತ್ರಿ 2.25 ರಿಂದ ಆರಂಭವಾಗುತ್ತಿದೆ. ಇದೇ ವೇಳೆ, ಹುಣ್ಣಿಮೆಯು ಏಪ್ರಿಲ್ 17 ರಂದು ಮಧ್ಯಾಹ್ನ 12.24 ಕ್ಕೆ ಮುಕ್ತಾಯಗೊಳ್ಳುತ್ತಿದೆ. ಈ ದಿನದಂದು ಹಸ್ತಾ ಮತ್ತು ಚಿತ್ರ ನಕ್ಷತ್ರದ ಮಂಗಳಕರ ಸಂಯೋಜನೆಯು ರೂಪಗೊಳ್ಳುತ್ತಿದೆ. ಇದಲ್ಲದೇ ಹನುಮ ಜನ್ಮದಿನದಂದು ಬೆಳಗ್ಗೆ 5:55 ರಿಂದ 8.40 ರವರೆಗೆ ರವಿಯೋಗ ಕೂಡ ಇರಲಿದೆ. ರವಿಯೋಗದಲ್ಲಿ ಹನುಮನನ್ನು ಪೂಜಿಸುವುದರಿಂದ ಭಾರಿ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಕೂಡ ಇದೆ. ಇದರೊಂದಿಗೆ ಈ ಶುಭ ಯೋಗದಲ್ಲಿ ಇತರ ಶುಭ ಕಾರ್ಯಗಳನ್ನೂ ಸಹ ಮಾಡಬಹುದು.

ಹನುಮ ಜನ್ಮೋತ್ಸವ ಪೂಜಾ ವಿಧಿ
ಹನುಮ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಂಜೆ, ಪೂಜಾ ವೇದಿಕೆಯ ಮೇಲೆ ಕೆಂಪು ಬಟ್ಟೆಯನ್ನು ಇರಿಸಿ ಮತ್ತು ಅದರ ಮೇಲೆ ದಕ್ಷಿಣಾಭಿಮುಖವಾಗಿ ಶ್ರೀಆಂಜನೇಯನ ವಿಗ್ರಹ ಅಥವಾ ಚಿತ್ರವನ್ನು ಪ್ರತಿಷ್ಠಾಪಿಸಿ. ಪೂಜೆ ಮಾಡುವಾಗ ಕೆಂಪು ಬಟ್ಟೆಯನ್ನು ಧರಿಸಿ, ಕೆಂಪು ಆಸನದ ಮೇಲೆ ಕುಳಿತುಕೊಳ್ಳಿ. ಇದರ ನಂತರ, ಪೂರ್ಣ ಶುದ್ಧ ಅಂತಃಕ್ಕರಣದಿಂದ ತುಪ್ಪದ ದೀಪ ಮತ್ತು ಶ್ರೀಗಂಧದ ಧೂಪವನ್ನು ಬೆಳಗಿ. ಕೆಷರಿ ಸಿಂಧೂರವನ್ನು ಮಲ್ಲಿಗೆ ಎಣ್ಣೆಯಲ್ಲಿ ಕರಗಿಸಿ ಹನುಮಂತನಿಗೆ ಅರ್ಪಿಸಿ. ಕೆಂಪು ಹೂವುಗಳನ್ನು ಸಹ ಅರ್ಪಿಸಿ. ಇದರ ನಂತರ, ಕೆಂಪು ಬಣ್ಣದ ಬೂಂದಿ ಮತ್ತು ಲಡ್ಡುಗಳನ್ನು ಅರ್ಪಿಸಿ. ಇದಾದ ನಂತರ, 'ಓಂ ಹಂ ಹನುಮಂತ್ಯೇ ನಮಃ' ಎಂಬ ಈ ಮಂತ್ರವನ್ನು ಪಠಿಸುತ್ತಾ, ದೇವರ ಆರತಿಯನ್ನು ಮಾಡಿ. ನೀವು ಶ್ರೀ ಆಂಜನೇಯನಿಗೆ ಎರಡನೇ ಆರತಿಯನ್ನೂ ಬೆಳಗಬಹುದು.

ಇದನ್ನೂ ಓದಿ-Rahu-Ketu Gochar: ಜೀವನದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಲು ಬರುತ್ತಿದ್ದಾರೆ ರಾಹು ಕೇತು, ನಿಮ್ಮ ಜೀವನದಲ್ಲಗಳಿವೆ ಈ ಬದಲಾವಣೆ

ಧನ ಪ್ರಾಪ್ತಿಗೆ ಈ ಕ್ರಮಗಳನ್ನು ಅನುಸರಿಸಿ
ಹನುಮ ಜನ್ಮೋತ್ಸವದ ದಿನದಂದು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಧನ ಪ್ರಾಪ್ತಿಯಲ್ಲಿರುವ ಅಡೆತಡೆಗಳು ನಿವಾರಣೆಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಹನುಮ ಜನ್ಮೊತ್ಸವದ ದಿನ ಆಂಜನೇಯನಿಗೆ ಜಲ ಅರ್ಪಿಸಿದ ನಂತರ ಪಂಚಾಮೃತವನ್ನು ಅರ್ಪಿಸಿ. ಅಲ್ಲದೆ, ಕೆಷರಿ ಸಿಂಧೂರವನ್ನು ಮಲ್ಲಿಗೆ ಎಣ್ಣೆಯಲ್ಲಿ ನೆನೆಯಿಸಿ ಅದನ್ನು ಅರ್ಪಿಸಿ. ಇದಲ್ಲದೇ ಈ ದಿನ ಬಜರಂಗಬಳಿಗೆ ಕೆಂಪು ಹೂವುಗಳನ್ನು ಮಾತ್ರ ಅರ್ಪಿಸಿ.

ಇದನ್ನೂ ಓದಿ-Solar Eclipse 2022: ಈ ದಿನದಂದು ವರ್ಷದ ಮೊದಲ ಸೂರ್ಯಗ್ರಹಣ, ಈ 4 ರಾಶಿಯವರ ಜೀವನದಲ್ಲಿ ವಿಶೇಷ ಬದಲಾವಣೆ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News