ಬೆಂಗಳೂರು: ಇಂದು ಮಹಾಶಿವರಾತ್ರಿ (Mahashivaratri). ಮಹಾದೇವನ ಆರಾಧನೆಗೆ ಪವಿತ್ರ ದಿನ. ಹಲವು ಪವಿತ್ರ ಸಂಯೋಗದ ಶುಭ ಮುಹೂರ್ತ ಇಂದು ಶಿವಪೂಜೆಗೆ (Shiva pooja) ಒದಗಿ ಬಂದಿದೆ. ಇವತ್ತಿನ ಪ್ರತಿಕ್ಷಣವೂ ಶಿವಪೂಜೆಗೆ ಅತ್ಯಂತ ಪ್ರಶಸ್ತ. ಹೀಗಿರುವಾಗ ಶಿವರಾತ್ರಿ ದಿನ ನಾವು ತಪ್ಪಿಯೂ ಈ ಹತ್ತು ತಪ್ಪು ಮಾಡಬಾರದು. ಧರ್ಮ ಪರಂಪರೆಯ ಹಿರಿಯರು ಹೇಳಿರುವ ಪ್ರಕಾರ ಶಿವರಾತ್ರಿಯ 


COMMERCIAL BREAK
SCROLL TO CONTINUE READING

ಮಹಾಪರ್ವದಂದು ಈ ಹತ್ತು ತಪ್ಪು ಮಾಡಲೇಬಾರದು. 
1. ಇವತ್ತಿನ ದಿನ ಸ್ನಾನ ಮಾಡದೇ ಏನನ್ನೂ ತಿನ್ನಬಾರದು. ವೃತ (Fast) ಮಾಡದೇ ಹೋದರೂ ಕೂಡಾ ಸ್ನಾನ ಮಾಡಿಯೇ ಊಟ ಮಾಡಿ.
2. ಮಹಾಶಿವರಾತ್ರಿ (Mahashivaratri) ದಿನ ಕಪ್ಪು ಬಣ್ಣದ ಬಟ್ಟೆ ಧರಿಸಬಾರದಂತೆ. ಮಹಾಶಿವರಾತ್ರಿ ದಿನ ಕಪ್ಪು ಬಣ್ಣದ ಬಟ್ಟೆ ಧರಿಸಿದರೆ ಅದು ಅಶುಭದ ಸಂಕೇತ ಎಂದು ಹೇಳಲಾಗುತ್ತದೆ. 
3. ಇಂದು ಶಿವಲಿಂಗದ (Shivalinga) ಮೇಲೆ ಅರ್ಪಿಸಿದ ಪ್ರಸಾದ ತಿನ್ನಬಾರದು. ಇದರಿಂದ ದೌರ್ಭಾಗ್ಯ ಬೆನ್ನುಹಿಡಿಯುತ್ತದಂತೆ ಹಾಗೂ ಧನ ಹಾನಿ ಆಗುತ್ತದೆ ಎಂದು ನಂಬುತ್ತಾರೆ. 


ಇದನ್ನೂ ಓದಿ : Mahashivaratri 2021: ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವುದರ ಹಿಂದಿನ ಮಹತ್ವ ಏನೆಂದು ತಿಳಿಯಿರಿ


4. ತಪ್ಪಿಯೂ ಶಿವಲಿಂಗಕ್ಕೆ ತುಳಸಿ (Tulsi) ಎಲೆ ಅರ್ಪಿಸಬೇಡಿ. ಶಿವಲಿಂಗಕ್ಕೆ ಪಾಶ್ಚರೈಸ್ಡ್ ಹಾಲು ಅರ್ಪಿಸಬೇಡಿ. ಬಿಸಿ ಮಾಡಿದ ಹಾಲಿನ ಅಭಿಷೇಕ ಮಾಡಬೇಡಿ. ಬೆಳ್ಳಿ ಅಥವಾ ಕಂಚಿನ ಪಾತ್ರೆಯಿಂದ ಶಿವನಿಗೆ ಕ್ಷೀರಾಭಿಷೇಕ ಮಾಡಿ. ಸ್ಟೀಲ್ ಪಾತ್ರೆ ಬಳಸಬೇಡಿ.
5. ಶಿವನಿಗೆ ತಪ್ಪಿಯೂ ಕೇದಗೆ ಮತ್ತು ಚಂಪಕ ಪುಷ್ಪಗಳನ್ನು ಅರ್ಪಿಸಬೇಡಿ. ಪುರಾಣಗಳ ಪ್ರಕಾರ ಈ ಎರಡೂ ಹೂವುಗಳು ಶಿವನಿಂದ (Lord Shiva) ಶಾಪಗ್ರಸ್ತವಾಗಿದೆಯಂತೆ.
6. ಶಿವರಾತ್ರಿಯ ವ್ರತ ಬೆಳಗ್ಗೆ ಶುರುವಾಗಿ ಮಾರನೆ ದಿನ ಬೆಳಗ್ಗೆ ಕೊನೆಯಾಗುತ್ತದೆ. ವ್ರತಧಾರಿಗಳು ಕೇವಲ ಹಾಲು ಹಣ್ಣು (Fruits) ತಿನ್ನಬಹುದು. ಸೂರ್ಯಾಸ್ತದ ಬಳಿಕ ಏನನ್ನೂ ತಿನ್ನ ಬಾರದು. 
7. ಶಿವಪೂಜೆಯ ಅಕ್ಷತೆ ಪ್ರಸಾದಕ್ಕೆ ತಪ್ಪಿಯೂ ಪುಡಿ ಅಕ್ಕಿ (Rice) ಬಳಸಬೇಡಿ. ಇಡೀ ಅಕ್ಕಿಯೇ ಇರಬೇಕು. ಅಕ್ಷತ ಅಂದರೆ ಕ್ಷತ ಆಗದ್ದು. ಅಂದರೆ ಇಡೀ. ಪೂರ್ಣತ್ವ ಇರುವಂತದ್ದು.  ಹಾಗಾಗಿ ಮಹಾಶಿವನಿಗೆ ಅಕ್ಷತೆ ಕಾಳಿನ ಅಕ್ಕಿ ಸಂಪೂರ್ಣ ಇಡೀ ಕಾಳು ಇರುವಂತೆ ನೋಡಿಕೊಳ್ಳಿ.


ಇದನ್ನೂ ಓದಿ : Mahashivaratri 2021: ಮಹಾಶಿವರಾತ್ರಿಯಂದು ಬುಧನ ರಾಶಿ ಪರಿವರ್ತನೆ, ಬುಧಾದಿತ್ಯ ಯೋಗ ನಿರ್ಮಾಣ


8. ಶಿವಲಿಂಗಕ್ಕೆ ಮೊದಲು ಪಂಚಾಮೃತ ಅರ್ಪಿಸಿ. ಹಾಲು (Milk), ಗಂಗಾಜಲ, ಕೇಸರಿ, ಜೇನುತುಪ್ಪ (Honey) ಮತ್ತು ಶುದ್ದ ನೀರಿನಿಂದ ಮಾಡಿರಬೇಕು ಪಂಚಾಮೃತ. ನಾಲ್ಕು ಪ್ರಹರದ ಪೂಜೆ ಕೈಗೊಳ್ಳುವವರು ಮೊದಲ ಪ್ರಹರದಲ್ಲಿ ನೀರು, ಎರಡನೇ ಪ್ರಹರದಲ್ಲಿ ಮೊಸರು, ಮೂರನೇ ಪ್ರಹರದಲ್ಲಿ ತುಪ್ಪ, ನಾಲ್ಕನೇ ಪ್ರಹರದಲ್ಲಿ ಜೇನುತುಪ್ಪ ಅರ್ಪಿಸಬೇಕು. 
9. ಶಿವರಾತ್ರಿಯಂದು ಮೂರುಎಲೆಯ ಬಿಲ್ವ ಪತ್ರೆ ಶಿವನಿಗೆ ಅರ್ಪಿಸಿ. ಕ್ಷತ ಬಿಲ್ವಪತ್ರೆ ಅಂದರೆ ಹರಿದ, ತುಂಡಾದ ಬಿಲ್ವ ಪತ್ರ ಶಿವನಿಗೆ ಅರ್ಪಿಸಬಾರದು.
10. ತಪ್ಪಿಯೂ ಶಿವಲಿಂಗಕ್ಕೆ ಕುಂಕುಮ ಲೇಪಿಸಬೇಡಿ. ಶಿವಲಿಂಗಕ್ಕೆ ಚಂದನದ ತಿಲಕ, ನಾಮ ಇಡಿ. ಬೇಕಾದರೆ, ಪಾರ್ವತಿ ಮತ್ತು ಗಣೇಶ ವಿಗ್ರಹಗಳಿಗೆ ಕುಂಕುಮ ತಿಲಕ ಇಡಬಹುದು.


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.