Mahamrityunjay Mantra: ಮಹಾಮೃತ್ಯುಂಜಯ ಮಂತ್ರ ಪಠಣದಿಂದ ಅದ್ಭುತ ಪ್ರಯೋಜನ
ಮಹಾಮೃತ್ಯುಂಜಯ ಮಂತ್ರವು ತುಂಬಾ ಅದ್ಭುತವಾಗಿದೆ. ಭೋಲೆನಾಥನ ಆಶೀರ್ವಾದ ಪಡೆಯಲು ಇದರ ಪಠಣ ವಿಶೇಷವಾಗಿದೆ. ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವಾಗ ಎಂದಿಗೂ ನೆಲದ ಮೇಲೆ ಕುಳಿತುಕೊಳ್ಳಬಾರದು.
ನವದೆಹಲಿ: ಮಹಾಮೃತ್ಯುಂಜಯ ಮಂತ್ರವು ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ಮಂತ್ರವಾಗಿದೆ. ಜಪ-ತಪ, ಮನವ ನಿಗ್ರಹಿಸಲಿರುವ ಸಾಧನೆಯ ಮಾರ್ಗಗಳು, ಗಂಭೀರ ಕಾಯಿಲೆಗಳಿಂದ ಮುಕ್ತಿ ಮತ್ತು ಅಕಾಲಿಕ ಮರಣದ ಭಯವನ್ನು ತೊಡೆದುಹಾಕಲು ಮಹಾಮೃತ್ಯುಂಜಯ ಮಂತ್ರ ಜಪಿಸುವ ಮೂಲಕ ಶಿವನನ್ನು ಸ್ತುತಿಸಲಾಗುತ್ತದೆ.
ಅಕಾಲಿಕ ಮರಣದ ಭಯ ಹೊಂದಿದ್ದರೆ ಅಥವಾ ದೀರ್ಘಕಾಲದ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದರೆ ತಪ್ಪದೇ ಮಹಾಮೃತ್ಯುಂಜಯ ಮಂತ್ರ ಪಠಿಸಬೇಕೆಂದು ಶಿವ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಭಗವಾನ್ ಶಿವ ಅತ್ಯಂತ ಸಂತೋಷಗೊಳ್ಳುತ್ತಾನೆ. ಗ್ರಹಗಳ ಸಮಸ್ಯೆಯಿದ್ದವರೂ ಸಹ ಮಹಾಮೃತ್ಯುಂಜಯ ಮಂತ್ರ ಪಠಿಸಬಹುದು.
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಹಾಮೃತ್ಯುಂಜಯ ಮಂತ್ರವನ್ನು ದುಷ್ಟ ಗ್ರಹಗಳ ದುಷ್ಪರಿಣಾಮಗಳನ್ನು ತೊಡೆದುಹಾಕಲು ಮತ್ತು ಉತ್ತಮ ಜೀವನಕ್ಕಾಗಿ ಪಠಿಸಲಾಗುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಮರಣದ ಸಮೀಪಕ್ಕೆ ಬಂದರೂ ವಿಜಯವನ್ನು ಸಾಧಿಸಬಹುದು ಎಂದು ನಂಬಲಾಗಿದೆ. ಇದರಲ್ಲಿ ವಿಶೇಷವಾಗಿ ಶಿವನ ಸ್ತುತಿಯನ್ನು ಜಪಿಸಲಾಗುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿರಿ.
ಇದನ್ನೂ ಓದಿ: Shani Vakri 2022 : ಶನಿಯ ಹಿಮ್ಮುಖ ಚಲನೆಯಿಂದ ಈ ರಾಶಿಯವರಾಗುತ್ತಾರೆ ಶ್ರೀಮಂತರು!
ಮಹಾಮೃತ್ಯುಂಜಯ ಮಂತ್ರ:-
‘‘ಓಂ ತ್ರಯಂಬಕಂ ಯಜಾಮಹೇ
ಸುಗಂಧಿಂ ಪುಷ್ಟಿವರ್ಧನಂ
ಉರ್ವಾರುಕಮೇವ ಬಂಧನಾನ್
ಮೃತ್ಯೊರ್ಮುಕ್ಷೀಯ ಮಾಂಮೃತಾತ್’’
ಮಹಾಮೃತ್ಯುಂಜಯ ಮಂತ್ರದ ಪ್ರಯೋಜನಗಳು:-
ಅಕಾಲಿಕ ಮರಣದ ಭಯವು ದೂರವಾಗುತ್ತದೆ: ಮಹಾಮೃತ್ಯುಂಜಯ ಮಂತ್ರವು ಶಿವನ ಮಂತ್ರವಾಗಿದೆ. ಪ್ರತಿಯೊಬ್ಬರೂ ಭೂಮಿಯ ಮೇಲೆ ಹೆಚ್ಚು ಕಾಲ ಬದುಕಬೇಕೆಂದು ಬಯಸುತ್ತಾರೆ. ಗರಿಷ್ಠ ಸಮಯದವರೆಗೆ ಕುಟುಂಬದೊಂದಿಗೆ ಇರಲು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಅಕಾಲಿಕ ಮರಣದ ಭಯವು ದೂರವಾಗುತ್ತದೆ.
ಉತ್ತಮ ಆರೋಗ್ಯಕ್ಕಾಗಿ: ಉತ್ತಮ ಆರೋಗ್ಯವು ಪ್ರತಿಯೊಬ್ಬ ವ್ಯಕ್ತಿಯ ಜೀವನದ ದೊಡ್ಡ ಆಸ್ತಿಯಾಗಿದೆ. ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಗೆ ಗಂಭೀರ ಕಾಯಿಲೆಗಳು ಬರುವುದಿಲ್ಲವೆಂದು ನಂಬಲಾಗಿದೆ. ಅಲ್ಲದೆ ರೋಗಗಳು ನಾಶವಾಗುತ್ತವೆ. ನಿಯಮಿತವಾದ ಪಠಣದಿಂದ ವ್ಯಕ್ತಿಯು ಆರೋಗ್ಯವಾಗಿರುತ್ತಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Ketu Gochar 2022: 2023ರವರೆಗೆ ಈ ರಾಶಿಗಳ ಜಾತಕದವರಿಗೆ ಅಪಾರ ಲಾಭ ನೀಡಲಿದ್ದಾನೆ ರಾಹು
ಸಂಪತ್ತು ಮತ್ತು ಸುಖ ಜೀವನಕ್ಕಾಗಿ: ಈ ಮಂತ್ರವನ್ನು ಪಠಿಸುವುದರಿಂದ ಯಾವುದೇ ಒಬ್ಬ ವ್ಯಕ್ತಿಯು ಆರೋಗ್ಯಕರ ದೇಹವನ್ನು ಪಡೆಯುತ್ತಾನೆ. ಸಾಕಷ್ಟು ಸಂಪತ್ತು, ವೈಭವ, ಸಂತೋಷ ಮತ್ತು ಅನುಕೂಲವನ್ನು ಪಡೆಯುತ್ತಾನೆ. ಇದಲ್ಲದೆ ಭೌತಿಕ ಸುಖಗಳು ಪ್ರಾಪ್ತಿಯಾಗುತ್ತವೆ. ಭಗವಾನ್ ಶಿವನು ಪ್ರಸನ್ನನಾಗುವುದರಿಂದ ವ್ಯಕ್ತಿಗೆ ಎಂದಿಗೂ ಹಣ ಮತ್ತು ಆಹಾರದ ಕೊರತೆ ಕಾಡುವುದಿಲ್ಲವೆಂದು ನಂಬಲಾಗಿದೆ.
ಸಮಾಜದಲ್ಲಿ ಉನ್ನತ ಸ್ಥಾನ ಮತ್ತು ಗೌರವ: ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಿಯಮಿತವಾಗಿ ಶಿವನನ್ನು ಪೂಜಿಸುವುದರಿಂದ ಮತ್ತು ಮಹಾಮೃತ್ಯುಂಜಯವನ್ನು ಪಠಿಸುವುದರಿಂದ ವ್ಯಕ್ತಿಯು ಸಮಾಜದಲ್ಲಿ ಉನ್ನತ ಸ್ಥಾನ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾನೆ.
ಮಕ್ಕಳನ್ನು ಪಡೆಯಲು: ಮಕ್ಕಳನ್ನು ಪಡೆಯಲು ನಿಯಮಿತವಾಗಿ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕೆಂದು ನಂಬಲಾಗಿದೆ . ಇದನ್ನು ಮಾಡುವುದರಿಂದ ಯಾವುದೇ ಒಬ್ಬ ವ್ಯಕ್ತಿ ಎಂದಿಗೂ ಮಕ್ಕಳ ಸಂತೋಷದಿಂದ ವಂಚಿತನಾಗುವುದಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.