ನವದೆಹಲಿ: Mahashivratri Auspicious Yoga - ಈ ವರ್ಷ ಮಾರ್ಚ್ 1 ರಂದು (When Is Mahashivratri) ಮಹಾಶಿವರಾತ್ರಿಯನ್ನು (Mahashivratri Auspicious Time 2022) ಆಚರಿಸಲಾಗುತ್ತದೆ. ಈ ದಿನದಂದು ಗ್ರಹಗಳ ವಿಶೇಷ ಸಂಯೋಜನೆ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಮಕರ ರಾಶಿಯ 12 ನೇ ಮನೆಯಲ್ಲಿ ಪಂಚಗ್ರಹಿ ಯೋಗವು ರೂಪುಗೊಳ್ಳುತ್ತಿದೆ (Mahashivratri Pancha Grahi Yoga). ಮಂಗಳ ಮತ್ತು ಶನಿಯ ಜೊತೆಗೆ ಶುಕ್ರ, ಬುಧ ಮತ್ತು ಚಂದ್ರ ಕೂಡ ಈ ದಿನ ಮಕರ ರಾಶಿಯಲ್ಲಿ ವಿರಾಜಮಾನರಾಗಿರಲಿದ್ದಾರೆ. ಇದರೊಂದಿಗೆ ಸೂರ್ಯ ಮತ್ತು ಗುರುವಿನ ಸಂಯೋಜನೆ ಕೂಡ ಇರಲಿದೆ. ಇದಲ್ಲದೆ, ರಾಹು ವೃಷಭ ರಾಶಿಯ ನಾಲ್ಕನೇ ಮನೆಯಲ್ಲಿ ಇರಲಿದ್ದು, ಕೇತುವು ವೃಶ್ಚಿಕ ರಾಶಿಯ 10 ನೇ ಮನೆಯಲ್ಲಿ ಇರಲಿದ್ದಾನೆ. ಈ ಕಾರಣದಿಂದಾಗಿ 5 ರಾಶಿಗಳ ಜನರು ಮಹಾಶಿವರಾತ್ರಿಯ ದಿನದಂದು ತುಂಬಾ ಅದೃಷ್ಟವಂತರಾಗಿರಲಿದ್ದಾರೆ. ಈ ರಾಶಿಯ ಸ್ಥಳೀಯರು ಶಿವನ ವಿಶೇಷ ಅನುಗ್ರಹವನ್ನು ಹೊಂದಿರಲಿದ್ದಾರೆ. ಯಾವ ರಾಶಿಯ ಜನರ ಮೇಲೆ ಶಿವರಾತ್ರಿಯ ದಿನ (Mahashivratri Worship Time) ಶಿವನ ವಿಶೇಷ ಕೃಪೆ ಇರಲಿದೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಮೇಷ ರಾಶಿ
ಮೇಷ ರಾಶಿಯವರಿಗೆ ಮಹಾಶಿವರಾತ್ರಿಯು ಅತ್ಯಂತ ಮಂಗಳಕರಗಿರಲಿದೆ. ಈ ದಿನ ಮೇಷ ರಾಶಿಯವರಿಗೆ ಶಿವನ ವಿಶೇಷ ಅನುಗ್ರಹ ಪ್ರಾಪ್ತಿಯಾಗಲಿದೆ. ಇದರೊಂದಿಗೆ, ಇಷ್ಟಾರ್ಥ ಮನೋಕಾಮನೆಗಳು ಪೂರ್ಣಗೊಳ್ಳುವ ಯೋಗ ನಿರ್ಮಾಣಗೊಳ್ಳುತ್ತಿದೆ.


ವೃಷಭ ರಾಶಿ
ವೃಷಭ ರಾಶಿಯವರಿಗೆ ಪುತ್ರ ಸಂತಾನ ಪ್ರಾಪ್ತಿಯಾಗುವ ಸಂಕೆತಗಳಿವೆ. ಅಲ್ಲದೆ ಮಹಾಶಿವರಾತ್ರಿಯ ದಿನದಂದು ಇವರು ವಿಶೇಷ ಲಾಭವನ್ನು ಪಡೆಯಬಹುದು. ಈ ದಿನ ಶಿವಲಿಂಗಕ್ಕೆ ಶಮಿ ಎಲೆ ಮತ್ತು ತುಪ್ಪವನ್ನು ಅರ್ಪಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ.


ಮಿಥುನ ರಾಶಿ
ಮಹಾಶಿವರಾತ್ರಿಯ ದಿನದಂದು, ಮಿಥುನ ರಾಶಿಯ ಜನರು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಇದರ ಜೊತೆಗೆ ಈ ದಿನದಂದು ದೇವಾದಿದೇವ ಮಹಾದೇವನ ವಿಶೇಷ ಆಶೀರ್ವಾದ ಇವರಿಗೆ ಲಭಿಸಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರಲಿದೆ.


ಇದನ್ನೂ ಓದಿ-ಇನ್ನು ಐದು ದಿನಗಳಲ್ಲಿ ಬೆಳಗಲಿದೆ ಈ ರಾಶಿಯವರ ಅದೃಷ್ಟ , ಶನಿ ದೇವ ನೀಡಲಿದ್ದಾನೆ ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ


ಸಿಂಹ ರಾಶಿ 
ಮಹಾಶಿವರಾತ್ರಿಯ ದಿನದಂದು ಸಿಂಹ ರಾಶಿಯವರಿಗೆ ವಿಶೇಷ ಲಾಭ ಸಿಗುತ್ತದೆ. ಈ ದಿನ ಹಸುವಿನ ಹಾಲಿನ ತುಪ್ಪ ಮತ್ತು ಸಕ್ಕರೆಯನ್ನು ನೈವೇದ್ಯ ಮಾಡಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಅಲ್ಲದೆ ಎಲ್ಲಾ ರೀತಿಯ ತೊಂದರೆಗಳು ನಿವಾರಣೆಯಾಗುತ್ತವೆ.


ಇದನ್ನೂ ಓದಿ-ಮಾರ್ಚ್ 15ರವರೆಗೆ ಈ ರಾಶಿಯವರಿಗೆ ಸೋಲೆಂಬುದಿಲ್ಲ, ಮುಟ್ಟಿದ್ದೆಲ್ಲಾ ಚಿನ್ನ


ಕರ್ಕ ರಾಶಿ
ಮಹಾಶಿವರಾತ್ರಿಯ ದಿನ ಕರ್ಕ ರಾಶಿಯವರಿಗೆ ಶಿವನ ಆಶೀರ್ವಾದ ಲಭಿಸಲಿದೆ. ಈ ದಿನ ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಹಾಗೆಯೇ ಶಿವನ ಕೃಪೆಯಿಂದ ಕಷ್ಟಗಳಿಂದ ಮುಕ್ತಿ ದೊರೆಯಲಿದೆ.


ಇದನ್ನೂ ಓದಿ-Health Tips: ರಾತ್ರಿಯಲ್ಲಿ ನಿಮಗೆ ಚೆನ್ನಾಗಿ ನಿದ್ರೆ ಬರುತ್ತಿಲ್ಲವೇ..?


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಜ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ